ಸಸ್ಯಾಧರಿತ ಮೊಟ್ಟೆ ಸಂಶೋಧಿಸಿದ ಐಐಟಿ ದೆಹಲಿ ಪ್ರೊಫೆಸರ್‌ಗೆ ಜಾಗತಿಕ ಪ್ರಶಸ್ತಿ

By Suvarna News  |  First Published Dec 22, 2020, 3:54 PM IST

ಮೊಟ್ಟೆ ವೆಜ್ಜಾ, ನಾನ್ ವೆಜ್ಜಾ ಎಂಬ ಪ್ರಶ್ನೆ ಬಹಳ ಕಾಲದಿಂದಲೂ ಇದೆ. ಕೆಲವುರ ಅದು ಸಸ್ಯಾಹಾರಿ ಎಂದರೆ ಮತ್ತೆ ಕೆಲವರು ಮಾಂಸಹಾರಿ ಎನ್ನುತ್ತಾರೆ. ಅದೆನೇ ಇರಲಿ, ದಿಲ್ಲಿ ಐಐಟಿ ಪ್ರೊಫೆಸರ್ ಒಬ್ಬರು ತಯಾರಿಸಿದ ಸಸ್ಯಾಧರಿತ ವೆಜ್ ಮೊಟ್ಟೆಗೆ ವಿಶ್ವಸಂಸ್ಥೆಯ ಪ್ರಶಸ್ತಿ ದೊರೆತಿದೆ.
 


ಮೊಟ್ಟೆ ಸಸ್ಯಹಾರಿನೋ? ಮಾಂಸಾಹಾರಿನೋ? ಅನ್ನೋ ಗೊಂದಲ ಹಾಗೇ ಇದೆ. ಆದ್ರೆ ಸಸ್ಯಹಾರಿ ಪದಾರ್ಥಗಳಲ್ಲಿರೋ ಗುಣಗಳು ಮೊಟ್ಟೆಯಲ್ಲಿ ಯಥೇಚ್ಛವಾಗಿರೋದ್ರಿಂದ ಅದನ್ನು ಸಸ್ಯಹಾರಿ ಅಂತಾ ವಿಜ್ಟಾನಿಗಳು, ಸಂಶೋಧನೆಗಳು ಹೇಳುತ್ತವೆ. ವಾದ-ವಿವಾದಗಳು ಏನೇ ಇರಲಿ, ಮೊಟ್ಟೆಯಲ್ಲಿ ಉತ್ತಮ ಪೋಷಕಾಂಶಗಳು ಇರೋದಂತೂ ಸತ್ಯ. ಕೆಲವರಿಗೆ ಮೊಟ್ಟೆ ತಿನ್ನೋಕೆ ಅಷ್ಟೊಂದು ಇಷ್ಟವಿರಲ್ಲ. ಅಂಥವರಿಗಾಗೇ ಐಐಟಿ ಸಂಶೋಧಕರು ಸಸ್ಯ ಆಧಾರಿತ ಮೊಟ್ಟೆ ಕಂಡು ಹಿಡಿದಿದ್ರು. ಈ ಸಸ್ಯ ಆಧರಿತ ಮೊಟ್ಟೆ ನೋಡೋಕೆ ಥೇಟ್ ಕೋಳಿ ಮೊಟ್ಟೆಯಂತೆ ಕಾಣುತ್ತೆ. ಇದರಿಂದ ಆಮ್ಲೇಟ್, ಎಗ್ ಫ್ರೈ, ಎಗ್ ಮಸಾಲಾ, ಎಗ್ ಕರ್ರಿ - ಹೀಗೆ ಥೇಟ್ ಮೊಟ್ಟೆಯಲ್ಲಿ ತಯಾರಿಸೋ ಎಲ್ಲ ಖಾದ್ಯಗಳನ್ನ ತಯಾರಿಸಬಹುದು. 

ಶ್ರೀನಗರದ ಅಮರ್ ಸಿಂಗ್ ಕಾಲೇಜ್‌‌ಗೆ ಯುನೇಸ್ಕೋ ಪ್ರಶಸ್ತಿ

Latest Videos

undefined

ಐಐಟಿಯ ಈ ಹೊಸ ಅನ್ವೇಷಣಗೆ ಪ್ರಶಸ್ತಿಯೊಂದು ಒಲಿದು ಬಂದಿದೆ. ಈ ಸಸ್ಯ ಆಧರಿತ ಮೊಟ್ಟೆ ಅಭಿವೃದ್ಧಿಪಡಿಸಿದ ಐಐಟಿ ದೆಹಲಿಯ ಗ್ರಾಮೀಣ ಅಭಿವೃದ್ಧಿ ಹಾಗೂ ತಂತ್ರಜಾನ ವಿಭಾಗದ ಪ್ರೊ. ಕಾವ್ಯ ದಶೋರಾಗೆ ಯುಎನ್‌ಡಿಪಿ ಪ್ರಶಸ್ತಿ ಅರಸಿ ಬಂದಿದೆ. ಯುಎನ್ ಡಿಪಿ (ಯುನೈಟೆಡ್ ನೇಷನ್ ಡೆವಲಪ್‌ಮೆಂಟ್ ಪ್ರೊಗ್ರಾಂ) ಆಯೋಜಿಸಿದ್ದ Innovate4SDG ಸ್ಪರ್ಧೆಯಲ್ಲಿ ಈ ಮೊಟ್ಟೆಗೆ ಮೊದಲ ಪ್ರಶಸ್ತಿ ಬಂದಿದೆ.  ಈ ಅವಾರ್ಡ್‌ನ ಮೊತ್ತ ೫ ಸಾವಿರ ಡಾಲರ್ ಅಂದ್ರೆ ಭಾರತದ ಕರೆನ್ಸಿಯಲ್ಲಿ ಅಂದಾಜು   3.6 ಲಕ್ಷ ರೂಪಾಯಿ ಆಗುತ್ತದೆ.. 

