29 ಪಿಯು ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರದ ಮಂಜೂರಾತಿ

By Kannadaprabha News  |  First Published Nov 1, 2022, 8:30 AM IST

ಭಾಗವಾಗಿ 29 ಹೊಸ ಪಿಯು ಕಾಲೇಜುಗಳನ್ನು ಮಂಜೂರು ಮಾಡಿದೆ. ಈ ಎಲ್ಲ ಕಾಲೇಜುಗಳಲ್ಲಿ 2023-24ನೇ ಸಾಲಿನಿಂದ ಪ್ರವೇಶ ಪ್ರಕ್ರಿಯೆ ಆರಂಭ 


ಬೆಂಗಳೂರು(ನ.01):  ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಒಟ್ಟು 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಈ ಪೈಕಿ 25 ಕಾಲೇಜುಗಳು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೇ ಆರಂಭವಾಗಲಿವೆ. ಉಳಿದ ಐದು ಕಾಲೇಜುಗಳ ಪೈಕಿ ‘ಕನ್ನಡಪ್ರಭ ವರ್ಷದ ವ್ಯಕ್ತಿ’ ಹಾಗೂ ‘ಪದ್ಮಶ್ರೀ’ ಪುರಸ್ಕೃತ ಹರಕಳ ಹಾಜಬ್ಬ ಅವರ ಸಂಸ್ಥೆ ಸೇರಿದಂತೆ ಕರಾವಳಿ ಹಾಗೂ ಮಧ್ಯಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ನೀಡಲಾಗಿದೆ.

ರಾಜ್ಯದ ಕೆಲ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ ಅವುಗಳನ್ನು ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಾಗಿ ಪ್ರಾರಂಭಿಸಲು ಸರ್ಕಾರ ಮುಂದಾಗಿತ್ತು. ಇದರ ಭಾಗವಾಗಿ 29 ಹೊಸ ಪಿಯು ಕಾಲೇಜುಗಳನ್ನು ಮಂಜೂರು ಮಾಡಿದೆ. ಈ ಎಲ್ಲ ಕಾಲೇಜುಗಳಲ್ಲಿ 2023-24ನೇ ಸಾಲಿನಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಸರ್ಕಾರಿ ಶಾಲೆಗಳಲ್ಲಿನ್ನು ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‌ ಇರಲ್ಲ

ಎಲ್ಲೆಲ್ಲಿ ಹೊಸ ಕಾಲೇಜು ಮಂಜೂರು?:

ಯಾದಗಿರಿ ಜಿಲ್ಲೆಯ ಸುರಪೂರ ತಾಲ್ಲೂಕಿನ ದೇವತ್ಕಲ್‌ ಮತ್ತು ಹುಣಸಗಿ, ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಮುಸಲಾಪುರ ಮತ್ತು ಚಿಕ್ಕಡಂಕನಕಲ್ಲು, ಕೊಪ್ಪಳ ತಾಲ್ಲೂಕಿನ ಕವಲೂರು, ರಾಯಚೂರು ಜಿಲ್ಲೆಯ ಸಿಂಈನೂರು ತಾಲ್ಲೂಕಿನ ಪಗಡದಿನ್ನಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಶಾನವಾಸಪುರ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ದೇವರಹಿಪ್ಪರಗಿ ಮತ್ತು ಪೀರಾಪುರ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್‌, ಮುದ್ದೇಬಿಹಾಳ ತಾಲ್ಲೂಕಿನ ಮುಗಳಖೋಡ, ಮುಧೋಳ ತಾಲ್ಲೂಕಿನ ಮಿರ್ಜಿ, ರಬಕವಿ ಬನಹಟ್ಟಿತಾಲ್ಲೂಕಿನ ಢವಳೇಶ್ವರ, ಕುಲ್ಲಹಳ್ಳಿ, ಬೆಳಗಾವಿ ಜಿಲ್ಲೆಯ ರಾಯಭಾಗ-ಕುಡಚಿ ತಾಲ್ಲೂಕಿನ ಅಳಗವಾಡಿ, ಶಿರಗೂರ, ಸಂವಸುದ್ದಿ, ಹಾರೋಗೇರಿ ಪಟ್ಟಣ, ಮುಗಳಖೋಡ ಪಟ್ಟಣ, ರಾಮದುರ್ಗ ತಾಲ್ಲೂಕಿನ ಚುಂಚನೂರು, ಕೆ.ಚಂದರಗಿ, ಕಿತ್ತೂರು ತಾಲ್ಲೂಕಿನ ತುರಕರ ಶೀಗಿಹಳ್ಳಿ, ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯ್ತಿ, ಮರಕಟ್ಟೆ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಸಿದ್ದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ, ಮಂಗಳೂರು ತಾಲ್ಲೂಕಿನ ಹರೇಕಳ (ಹಾಜಬ್ಬ ಊರು), ದಾವಣಗೆರೆ ಜಿಲ್ಲೆಯ ದಾವಣಗೆರೆ ಉತ್ತರ ತಾಲ್ಲೂಕಿನ (ಮಾಯಕೊಂಡ) ಕುರ್ಕಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ದುಂಡಶಿ ಗ್ರಾಮ ಈ ಎಲ್ಲ 29 ಸ್ಥಳಗಳಲ್ಲಿ ಹೊಸ ಪಿಯು ಕಾಲೇಜುಗಳಿಗೆ ಮಂಜೂರಾತಿ ನೀಡಲಾಗಿದೆ.
 

click me!