
ಶಿಕ್ಷಣ ಕ್ಷೇತ್ರದ ಪೋರ್ಟಲ್ ಬೈಜುಸ್ (Byju’s) ಇತ್ತೀಚೆಗೆ ತನ್ನ ಕಂಪನಿಯ ವೆಚ್ಚ ಕಡಿತ (Cost Cut) ನಿರ್ಧಾರ ಮಾಡುವ ಪ್ಲ್ಯಾನ್ ಮಾಡಿದ್ದು, ಈ ಹಿನ್ನೆಲೆ ಸಂಸ್ಥೆಯ 2,500 ಉದ್ಯೋಗಿಗಳನ್ನು (Employees) ಅಥವಾ ಸಂಸ್ಥೆಯ ಶೇ. 5 ರಷ್ಟು ಕಾರ್ಯಪಡೆಯನ್ನು (Workforce) ಕಿತ್ತು ಹಾಕುವ ನಿರ್ಧಾರ ಮಾಡಲಾಗಿದೆ. ಸದ್ಯ, ಈ ಉದ್ಯೋಗಿಗಳು ಈಗಾಗಲೇ ಸಂಸ್ಥೆಯಿಂದ ಹೊರನಡೆದಿದ್ದು, ಆದರೆ, ಅವರನ್ನು ಕಂಪನಿಗೆ ವಾಪಸ್ ಕರೆತರುವುದು ನನ್ನ ನಂಬರ್ ಒನ್ ಆದ್ಯತೆ ಎಂದು ಬೈಜುಸ್ ಕಂಪನಿಯ ಸಂಸ್ಥಾಪಕ ಬೈಜು ರವಿಂದ್ರನ್ (Byju Raveendran) ಹೇಳಿದ್ದಾರೆ.
ಅಲ್ಲದೆ, ಕೆಲಸದಿಂದ ತೆಗೆದುಹಾಕಿರುವ (Lay off) ಎಲ್ಲ ಉದ್ಯೋಗಿಗಳಿಗೂ ರವಿಂದ್ರನ್ ಕ್ಷಮಾಪಣಾ ಪತ್ರ ಬರೆದಿದ್ದಾರೆ. ಇನ್ನು, ಕೇರಳದ ಮಾದ್ಯಮ ಕಂಟೆಂಟ್ ವಿಭಾಗದಲ್ಲೂ ಸುಮಾರು 100 ಉದ್ಯೋಗಿಗಳನ್ನು ಕಿತ್ತು ಹಾಕಲಾಗಿದ್ದು, ನಂತರ ರವೀಂದ್ರನ್ ಇ - ಮೇಲ್ ಅನ್ನೂ ಮಾಡಿದ್ದಾರೆ. ಪ್ರತಿಕೂಲ ಸ್ಥೂಲ ಆರ್ಥಿಕ ಅಂಶಗಳಿಂದಾಗಿ BYJU ಸಮರ್ಥನೀಯತೆ ಮತ್ತು ಬಂಡವಾಳ-ಸಮರ್ಥ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಲು ಒತ್ತಾಯಿಸಲ್ಪಟ್ಟಿದೆ ಎಂದೂ ರವೀಂದ್ರನ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ: ಭಾರೀ ನಷ್ಟದಲ್ಲಿ ಎಜುಟೆಕ್ ಕಂಪೆನಿ ಬೈಜೂಸ್, ಮುಂದಿನ 6 ತಿಂಗಳಲ್ಲಿ 2,500 ನೌಕರರು ವಜಾ!