ಈ ಮೊಟ್ಟೆಯ ಬೆಳವಣಿಗೆಯು ಆಹಾರ-ನಿರ್ದಿಷ್ಟ, ಆರೋಗ್ಯ ಪ್ರಜ್ಞೆ, ಹಾಗೂ ಸಸ್ಯಾಹಾರಿ ಜನರ ಪ್ರೋಟೀನ್ ಅಗತ್ಯಗಳನ್ನು ಪೂರೈಸುತ್ತದೆ ಎಂದು ಐಐಟಿ-ದೆಹಲಿ ಹೇಳಿಕೊಂಡಿದೆ. ಈ ಆವಿಷ್ಕಾರವು ಎಸ್‌ಡಿಜಿ 2 ಮತ್ತು 3 ಅಂದ್ರೆ  ಅನ್ನು ಉತ್ತಮ ಆರೋಗ್ಯ ಹಾಗೂ ಹಸಿವನ್ನೂ ದೂರ ಮಾಡುತ್ತದೆ. 

ಮೊಟ್ಟೆ, ಮೀನು ಮತ್ತು ಕೋಳಿಯನ್ನು ಹೋಲುವ ಸಸ್ಯ ಆಧಾರಿತ ಆಹಾರ ಇದಾಗಿದೆ. ಅಪೌಷ್ಟಿಕತೆ ಮತ್ತು ಜನರಿಗೆ ಶುದ್ಧ ಪ್ರೋಟೀನ್ ಆಹಾರಕ್ಕಾಗಿ ದೀರ್ಘಕಾಲದ ಯುದ್ಧವನ್ನು ಪರಿಹರಿಸುವ ಉದ್ದೇಶದಿಂದ ಈ ಮೊಟ್ಟೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಣಕು ಮೊಟ್ಟೆಯನ್ನು ಅತ್ಯಂತ ಸರಳವಾದ ಕೃಷಿ ಆಧಾರಿತ ಬೆಳೆಯ ಪ್ರೋಟೀನ್‌ಗಳಿಂದ ಅಭಿವೃದ್ಧಿಪಡಿಸಲಾಗಿದೆ. ಪೌಲ್ಟ್ರಿ ಪ್ರೊಫೈಲ್‌ನಲ್ಲಿ ಬೆಳೆದ ಕೋಳಿ ಮೊಟ್ಟೆಯಂತೆ ಇದು ಕಾಣುತ್ತದೆ ಮತ್ತು ಅದೇ ರೀತಿ ರುಚಿ ನೀಡುತ್ತದೆ ಅಂತಾರೆ ಪ್ರೊಫೆಸರ್ ಕಾವ್ಯಾ ದಶೋರಾ.

ಮುಂದಿನ ಕೆಲವು ತಿಂಗಳಲ್ಲಿ ಫೋನ್‌ಪೇಯಿಂದ 700 ಉದ್ಯೋಗ

ಮೊಟ್ಟೆಯಷ್ಟೇ ಅಲ್ಲ, ಐಐಟಿ ದೆಹಲಿಯ ಈ ವಿಜ್ಞಾನಿ,  ಹಣ್ಣುಗಳು ಮತ್ತು ತರಕಾರಿಗಳ ಸಸ್ಯ ಮೂಲಗಳಿಂದ ಕೋಳಿ ಮತ್ತು ಮೀನು ಮಾಂಸವನ್ನ ಅಭಿವೃದ್ಧಿಪಡಿಸಿದ್ದಾರೆ. ನೋಟ, ರುಚಿ, ಕಚ್ಚುವಿಕೆಯ ಗಾತ್ರ, ವಿನ್ಯಾಸ, ಸುವಾಸನೆ, ಪರಿಮಳ, ಶೆಲ್ಫ್ ಜೀವನ, ಪೌಷ್ಠಿಕಾಂಶದ ವಿವರ ಮತ್ತು ಗ್ರಾಹಕರ ಆದ್ಯತೆಗೆ ತಕ್ಕಂತೆ ಈ ಉತ್ಪನ್ನಗಳನ್ನ ಅಭಿವೃದ್ಧಿಪಡಿಸಲಾಗಿದೆ.

ನವದೆಹಲಿಯ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ರಾಯಭಾರ ಕಚೇರಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಕ್ರಿಶ್ಚಿಯನ್ ಹೈರೋನಿಮಸ್ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯರಾಘವನ್ ಅವರು ಈ ಪ್ರಶಸ್ತಿಯನ್ನು ಪ್ರೊ. ಕಾವ್ಯಾ ದಶೋರಾಗೆ ಆನ್‌ಲೈನ್‌ನಲ್ಲಿ ಪ್ರದಾನ ಮಾಡಿದರು.

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!

click me!