ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕವನ್ನು ಮನ್ನಾ ಮಾಡುವಂತೆ ಕೂಗು ಕೇಳಿಬಂದಿದೆ. ಇದಕ್ಕೆ ಕೇಂದ್ರ ಮನಸ್ಸು ಮಾಡಬೇಕಷ್ಟೇ.
ಲಕ್ನೋ, (ಸೆ.12): ದೇಶದ ಪ್ರಜೆಗಳ ಹಿತ ದೃಷ್ಟಿಯಿಂದ ಶಾಲಾ-ಕಾಲೇಜುಗಳ ಶುಲ್ಕವನ್ನು ಮನ್ನಾ ಮಾಡುವಂತೆ ಬಹುಜನಾ ಸಮಾಜ ಪಕ್ಷದ ನಾಯಕಿ ಮಾಯಾವತಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಯಾವತಿ. ಕೊರೋನಾ ಲಾಕ್ ಡೌನ್ ಹಿನ್ನೆಲೆ ಜನರು ಸಂಕಷ್ಟದಲ್ಲಿದ್ದಾರೆ. ಕೋಟ್ಯಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲಾಗುತ್ತಿಲ್ಲ, ಆದ್ದರಿಂದ ಶಾಲಾ-ಕಾಲೇಜು ಶುಲ್ಕ ಮನ್ನಾ ಮಾಡುವಂತೆ ಮನವಿ ಮಾಡಿದ್ದಾರೆ.
ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ
ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನರ ಹಿತಾಸಕ್ತಿಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಪೋಷಕರ ಕಷ್ಟಗಳನ್ನು ಅರಿತು ಅವರು ಈಗಾಗಲೇ ನೀಡಿರುವ ಶುಲ್ಕಗಳನ್ನು ವಾಪಸ್ ನೀಡಬೇಕು. ಅಲ್ಲದೇ ಈ ಬಾರಿಯ ಶಾಲಾ ಕಾಲೇಜು ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
1. कोरोना लाॅकडाउन से संक्रमित देश की आर्थिक मन्दी से भीषण बेरोजगारी व जीवन में अभूतपूर्व संकट झेल रहे करोड़ों लोगों के सामने बच्चों के फीस जमा करने की समस्या संगीन होकर अब धरना-प्रदर्शन आदि के रूप में सामने आयी है व उन्हें पुलिस के डण्डे खाने पड़ रहे हैं, जो अति-दुःखद।1/2
— Mayawati (@Mayawati)ಹೌದು...ಮಾಯಾವತಿ ಅವರ ಆಗ್ರಹವನ್ನು ಒಪ್ಪಲೇಬೇಕು. ಕೊರೋನಾ ಜನರಿಗೆ ತಂದಿಟ್ಟ ಸಂಕಷ್ಟ ಒಂದೆರೆಡಲ್ಲ. ಲಾಕ್‌ಡೌನ್‌ನಿಂದ ಅನುಭವಿಸಿದ ಕಷ್ಟ, ನಷ್ಟಗಳು ಹೇಳತೀರದು.
ಅದೆಷ್ಟೋ ಪೋಷಕರು ತಮ್ಮ ಮಕ್ಕಳ ಶಾಲೆ-ಕಾಲೇಜು ಫೀ ಕಟ್ಟಲಾಗದೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇನ್ನು ಕೆಲವರು ಕೂಲಿ-ನಾಲಿ ಮಾಡಿ ಮಕ್ಕಳ ಶುಲ್ಕ ಕಟ್ಟುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಒಂದು ವ್ಯವಸ್ಥೆ ಮಾಡಬೇಕಿದೆ.