10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಇಸ್ರೋ ಆನ್‌ಲೈನ್ ಕೋರ್ಸ್!

By Suvarna NewsFirst Published Jun 3, 2022, 4:37 PM IST
Highlights

*ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅವಲೋಕನ ಕುರಿತು ಇಸ್ರೋದಿಂದ ಕೋರ್ಸ್
*ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಈ ಆನ್‌ಲೈನ್ ಕೋರ್ಸ್‌ನಲ್ಲಿ ಭಾಗವಹಿಸಬಹುದು
*ಈ ಕೋರ್ಸ್‌ಗೆ ಸೇರಿಕೊಳ್ಳಲು ಜೂನ್ 6 ಕೊನೆಯ ದಿನಾಂಕವಾಗಿದೆ
 

ಭಾರತದ ಹೆಮ್ಮೆಯ ಸಂಸ್ಥೆ ಎನಿಸಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಉಚಿತ ಆನ್‌ಲೈನ್ ಬಾಹ್ಯಾಕಾಶ ವಿಜ್ಞಾನ (Science) ಕೋರ್ಸ್‌ಗಾಗಿ 10 ವರ್ಷಕ್ಕಿಂತ ಮೇಲ್ಪಟ್ಟ ಶಾಲಾ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. 'ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅವಲೋಕನ (Overview of Space Science and Technology)' ಎಂದು ಹೆಸರಿಸಲಾದ ಈ ಕೋರ್ಸ್ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಅಂಶಗಳ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಭಾರತದ ಒಳಗೆ ಮತ್ತು ಹೊರಗಿನ ವಿದ್ಯಾರ್ಥಿಗಳು ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಒಂದು ತಿಂಗಳ ಕೋರ್ಸ್ 6 ಜೂನ್ 2022 ರಿಂದ ಪ್ರಾರಂಭವಾಗುತ್ತದೆ. ಇದು ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳು ನಡೆಸುವ ಒಟ್ಟು 10 ಗಂಟೆಗಳ ಆನ್‌ಲೈನ್ ಕೋರ್ಸ್ ಆಗಿರುತ್ತದೆ. ಪ್ರತಿ ವೀಡಿಯೊ ಸೆಷನ್ ನಂತರ ರಸಪ್ರಶ್ನೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS), ISRO ದಿಂದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

ಐಐಟಿಗಳಲ್ಲಿ ಓದಬೇಕಾ? ಈ ಆನ್‌ಲೈನ್ ಕೋರ್ಸಿಗೆ ದಾಖಲಾಗಿ

Latest Videos

ಬಾಹ್ಯಾಕಾಶ ತಂತ್ರಜ್ಞಾನ (Space Technology), ಬಾಹ್ಯಾಕಾಶ ನೌಕೆ ವ್ಯವಸ್ಥೆಗಳು, ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ಹವಾಮಾನಶಾಸ್ತ್ರ, ಗ್ರಹಗಳ ಭೂವಿಜ್ಞಾನವನ್ನು ಉಚಿತ ಕೋರ್ಸ್ ಪಠ್ಯವನ್ನಾಗಿ ಒಳಗೊಂಡಿದೆ. ಆನ್‌ಲೈನ್ ಡೇಟಾ (Online Data) ರೆಪೊಸಿಟರಿಗಳಿಂದ ಮಾಹಿತಿಯನ್ನು ಹೊರತೆಗೆಯಲು ಮತ್ತು ಜಿಯೋಡೇಟಾವನ್ನು ಪ್ರವೇಶಿಸಲು ಉಪಗ್ರಹ ಚಿತ್ರಗಳನ್ನು ಓದಲು ವಿದ್ಯಾರ್ಥಿಗಳು (Students) ಅವಕಾಶವನ್ನು ಪಡೆಯುತ್ತಾರೆ.

