ಮುಂಬೈನಲ್ಲೂ ಉಡುಪಿ ರೀತಿ ಹಿಜಾಬ್ ವಿವಾದ, ಕಾಲೇಜಲ್ಲಿ ಬುರ್ಖಾಗೆ ಬ್ರೇಕ್‌

By Gowthami KFirst Published Aug 4, 2023, 9:08 AM IST
Highlights

ಉಡುಪಿ ಬಳಿಕ ಈಗ ಮುಂಬೈನಲ್ಲೂ ಹಿಜಾಬ್‌/ಬುರ್ಖಾ ವಿವಾದ ಸೃಷ್ಟಿಯಾಗಿದೆ. ಶಿಕ್ಷಣ ನೀತಿಯಡಿ ಧಾರ್ಮಿಕ ವಸ್ತ್ರ ಸಂಹಿತೆ ಧರಿಸುವಂತಿಲ್ಲ ಎಂದು ಕಾಲೇಜೊಂದು ಹೇಳಿದ್ದಕ್ಕೆ ಪ್ರತಿಭಟನೆ ನಡೆದಿದೆ. 

ಮುಂಬೈ (ಆ.4): ಮುಂಬೈನಲ್ಲೂ ಉಡುಪಿ ಕಾಲೇಜಿನ ರೀತಿ ಹಿಜಾಬ್‌/ಬುರ್ಖಾ ವಿವಾದ ಸೃಷ್ಟಿಯಾಗಿದೆ. ಇಲ್ಲಿನ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಬುರ್ಖಾ ತೆಗೆದು ಹೇಳಿದ್ದು ವಿವಾದಕ್ಕೀಡಾಗಿದೆ. ವಿದ್ಯಾರ್ಥಿನಿಯರ ಪ್ರತಿಭಟನೆ ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣ ಸುಖಾಂತ್ಯ ಮಾಡಿದ್ದಾರೆ. ಮುಂಬೈನ ಚೆಂಬೂರಿನ ಆಚಾರ್ಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಅಮೆಜಾನ್‌ನಿಂದ 1 ಕೋಟಿ ರೂಪಾಯಿಗೂ ಹೆಚ್ಚು ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ

ಹೊಸ ಶಿಕ್ಷಣ ನೀತಿ ಅಡಿ ಹೊಸ ವಸ್ತ್ರಸಂಹಿತೆ ಜಾರಿಗೆ ಬಂದಿದ್ದು, ಧಾರ್ಮಿಕ ವಸ್ತ್ರ ತೊಡುವಂತಿಲ್ಲ  ಎಂದು ಕಾಲೇಜು ಸೂಚಿಸಿತ್ತು. ಹೀಗಾಗಿ ಬುರ್ಖಾ ತೆಗೆದು ಕಾಲೇಜು ಪ್ರವೇಶಿಸುವಂತೆ ಸೂಚಿಸಲಾಗಿತ್ತು. ಇದರಿಂದ ಕ್ರೋಧಗೊಂಡ ವಿದ್ಯಾರ್ಥಿನಿಯರು ಹಾಗೂ ಪೋಷಕರು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲಕಾಲ ವಾತಾವರಣ ಉದ್ವಿಗ್ನವಾಗಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿದಾಗ,  ಕ್ಲಾಸಿಗೆ ಬರುವ ಮುನ್ನ ಬುರ್ಖಾ ತೆಗೆಯುತ್ತೇವೆ. ಆದರೆ ಶಿರವಸ್ತ್ರ (ಹಿಜಾಬ್‌) ತೆಗೆಯಲ್ಲ  ಎಂದು ವಿದ್ಯಾರ್ಥಿನಿಯರು ಹೇಳಿದರು. ಇದಕ್ಕೆ ಕಾಲೇಜು ಸಮ್ಮತಿ ಸೂಚಿಸಿತು.

ಭಾರತದ ಶ್ರೀಮಂತ ಅಂಬಾನಿ ಕುಟುಂಬದಲ್ಲಿ ಯಾರು ಎಷ್ಟು ಓದಿದ್ದಾರೆ? ಸೊಸೆಯಂದಿರ

ವಿದ್ಯಾರ್ಥಿಗಳ ಪ್ರಕಾರ, ಕಾಲೇಜು ಆವರಣದೊಳಗೆ ಪ್ರವೇಶಿಸುವ ಮೊದಲು ಬುರ್ಖಾಗಳನ್ನು ತೆಗೆದುಹಾಕಲು ಅವರಿಗೆ ಸೂಚಿಸಲಾಯಿತು. ಕಳೆದ ಬುಧವಾರ ನಡೆದ ಘಟನೆ ಇದಾಗಿದ್ದು,  ಈ ವಿದ್ಯಾರ್ಥಿಗಳು ಚೆಂಬೂರಿನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಗೇಟ್‌ಗಳ ಹೊರಗೆ ನಿಂತಿರುವ  ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

click me!