ಗೂಗಲ್ ಡೂಡಲ್ ಸ್ಪರ್ಧೆ ಗೆದ್ದ ಕೋಲ್ಕತ್ತಾದ ಹುಡುಗ!

By Suvarna News  |  First Published Nov 18, 2022, 10:54 AM IST

*ಮಕ್ಕಳ ದಿನಾಚರಣೆಯ ಅಂಗವಾಗಿ ಗೂಗಲ್ ಕಂಪನಿ ಆಯೋಜಿಸಿದ್ದ ಡೂಡಲ್ ಸ್ಪರ್ಧೆ
*ಈ ಸ್ಪರ್ಧೆ ಗೆದ್ದ ಶ್ಲೋಕ ಮುಖರ್ಜಿಯ ಡೂಡಲ್ ಅನ್ನು ಗೂಗಲ್ ತನ್ನ ಮುಖಪುಟದಲ್ಲಿ ಪ್ರಕಟಿಸಿದೆ
*ಕೋಲ್ಕತ್ತಾದ ಈ ಹುಡುಗನಿಗೆ 7 ಲಕ್ಷ ರೂಪಾಯಿ ಬಹುಮಾನ ಕೂಡ ಸಿಕ್ಕಿದೆ


ದೊಡ್ಡ ಸರ್ಚ್ ಇಂಜಿನ್ ಆಗಿರುವ ಗೂಗಲ್ (Google), ತನ್ನ ಮುಖಪುಟದಲ್ಲಿ ಪ್ರತಿ ದಿನ ಹೊಸ ಹೊಸ  ಗೂಗಲ್ ಡೂಡಲ್ ಎಂಬ ವಿಶೇಷ ಚಿತ್ರವನ್ನು ಪ್ರಕಟಿಸುತ್ತದೆ.  ಸೆಲೆಬ್ರಿಟಿಗಳ ಜನ್ಮದಿನ ಅಥವಾ ಮರಣದ ಸಂದರ್ಭದಲ್ಲಿ ಅವರ ಗೌರವಾರ್ಥವಾಗಿ ವಿಶೇಷ ಡೂಡಲ್‌ಗಳನ್ನು ರೂಪಿಸಿ ಪ್ರಕಟಿಸುತ್ತದೆ. ಹೆಚ್ಚಿನ ಜನರನ್ನು ಆಕರ್ಷಿಸಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಗೂಗಲ್ ಡೂಡಲ್‌ಗಳನ್ನು (Doodle) ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತದೆ. ಕೆಲವೊಮ್ಮೆ ವಿಶೇಷ ಸಂದರ್ಭಕ್ಕೆ ಅನುಸಾರವಾಗಿ ಡೂಡಲ್‌ಗಳನ್ನು ರಚಿಸಲು ಗೂಗಲ್ ಡೂಡಲ್ ಸ್ಪರ್ಧೆಯನ್ನು ಸಹ ಆಯೋಜಿಸುತ್ತದೆ.  ಈ ಸ್ಪರ್ಧೆ ಪ್ರತೀ ವರ್ಷವೂ ನಡೆಯುತ್ತಿದೆ. ಇದೊಂದು ವಿಶೇಷ ಸ್ಪರ್ಧೆ ಅಂತಾನೇ ಬಿಂಬಿಸಲಾಗಿದೆ. ಈ ವರ್ಷ ಮಕ್ಕಳ ದಿನಾಚರಣೆ  ಪ್ರಯುಕ್ತ   ಭಾರತದಲ್ಲಿ ನಡೆದ ಸ್ಪರ್ಧೆಯಲ್ಲಿ ಕೋಲ್ಕತ್ತಾದ ನ್ಯೂಟೌನ್‌ನ ದೆಹಲಿ ಪಬ್ಲಿಕ್ ಸ್ಕೂಲ್‌ನ ಶ್ಲೋಕ್ ಮುಖರ್ಜಿ (Shlok Mukherjee) ಗೆದ್ದು ಬೀಗಿದ್ದಾರೆ. ಶ್ಲೋಕ್ ಮುಖರ್ಜಿ ರಚಿಸಿದ 'ಇಂಡಿಯಾ ಆನ್ ದಿ ಸೆಂಟರ್ ಸ್ಟೇಜ್' (India on the center stage) ಎಂಬ ಡೂಡಲ್ ಅನ್ನು ಗೂಗಲ್ ಅತ್ಯುತ್ತಮ ಡೂಡಲ್ ಎಂದು ಘೋಷಿಸಿದೆ. ಜೊತೆಗೆ ಶ್ಲೋಕ್ ಮುಖರ್ಜಿ 7 ಲಕ್ಷದ ಬಂಪರ್ ಜಾಕ್ ಫಟ್ ಹೊಡೆದಿದೆ.

ಡೂಡಲ್ ಫಾರ್ ಗೂಗಲ್ ಸ್ಪರ್ಧೆಯನ್ನು 2009 ರಿಂದ ಭಾರತದಲ್ಲಿ ನಡೆಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಥಿಗಳ ನಮೂದುಗಳನ್ನು Google ಕಾರ್ಯನಿರ್ವಾಹಕರು ಮತ್ತು ಉದ್ಯಮದ ನಾಯಕರು ಮತ್ತು ಸೃಜನಶೀಲ ಚಿಂತಕರನ್ನು ಒಳಗೊಂಡಿರುವ ತೀರ್ಪುಗಾರರ ಸಮಿತಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಚಿಲ್ಡ್ರನ್ಸ್ ಡೇ ಅಂಗವಾಗಿ ಭಾರತಕ್ಕಾಗಿ ಗೂಗಲ್ ಡೂಡಲ್ 2022 ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ 100 ನಗರಗಳಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. “ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ 1,15,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