ಕೋರ್ಸ್ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಪಡೆಯಲು ರಸಪ್ರಶ್ನೆಯಲ್ಲಿ ಕನಿಷ್ಠ 60 ಪ್ರತಿಶತ ಸ್ಕೋರ್ ಮತ್ತು ವೀಡಿಯೊ ಸೆಷನ್‌ಗಳಲ್ಲಿ 70 ಪ್ರತಿಶತ ಹಾಜರಾತಿ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಚರ್ಚಾ ವೇದಿಕೆಯಲ್ಲಿ ಪೋಸ್ಟ್ ಮಾಡಬಹುದು. ಇದು ಕೋರ್ಸ್ ಪ್ರಾರಂಭದ ವೇಳೆಗೆ ರಚಿಸಲ್ಪಡುತ್ತದೆ. ವಿದ್ಯಾರ್ಥಿಗಳು ಕೋರ್ಸ್‌ನ ಕೊನೆಯ ದಿನದವರೆಗೆ ಎಲ್ಲಾ ಸೆಷನ್‌ಗಳನ್ನು ಪ್ರವೇಶಿಸಬಹುದು.

ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಗುರಿಯನ್ನು ಈ ಕೋರ್ಸ್ ಹೊಂದಿದೆ. ಇಸ್ರೋದ ಉಚಿತ ಆನ್‌ಲೈನ್ ಕೋರ್ಸ್ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS) ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ (MOOC) ಭಾಗವಾಗಿ ನಡೆಸುತ್ತಿದೆ.

ಇಸ್ರೋ (ISRO)ದಿಂದ ಆನ್‌ಲೈನ್ ಕೋರ್ಸ್ 10 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಆನ್‌ಲೈನ್ ಕೋರ್ಸ್‌ (Online Course)ಗೆ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಗಳು IIRS ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಇಮೇಲ್‌ನಲ್ಲಿ ತಮ್ಮ ರುಜುವಾತುಗಳನ್ನು ಸ್ಪಷ್ಟಪಡಿಸಿದ ನಂತರ ಅವರಿಗೆ ಸೆಷನ್‌ಗಳಿಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.

ಅಗ್ರಿಕಲ್ಚರ್ ಎಂಜನಿಯರಿಂಗ್ ಓದಿದರೆ ಎಷ್ಟೆಲ್ಲಾ ನೌಕರಿಗಳಿವೆ?

ಜೂನ್ 6 ರಂದು ಇಸ್ರೋದ ಉಚಿತ ಆನ್ ಲೈನ್  ಕೋರ್ಸ್ ನೋಂದಣಿ ಪ್ರಾರಂಭವಾಗಿ, ಜುಲೈ 5ಕ್ಕೆ ಕೊನೆಗೊಳ್ಳುತ್ತದೆ.  ವಿದ್ಯಾರ್ಥಿಗಳು ಆನ್‌ಲೈನ್ ವೀಡಿಯೊಗಳನ್ನು ಇಂಗ್ಲಿಷ್‌ನಲ್ಲಿ ವೀಕ್ಷಿಸಬಹುದು. ಕೋರ್ಸ್ ಅನ್ನು ಹಲವಾರು ಬಾರಿ ವೀಕ್ಷಿಸಬಹುದು ಮತ್ತು ವಿದ್ಯಾರ್ಥಿಯು ವಿಡಿಯೊಗಳನ್ನು ವೀಕ್ಷಿಸಿದ ನಂತರ ರಸಪ್ರಶ್ನೆಯನ್ನು ನಡೆಸಲಾಗುತ್ತದೆ. 70% ಹಾಜರಾತಿ ಹೊಂದಿರುವ ಮತ್ತು ರಸಪ್ರಶ್ನೆಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು IIRS ISRO ನಿಂದ ಪ್ರಮಾಣಪತ್ರವನ್ನು ಪಡೆಯಲು ಅರ್ಹರಾಗಿರುತ್ತಾರೆ. ದೇಶದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳು ಆನ್‌ಲೈನ್ ಕೋರ್ಸ್ ಅನ್ನು ನಡೆಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು, ಇಸ್ರೋ ದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನೋಂದಣಿ ಬಳಿಕ ಲಾಗಿನ್ ಕ್ರೆಡಿಬಿಲಿಟಿಯನ್ನು ಇ-ಮೇಲ್ ವಿಳಾಸಕ್ಕೆ ಕಳುಹಿಸುತ್ತಾರೆ. IIRS E-CLASS LMS ನಲ್ಲಿ ಸೆಷನ್ ನಡೆಸಲಾಗುತ್ತದೆ.

click me!