ಕೇಂಬ್ರಿಡ್ಜ್ ವಿವಿಯಲ್ಲಿ ಒಂದು ವರ್ಷ ಉಚಿತ ಕೋರ್ಸ್!

By Suvarna NewsFirst Published Jan 16, 2021, 4:41 PM IST
Highlights

ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಆಕ್ಸ್ಫರ್ಡ್ ವಿವಿಯಲ್ಲಿ ಓದಬೇಕು ಅನ್ನೋದು ಅದೆಷ್ಟೋ ವಿದ್ಯಾರ್ಥಿಗಳ ಕನಸು. ಆದ್ರೆ ಎಲ್ಲರಿಗೂ ಅದು ಸಾಧ್ಯವಾಗಲ್ಲ. ವಿಶ್ವಪ್ರಸಿದ್ಧ ಈ ಶೈಕ್ಷಣಿಕ ಸಂಸ್ಥೆಯಲ್ಲಿ ಓದಬೇಕು ಅನ್ನೋ ಆಸೆ ಈಡೇರಿಸಿಕೊಳ್ಳಲು ಸದಾವಕಾಶವೊಂದು ಕೂಡಿ ಬಂದಿದೆ. ಇಂಗ್ಲೆಂಡ್‌ನ ವಿದ್ಯಾರ್ಥಿಗಳು ವಿವಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದಾಗಿದೆ.

ಅನಾನುಕೂಲತೆ ಹೊಂದಿರೋ ವಿದ್ಯಾರ್ಥಿಗಳಿಗೆ ನೆರವಾಗಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮುಂದಾಗಿದೆ. ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಒಂದು ವರ್ಷದ ಕೋರ್ಸ್ ಆರಂಭಿಸಿದೆ. ವೈವಿಧ್ಯತೆಯ ಕಾರ್ಯಸೂಚಿಯನ್ನು ಪರಿಹರಿಸಲು ಹೊಸ ಮಾರ್ಗವಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಇಂಗ್ಲೆಂಡ್ನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಅನಾನುಕೂಲತೆಯ ಹಿನ್ನೆಲೆಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಒಂದು ವರ್ಷದ ಉಚಿತ ಫೌಂಡೇಶನ್ ವರ್ಷದ ಕೋರ್ಸ್ ಅನ್ನು ಪ್ರಾರಂಭಿಸಿದೆ.

ಈ ಒಂದು ವರ್ಷದ ಕೋರ್ಸ್,  ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗುವ ಸಾಮರ್ಥ್ಯವನ್ನು ಹೊಂದಿರುವ ಅರ್ಜಿದಾರರನ್ನ ಗುರಿಯಾಗಿಸಿಕೊಂಡಿದೆ. ಹೆಚ್ಚಿನ ಕಲಿಕೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಈ ವರ್ಷದ ಕೋರ್ಸ್ ನೆರವಾಗಲಿದೆ. ಜೊತೆಗೆ ವಿಶ್ವವಿದ್ಯಾನಿಲಯದಲ್ಲಿ ನೇರವಾಗಿ ಪದವಿಪೂರ್ವ ಪದವಿ ಪಡೆಯಲು ಅವಕಾಶ ಕಲ್ಪಿಸುತ್ತೆ ಎಂದು ವಿಶ್ವವಿದ್ಯಾಲಯ ಹೇಳುತ್ತದೆ.

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಖಾಲಿ ಹುದ್ದೆಗೆ ನೇಮಕ, ಜ.24 ಕೊನೇ ದಿನ

ಕೇಂಬ್ರಿಡ್ಜ್ ಫೌಂಡೇಶನ್ ವರ್ಷದ ಪ್ರಾರಂಭವು ಕೇಂಬ್ರಿಡ್ಜ್ ಅನ್ನು ಅಭ್ಯರ್ಥಿಗಳ ಹೊಸ ಕ್ಷೇತ್ರಕ್ಕೆ ತೆರೆದು ಜೀವನವನ್ನು ಪರಿವರ್ತಿಸುತ್ತದೆ’ ಅಂತಾರೆ ಕೇಂಬ್ರಿಡ್ಜ್ ವೈಸ್ ಚಾನ್ಸಲರ್ ಪ್ರೊ.ಸ್ಟೀಫನ್ ಟೂಪೆ. ಹಲವಾರು ಹಿನ್ನೆಲೆಗಳನ್ನು ಹೊಂದಿರೋ ವಿದ್ಯಾರ್ಥಿಗಳನ್ನು ಸೆಳೆಯಲಾಗುವುದು. ಇದರಿಂದಾಗಿ ಅವರ ಸನ್ನಿವೇಶಗಳು ಹಾಗೂ ಅವರ ಶೈಕ್ಷಣಿಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ವೈಯಕ್ತಿಯ ಬೋಧನೆ ವಿಧಾನದಿಂದ ವಿದ್ಯಾರ್ಥಿಗಳು ಬಹಳಷ್ಟು ಪ್ರಯೋಜನ ಪಡೆಯುತ್ತಾರೆ. ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮತ್ತು ತಿಳುವಳಿಕೆ ಬೆಳೆಯುತ್ತದೆ.  ಅವರು ನಮ್ಮ ಸಮುದಾಯವನ್ನು ಸೇರಿಕೊಳ್ಳೋದ್ರಿಂದ ನಾವು ಮತ್ತಷ್ಟು ವೈವಿಧ್ಯಮಯ ಪ್ರಯೋಜನ ಪಡೆಯಬಹುದು ಅಂತಾರೆ ಪ್ರೊ. ಟೂಪೆ.