‘ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕಕ್ಕೆ ಬಡ್ಡಿ ಸೇರಿಸಿ ವಾಪಸ್‌ ಕೊಡಿ’ : ಹೈಕೋರ್ಟ್

ಮಕ್ಕಳು ತಮ್ಮ ಅದ್ಭುತ ಕಲ್ಪನೆ ಮತ್ತು ಸೃಜನಶೀಲತೆಯೊಂದಿಗೆ ತಮ್ಮ ಡೂಡಲ್‌ಗಳನ್ನು ಗೂಗಲ್ ಗೆ ಕಳುಹಿಸಿದ್ದಾರೆ. ಕೇವಲ 10 ವರ್ಷದ ಶ್ಲೋಕ್,  'ಇಂಡಿಯಾ ಆನ್ ದಿ ಸೆಂಟರ್ ಸ್ಟೇಜ್' ಶೀರ್ಷಿಕೆಯ ಚಿಂತನಶೀಲ ಮತ್ತು ಸ್ಪೂರ್ತಿದಾಯಕ ಡೂಡಲ್ ಕಳಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಮೂಲಕ ಭಾರತವು ವೈಜ್ಞಾನಿಕ ಕ್ಷೇತ್ರದಲ್ಲಿ ಕೇಂದ್ರ ಸ್ಥಾನವನ್ನು ಪಡೆಯಬೇಕು ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಕೇಂದ್ರ ಬಿಂದುವಾಗಬೇಕು ಎಂದು ಶ್ಲೋಕ್ ಸಲಹೆ ನೀಡಿದ್ದಾನೆ. ಈ ಸಲಹೆಯನ್ನು ಗೂಗಲ್ ಕೂಡ ಶ್ಲಾಘಿಸಿದ್ದು, ಅವನ ಡೂಡಲ್ ಅನ್ನು ವಿಜೇತವೆಂದು ಘೋಷಿಸಿದ್ದಾರೆ. ಇಷ್ಟೇ ಅಲ್ಲ, ರೂ. 5,00,000 ಕಾಲೇಜು ವಿದ್ಯಾರ್ಥಿವೇತನ ಮತ್ತು ರೂ.2,00,000 ತಂತ್ರಜ್ಞಾನ ಪ್ಯಾಕೇಜ್ ಅನ್ನು ಗೂಗಲ್ ಘೋಷಿಸಿದೆ.

Tap to resize

Latest Videos

ಕನ್ನಡ ಕಲಿಯಲು ರಾಜ್ಯದ ಸರ್ಕಾರಿ ಶಾಲೆಗೆ ತಮಿಳುನಾಡು ಮಕ್ಕಳು!

ಗೂಗಲ್ ಡೂಡಲ್ಸ್ ಸ್ಪರ್ಧೆಗಾಗಿಯೇ ಪ್ಯಾನೆಲ್‌ ರಚಿಸಲಾಗಿದೆ. ಈ ಸಮಿತಿಯು ನಟರು, ಟಿವಿ ವ್ಯಕ್ತಿಗಳಾದ ನೀನಾ ಗುಪ್ತಾ, ಟಿಂಕಲ್ ಕಾಮಿಕ್ಸ್‌ನ ಪ್ರಧಾನ ಸಂಪಾದಕ ಕುರಿಯಾಕೋಸ್ ವೈಸಿಯನ್, ಕಲಾವಿದೆ ಅಲಿಕಾ ಭಟ್, ಸ್ಲೇ ಪಾಯಿಂಟ್ ಯೂಟ್ಯೂಬ್ ರಚನೆಕಾರರು ಮತ್ತು ಗೂಗಲ್ ಡೂಡಲ್ ತಂಡವನ್ನು ಒಳಗೊಂಡಿದೆ.  ಕಲಾತ್ಮಕ ಅರ್ಹತೆ, ಸೃಜನಶೀಲತೆ, ಡೂಡಲ್ ಸ್ಪರ್ಧೆಯ ಥೀಮ್‌ಗೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸಿ ಅವರು ದೇಶಾದ್ಯಂತ 20 ಜನರನ್ನು ಶಾರ್ಟ್‌ಲಿಸ್ಟ್ ಮಾಡಿದ್ದರು. ಈ 20 ಅಂತಿಮ ಡೂಡಲ್‌ಗಳನ್ನು ಸಾರ್ವಜನಿಕ ಮತದಾನಕ್ಕಾಗಿ ಆನ್‌ಲೈನ್‌ನಲ್ಲಿ ಹಾಕಲಾಗಿತ್ತು.  5 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ಮತಗಳು ಫಲಿತಾಂಶಗಳನ್ನು ನಿರ್ಧರಿಸಲು ನೆರವಾದವು. ಇದರಲ್ಲಿ ರಾಷ್ಟ್ರೀಯ ವಿಜೇತರ ಜೊತೆಗೆ ನಾಲ್ಕು ಗುಂಪಿನ ವಿಜೇತರನ್ನು ಸಹ ಘೋಷಿಸಲಾಯಿತು. ಈ ಮತದಾನದಲ್ಲಿ ಶ್ಲೋಕ್ ಡೂಡಲ್ ಟಾಪರ್ ಆಗಿ ಹೊರಹೊಮ್ಮಿತು.   ಅಂದಹಾಗೆ ಶ್ಲೋಕ್ ರಚಿಸಿದ್ದ ಗೂಗಲ್ ಡೂಡಲ್ ಅನ್ನು ಮಕ್ಕಳ ದಿನಾಚರಣೆಯಂದು ಗೂಗಲ್ ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. 24 ಗಂಟೆಗಳ ಕಾಲ ಈ ಸ್ಪೆಷಲ್ ಡೂಡಲ್ ಅನ್ನು ಪ್ರದರ್ಶಿಸಲಾಯಿತು.

click me!