ಹಾಗೂ, ಕಂಪನಿ ಲಾಭದತ್ತ ನಡೆಯಲು ದೊಡ್ಡ ಬೆಲೆ ತೆರಬೇಕಾಗಿದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಬೈಜು ತೊರೆಯಬೇಕಾದವರೆಲ್ಲರಿಗೂ ನಾನು ನಿಜವಾಗಿಯೂ ಕ್ಷಮೆ ಕೇಳುತ್ತೇನೆ. ಇದು ನನ್ನ ಹೃದಯವನ್ನೂ ಒಡೆದಿದೆ. ಇನ್ನು, ಈ ಪ್ರಕ್ರಿಯೆ ನಾವು ಉದ್ದೇಶಿಸಿದಷ್ಟು ಸುಗಮವಾಗದಿದ್ದರೆ, ನಾನು ನಿಮ್ಮ ಕ್ಷಮೆ ಕೋರುತ್ತೇನೆ. ಈ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ಸಮರ್ಥವಾಗಿ ಮುಗಿಸಲು ನಾವು ಬಯಸಿದ್ದು, ಈ ಹಿನ್ನೆಲೆ ಈ ಪ್ರಕ್ರಿಯೆಯಲ್ಲಿ ತುಂಬಾ ಅವಸರ ಮಾಡಲು ನಾವು ಬಯಸುತ್ತಿಲ್ಲ ಎಂದು ಇ - ಮೇಲ್‌ನಲ್ಲಿ ಸಿಇಒ ಹೇಳಿಕೊಂಡಿದ್ದಾರೆ ಎಂದೂ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಲ್ಲದೆ, ಉದ್ಯೋಗಳ ಕಡಿತ ಸಂಸ್ಥೆಯ ಒಟ್ಟಾರೆ ಒದ್ಯೋಗಿಗಳ ಪೈಕಿ ಶೇ. 5 ಅನ್ನು ಮೀರಿಲ್ಲ ಎಂದು ನಾನು ಹೇಳಿಕೊಳ್ಳಲು ಬಯಸುತ್ತೇನೆ. ಅಲ್ಲದೆ, ಇದನ್ನು ನಾನು ಲೇ ಆಫ್ ಎಂದು ಕರೆಯಲು ಬಯಸಲ್ಲ, ಬದಲಾಗಿ ಟೈಮ್ ಆಫ್ (Time - off) ಎಂದೂ ಹೇಳಿದ್ದಾರೆ. ಹಾಗೂ, ಆ ಉದ್ಯೋಗಿಗಳಿಗೆ ಹೊಸ ಉದ್ಯೋಗ ಪಾತ್ರದ ಮೂಲಕ ಕಂಪನಿ ಹೇಗೆ ಸಮರ್ಥನೀಯ ಬೆಳವಣಿಗೆಯನ್ನು ಸಾಧಿಸಲಿದೆ ಎಂದೂ ರವೀಂದ್ರನ್ ಹೇಳಿದ್ದಾರೆ. ಜತೆಗೆ, ಕಿತ್ತು ಹಾಕಿರುವ ಉದ್ಯೋಗಿಗಳಿಗೆ ಹೊಸದಾಗಿ ಉದ್ಯೋಗ ಪಾತ್ರ ಸೃಷ್ಟಿಸುವಂತೆ ಎಚ್‌ಆರ್‌ಗಳಿಗೆ ಹೇಳಲಾಗಿದೆ ಎಂಬುದನ್ನೂ ಬೈಜುಸ್ ಸಂಸ್ಥೆ ಮುಖ್ಯಸ್ಥ ರವೀಂದ್ರನ್ ಹೇಳಿದ್ದಾರೆ.
ಈ ಮಧ್ಯೆ, ಮಾರ್ಚ್ 31, 2022ರವರೆಗಿನ ಬೈಜುಸ್ ಸಂಸ್ಥೆಯ ಆದಾಯ 4 ಪಟ್ಟು ಅಂದರೆ 10 ಸಾವಿರ ಕೋಟಿ ರೂ. ಗೆ ಏರಿಕೆಯಾಗಿದೆ.
ಇದನ್ನೂ ಓದಿ:
Byju's Layoff; 2,500 ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್!
ತಿರುವನಂತಪುರಂನಲ್ಲಿ ಬೈಜುಸ್ ಅಭಿವೃದ್ಧಿ ಕೇಂದ್ರ ಮುಂದುವರಿಕೆ
ಇನ್ನೊಂದೆಡೆ, ಬೈಜುಸ್ ಸಂಸ್ಥೆ ತಿರುವನಂತಪುರಂನಲ್ಲಿ ಅಭಿವೃದ್ಧಿ ಕೇಂದ್ರ ಬಂದ್ ಮಾಡಲು ಮುಂದಾಗಿತ್ತು. ಈ ಹಿನ್ನೆಲೆ, ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬೆಂಗಳೂರಿಗೆ ರೀಲೊಕೇಟ್ ಆಗುವ ಆಯ್ಕೆಯನ್ನೂ ಅವರಿಗೆ ನೀಡಲಾಗಿತ್ತು. ಆದರೆ, ಕೆರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಬೈಜುಸ್ ಸಂಸ್ಥಾಪಕ ಹಾಗೂ ಸಿಇಒ ಬೈಜು ರವೀಂದ್ರನ್ ಜತೆಗೆ ಮಾತುಕತೆ ನಡೆದ ಬಳಿಕ ಕಂಪನಿ ಈ ನಿರ್ಧಾರವನ್ನು ಕೈಬಿಟ್ಟಿದೆ. ಹಾಗೂ, ತಿರುವನಂತಪುರಂ ಟೆಕ್ನೋಪಾರ್ಕ್ ಕಚೇರಿಯಲ್ಲಿ ಅಭಿವೃದ್ಧಿ ಕೇಂದ್ರವನ್ನು ಮುಂದುವರಿಸಲಿದೆ ಎಂದೂ ಮಾಹಿತಿ ತಿಳಿದುಬಂದಿದೆ.