SSLC ಪಾಸಾದ್ರಷ್ಟೇ ಹುಡುಗಿ ಲವ್ ಮಾಡ್ತಾಳೆ; ನನ್ನ ಪಾಸ್ ಮಾಡಲು ಉತ್ತರ ಪತ್ರಿಕೆಯಲ್ಲಿ ₹500 ಇಟ್ಟುಬಂದ ವಿದ್ಯಾರ್ಥಿ!

Published : Apr 19, 2025, 07:03 PM ISTUpdated : Apr 19, 2025, 07:40 PM IST
SSLC ಪಾಸಾದ್ರಷ್ಟೇ ಹುಡುಗಿ ಲವ್ ಮಾಡ್ತಾಳೆ; ನನ್ನ ಪಾಸ್ ಮಾಡಲು ಉತ್ತರ ಪತ್ರಿಕೆಯಲ್ಲಿ ₹500 ಇಟ್ಟುಬಂದ ವಿದ್ಯಾರ್ಥಿ!

ಸಾರಾಂಶ

ಬೆಳಗಾವಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಉತ್ತರಪತ್ರಿಕೆಯಲ್ಲಿ 500 ರೂ. ಇಟ್ಟು, ಪ್ರೀತಿಸುವ ಹುಡುಗಿ ಒಪ್ಪಿಕೊಳ್ಳಲು ಪಾಸ್ ಮಾಡುವಂತೆ ಮನವಿ ಮಾಡಿದ್ದಾನೆ. ಈ ಉತ್ತರಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ವಿಚಿತ್ರ ಬೇಡಿಕೆ ಶಿಕ್ಷಕರನ್ನು ದಂಗಾಗಿಸಿದೆ. ವಿದ್ಯಾರ್ಥಿ ಯಾರೆಂದು ಪತ್ತೆಯಾಗಿಲ್ಲ.

ಬೆಳಗಾವಿ (ಏ.19): ನಾನು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದರಷ್ಟೇ ನನ್ನ ಹುಡುಗಿ ಲವ್ ಮಾಡ್ತೀನಿ ಅಂದಾಳ ರೀ. ಅದಕ್ಕ ನೀವು ಈ 500 ರೂ. ತಗೊಂಡು ನನ್ನ ಪಾಸ್ ಮಾಡ್ರಿ ಎಂದು ಮನವಿ ಮಾಡಿದ ಉತ್ತರ ಪತ್ರಿಕೆ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ.

ಹೌದು, ಈ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬರೆದ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯ ವಿಚಿತ್ರ ಬೇಡಿಕೆಯ ಪೋಟೊಗಳು ವೈರಲ್‌ ಆಗುತ್ತಿದೆ. ನನ್ನ ಹುಡುಗಿ ನನ್ನ ಲವ್‌ ಮಾಡಬೇಕಾದರೆ ನೀವು ಪ್ಲೀಸ್‌ ನನ್ನ ಪಾಸ್‌ ಮಾಡಬೇಕು ಸರ್. ದಯವಿಟ್ಟು ಪಾಸ್‌ ಎಂದು 500 ರೂ. ನೋಟು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಈ ವಿಚಿತ್ರ ಬೇಡಿಕೆಯ ಕುರಿತ ಬರವಣಿಗೆಯನ್ನು ನೋಡಿ ಶಿಕ್ಷಕರು ಸಹ ದಂಗಾಗಿದ್ದಾರೆ.

ವೈರಲ್ ಆಗಿರುವ ಉತ್ತರ ಪತ್ರಿಕೆಯಲ್ಲೇನಿದೆ?

'ಸರ್ ರೀ, ಮೇಡಂ ರೀ ನಿಮ್ಮ ಕಾಲ ಬೀಳತೇನಿ, ನನ್ನ ಲವ್ ನಿಮ್ಮ ಕೈಯಾಗ ಐತಿ ರೀ.., ನಾ ಎಸ್ಸೆಸ್ಸೆಲ್ಸಿ ಪೇಪರ್‌ದಾಗ ಪಾಸ್ ಆದರಷ್ಟೇ ನನ್ನ ಲವ್ ಮಾಡ್ತೀನಿ ಅಂದಾಳ ರೀ ನನ್ನ ಹುಡುಗಿ. ಈ 500 ರೂ. ತಗೊಂಡು ನೀವ ಚಾ ಕುಡಿರಿ ಸರ್ ರೀ ನನ್ನ ಪಾಸ್ ಮಾಡರಿ' ಎಂದು ವಿದ್ಯಾರ್ಥಿ ಬರೆದಿರುವುದು ವೈರಲ್ ಆಗಿರುವ ಉತ್ತರ ಪತ್ರಿಕೆಯಲ್ಲಿ ಕಂಡುಬಂದಿದೆ. ಇನ್ನು ಇದೇ ಉತ್ತರ ಪತ್ರಿಕೆಯಲ್ಲಿ 500 ರೂ. ನೋಟನ್ನು ಕೂಡ ಇಟ್ಟಿದ್ದಾನೆ. ಇನ್ನು ವಿದ್ಯಾರ್ಥಿಯ ಹೆಸರು ಮೌಲ್ಯಮಾಪಕರಿಗೆ ತಿಳಿಯುವುದಿಲ್ಲ. ಹೀಗಾಗಿ, ವಿದ್ಯಾರ್ಥಿ ಯಾರೆಂಬುದು ಪತ್ತೆಯಾಗಿಲ್ಲ.

ಇದನ್ನೂ ಓದಿ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ್ದು ಒಪ್ಪುವಂತದ್ದಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಇತ್ತೀಚೆಗೆ ಹಿಂದಿಯಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೊಬ್ಬ ತನ್ನನ್ನು ಪಾಸ್ ಮಾಡುವುದಕ್ಕೆ ವಿಚಿತ್ರವಾಗಿ ಬೆದರಿಕೆ ಹಾಕಿದ್ದನು. ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವವರಿಗೆ ಬ್ಲಾಕ್‌ಮೇಲ್ ಮಾಡಿರುವ ಅಪರೂಪದ ಘಟನೆ ವರದಿಯಾಗಿತ್ತು. 'ಸರ್/ಮೇಡಂ, ನಾನು ನನಗೆ ತಿಳಿದಷ್ಟು ಉತ್ತರವನ್ನು ಬರೆದಿದ್ದೇನೆ. ಈಗ ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ದಯವಿಟ್ಟು ನನ್ನನ್ನು ಪಾಸ್ ಮಾಡಿ, ನಾನು ಪಾಸ್ ಆಗದಿದ್ದರೆ ನಮ್ಮ ಇಡೀ ಕುಟುಂಬ ಸಾಯುತ್ತದೆ. ನಂತರ ನಾವು ದೆವ್ವಗಳಾಗಿ ನಿಮ್ಮೆಲ್ಲರನ್ನು ಹೆದರಿಸಿ ಬೆದರಿಸುತ್ತೇವೆ. ನನ್ನನ್ನು ಪಾಸ್ ಮಾಡದೇ ಇದ್ದರೆ ನಿಮಗೆ ಡೆಂಗ್ಯೂ ಬರುತ್ತದೆ' ಎಂದು ಶಾಪ ಹಾಕಿದ್ದಾನೆ. ಈ ವಿಚಿತ್ರ ಫೋಟೋವನ್ನು ಸಂಬಂಧಪಟ್ಟ ಮೌಲ್ಯಮಾಪಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಬೆಳಗಾವಿ ವಿದ್ಯಾರ್ಥಿಯ ಉತ್ತರ ಪತ್ರಿಕೆ ವೈರಲ್ ಆಗಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