ವಿಶ್ವವಿದ್ಯಾಲಯವಾದ ಸೇಂಟ್‌ ಜೋಸೆಫ್‌ ಕಾಲೇಜು

By Kannadaprabha News  |  First Published Jul 13, 2022, 10:00 AM IST
  •  ವಿಶ್ವವಿದ್ಯಾಲಯವಾದ ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜು
  •  ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿಶ್ವವಿದ್ಯಾಲಯವಾಗಿ ಕಾರ್ಯಾರಂಭ

 ಬೆಂಗಳೂರು (ಜು.13): ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಂತ ಜೋಸೆಫರ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯವಾಗಿ ಉನ್ನತೀಕರಣಗೊಂಡಿದ್ದು, ವಿವಿಧ ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆಗೆ ಆಡಳಿತ ಮಂಡಳಿ ಮುಂದಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಫಾದರ್‌ ಸ್ವಿಬರ್ಚ್‌ ಡಿ ಸಿಲ್ವಾ, 140 ವರ್ಷಗಳ ಇತಿಹಾಸ ಹೊಂದಿರುವ ಸಂತ ಜೋಸೆಫರ ಕಾಲೇಜನ್ನು ವಿವಿ ಆಗಿ ಉನ್ನತೀಕರಿಸುವ ಸಂಬಂಧ ರಾಜ್ಯ ಸರ್ಕಾರ ವಿಧೇಯಕ ಜಾರಿಗೊಳಿಸಿ, ಜುಲೈ 2ರಂದು ವಿಶ್ವವಿದ್ಯಾಲಯ ಸ್ಥಾನಮಾನ ನೀಡಿದೆ. ಇನ್ನು ಮುಂದೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಇತರೆ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಲಿದೆ ಎಂದರು. ಪ್ರಸಕ್ತ ಸಾಲಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ನಡೆಯಲಿವೆ. ಕಾಲೇಜು ವಿಶ್ವವಿದ್ಯಾಲಯವಾಗಿ ಉನ್ನತೀಕರಣಗೊಂಡ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಾಂಶುಪಾಲರಾದ ಫಾದರ್‌ ವಿಕ್ಟರ್‌ ಲೋಬೊ ಮಾತನಾಡಿ, ಸಮಾಜದ ದುರ್ಬಲ, ಬಡ ವರ್ಗದವರಿಗೆ ಉನ್ನತ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ಶೈಕ್ಷಣಿಕ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸದ್ಯ ಸಂಸ್ಥೆಯಲ್ಲಿ 8200 ವಿದ್ಯಾರ್ಥಿಗಳು ಪದವಿ, ಸ್ನಾತಕ ಪದವಿ, ಪಿಎಚ್‌ಡಿ ಶಿಕ್ಷಣ ಪಡೆಯುತ್ತಿದ್ದಾರೆ. ಬನ್ನೇರುಘಟ್ಟರಸ್ತೆಯ ಕಾಳೇನ ಅಗ್ರಹಾರದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕೆಲ ವರ್ಷಗಳಲ್ಲಿಯೇ ಕ್ಯಾಂಪಸ್‌ ವಿಸ್ತರಣೆ ಮಾಡಲಾಗುವುದು. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲು ಯೋಜನೆ ರೂಪಿಸಲಾಗಿದೆ. ಪ್ರಸಕ್ತ ವರ್ಷದಿಂದ ಸಂಜೆ ಕಾಲೇಜು ಆರಂಭಿಸಲಾಗುವುದು, ಬಡ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಒಂದೂವರೆ ಕೊಟಿ ರು. ವಿದ್ಯಾರ್ಥಿ ವೇತನ ನೀಡಲಾಗಿದೆ. ಕೊರೋನಾ ಸಂದರ್ಭದಲ್ಲಿಯೂ ವಿವಿಧ ಸಾಮಾಜಿಕ ಕಾರ್ಯಗಳನ್ನು ಸಂಸ್ಥೆಯಿಂದ ಮಾಡಲಾಗಿದೆ ಎಂದು ತಿಳಿಸಿದರು.