ದಾನಿಗಳಾದ ಕ್ರಿಸ್ಟಿನಾ ಮತ್ತು ಪೀಟರ್ ಡಾಸನ್‌ರಿಂದ 5 ಮಿಲಿಯನ್ ಪೌಂಡ್ ಉಡುಗೊರೆ ನೀಡಿದ ಪರಿಣಾಮವಾಗಿ ಈ ಹೊಸ ಕೋರ್ಸ್ ಸೇರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವರ್ಷದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಜನವರಿ 2022 ರೊಳಗೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರವೇಶ ಸೇವೆ (ಯುಸಿಎಎಸ್) ಮೂಲಕ ನೇರವಾಗಿ ಅರ್ಜಿ ಸಲ್ಲಿಸಿದ ನಂತರ, ಅವರ ಅರ್ಹತೆಯನ್ನು ಗುರುತಿಸಲು ಸಂದರ್ಶನಗಳು ಮತ್ತು ಮೌಲ್ಯಮಾಪನಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್ 2022 ರಲ್ಲಿ ಫೌಂಡೇಷನ್ ಕೋರ್ಸ್ಗಾಗಿ 50 ವಿದ್ಯಾರ್ಥಿಗಳು ಕೇಂಬ್ರಿಡ್ಜ್‌ಗೆ ಆಗಮಿಸಲಿದ್ದಾರೆ.

ವಿದ್ಯಾರ್ಥಿಗೆ ಸ್ಕೂಲ್‌ಗೆ ಲೇಟ್ ಆಗುತ್ತೆ ಅಂತ ಬಸ್ ಟೈಮಿಂಗ್ ಬದಲಿಸಿದ್ರು!

ಬೇರೆಯವರ ಆರೈಕೆಯಲ್ಲಿರುವವರು, ತಮ್ಮ ಕುಟುಂಬಗಳಿಂದ ದೂರವಿರುವವರು ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ಗಮನಾರ್ಹವಾದ ಕಲಿಕೆಯ ಅವಧಿಯನ್ನು ತಪ್ಪಿಸಿಕೊಂಡವರು ಫೌಂಡೇಶನ್ ವರ್ಷದ ಶಿಕ್ಷಣವನ್ನು ಪಡೆಯಬಹುದಾಗಿದೆ. ವಿಶ್ವವಿದ್ಯಾಲಯ ಪ್ರಮಾಣಿತ ಪ್ರವೇಶ ಪ್ರಕ್ರಿಯೆಯ ಮೂಲಕ ಕೇಂಬ್ರಿಡ್ಜ್‌ನಲ್ಲಿ ಪದವಿ ಪೂರ್ವ ಅಧ್ಯಯನಕ್ಕೆ ಸ್ಪರ್ಧಾತ್ಮಕ ಅಪ್ಲಿಕೇಶನ್ ಸಲ್ಲಿಸಬಹುದು. ಸೂಕ್ತ ಅರ್ಹತೆಗಳಿದ್ರೂ ಕೇಂಬ್ರಿಡ್ಜ್ ವಿವಿಗೆ ಪ್ರವೇಶಿಸಲು ಸಾಧ್ಯವಾಗದ ವಿದ್ಯಾರ್ಥಿಗಳು, ಕಡಿಮೆ-ಆದಾಯದ ಹಿನ್ನೆಲೆಯುಳ್ಳವರು ಮತ್ತು ಕೆಲ ಶಾಲೆಗಳಲ್ಲಿ ಆಯ್ದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ  ಕಳುಹಿಸಬಹುದು.

ವರ್ಷದ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ CertHE ಅರ್ಹತೆ ಪಡೆಯುತ್ತಾರೆ. ಸೂಕ್ತವಾದ ಸಾಧನೆಯೊಂದಿಗೆ ಕೇಂಬ್ರಿಡ್ಜ್‌ನಲ್ಲಿನ ಕಲೆ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ಮತ್ತೆ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲದೆ ಪ್ರಗತಿ ಸಾಧಿಸಬಹುದು. ಕೇಂಬ್ರಿಡ್ಜ್‌ನಲ್ಲಿ ಪದವಿಪೂರ್ವ ಅಧ್ಯಯನವನ್ನು ಮುಂದುವರಿಸಲು ಇಚ್ಛಿಸದಿದ್ದಲ್ಲಿ ಅಥವಾ ಅಗತ್ಯ ಮಟ್ಟದ ಸಾಧನೆಯನ್ನು ಪೂರೈಸದಿದ್ದಲ್ಲಿ ಪರ್ಯಾಯ ವಿಶ್ವವಿದ್ಯಾಲಯ ಸೇರಲು ವಿದ್ಯಾರ್ಥಿಗಳಿಗೆ ಸಹಕರಿಸಲಾಗುತ್ತದೆ.

ರೆಸ್ಯೂಮ್ ಮತ್ತು ಸಿ.ವಿ.ಎರಡೂ ಒಂದೆನಾ OR ಬೇರೆನಾ?

ರಾಜ್ಯ-ಅನುದಾನಿತ ಶಾಲೆಗಳು, ಯುಕೆಯ ಕಡಿಮೆ ಪ್ರಗತಿಯ ಪೋಸ್ಟ್‌ಕೋಡ್‌ಗಳು ಮತ್ತು ಸಾಮಾಜಿಕ-ಆರ್ಥಿಕ ಅಭಾವದ ಪ್ರದೇಶಗಳಲ್ಲಿ ಈ ವರ್ಷದ ಫೌಂಡೇಶನ್ ಕೋರ್ಸ್, ಕೇಂಬ್ರಿಡ್ಜ್ ವಿದ್ಯಾರ್ಥಿಗಳ ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

click me!