Tap to resize

Latest Videos

ಪಿಯುಸಿ ಮಂಡಳಿ ಯಡವಟ್ಟು: ಫೇಲ್‌ ಆಗಿದ್ದ ವಿದ್ಯಾರ್ಥಿನಿ ಈಗ ಪಾಸ್‌: ನರಸಿಂಹರಾಜಪುರ ಪಟ್ಟಣದ ಎಂಕೆಸಿಪಿಎಂಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಜೋಯ್ಸಿ ಜೋಸೆಫ್‌ ಎಂಬ ವಿದ್ಯಾರ್ಥಿನಿ ಇಂಗ್ಲೀಷ್‌ ನಲ್ಲಿ 90 ಅಂಕ ಪಡೆದಿದ್ದರೂ, ಕೇವಲ 17 ಅಂಕ ಎಂದು ಪಿಯು ಮಂಡಳಿ ಯಡವಟ್ಟು ಮಾಡಿದೆ. ನಂತರ ಕಾಲೇಜಿನವರು ಫಲಿತಾಂಶದ ನಕಲು ಪ್ರತಿ ತರಿಸಿ ನೋಡಿದಾಗ ವಿದ್ಯಾರ್ಥಿನಿ ಪಾಸ್‌ ಆಗಿದ್ದಾಳೆ.

 ಕರ್ನಾಟಕ ವಿಶ್ವವಿದ್ಯಾಲಯ ಮುಚ್ಚುವ ಸ್ಥಿತಿಗೆ ಬಂದಿದೆ: ರವಿ ಮಾಳಗೇರ

ಈ ವರ್ಷದ ದ್ವಿತೀಯ ಪಿಯುಸಿ ಫಲಿಂತಾಶ ಬಂದಾಗ ಜೋಯ್ಸಿ ಜೋಸೆಫ್‌ ಇಂಗ್ಲೀಷ್‌ನಲ್ಲಿ ಕೇವಲ 17 ಅಂಕ ಪಡೆದಿದ್ದಳು. ಉಳಿದ ಎಲ್ಲಾ ವಿಷಯದಲ್ಲೂ ಉತ್ತಮ ಫಲಿತಾಂಶ ಪಡೆದಿದ್ದಳು. ಪ್ರತಿಭಾವಂತ ವಿದ್ಯಾರ್ಥಿನಿ ಜೋಯ್ಸಿ ಜೋಸೆಫ್‌ ಇಂಗ್ಲೀಷ್‌ನಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ಅನುಮಾನಗೊಂಡ ಕಾಲೇಜಿನವರು ಪಿಯು ಮಂಡಳಿಗೆ ಪತ್ರ ಬರೆದು ಫಲಿತಾಂಶದ ನಕಲನ್ನು ತರಿಸಿಕೊಂಡಿದ್ದಾರೆ. ಆಗ ಪಿಯು ಮಂಡಳಿಯ ಯಡವಟ್ಟು ಗೊತ್ತಾಗಿದೆ. ನಕಲಿನಲ್ಲಿ ಇಂಗ್ಲೀಷ್‌ ಪತ್ರಿಕೆಯ ಫಲಿತಾಂಶ 90 ಎಂದು ನಮೂದಿಸಲಾಗಿದೆ. ಫಲಿತಾಂಶವನ್ನು ಪುಟ ಸಂಖ್ಯೆ 17ಕ್ಕೆ ನಮೂದಿಸುವಾಗ ಅಂಕವನ್ನು ಸಹ 17 ಎಂದು ನಮೂದಿಸಿ ಅಚಾತುರ್ಯ ಮಾಡಲಾಗಿದೆ. 436 ಅಂಕ ಪಡೆದಿದ್ದ ವಿದ್ಯಾರ್ಥಿನಿಯ ಅಂಕ ಈಗ 509 ಆಗಿದೆ. ಕಾಲೇಜಿನ ಫಲಿತಾಂಶ ಸಹ ಶೇ.100 ರಷ್ಟುಆಗಿದೆ. ಪಿಯು ಮಂಡಳಿಯ ಈ ತಪ್ಪಿನಿಂದ ವಿದ್ಯಾರ್ಥಿನಿಗೆ, ಕಾಲೇಜಿನ ಫಲಿತಾಂಶಕ್ಕೆ ದಕ್ಕೆಯಾಗಿದೆ. ತಪ್ಪು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿ ಪೋಷಕರು ಒತ್ತಾಯಿಸಿದರು.

click me!