ಅರ್ಧ ವರ್ಷ ಕಳೆದರೂ ಶಾಲಾ ವಿದ್ಯಾರ್ಥಿಗಳಿಗೆ ಶೂ ಇಲ್ಲ..!

By Kannadaprabha News  |  First Published Sep 6, 2023, 4:39 AM IST

ಬಿಬಿಎಂಪಿಯಲ್ಲಿ 93 ಶಿಶು ವಿಹಾರ, 16 ಪ್ರಾಥಮಿಕ ಶಾಲೆ, 33 ಪ್ರೌಢ ಶಾಲೆ ಹಾಗೂ 19 ಪದವಿ ಪೂರ್ವ ಕಾಲೇಜಿನಲ್ಲಿ ಇರುವ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಕಪ್ಪು ಬಣ್ಣದ ಶೂ, ಕಂದು ಹಾಗೂ ನೀಲಿ ಬಣ್ಣದ ಕ್ಯಾನ್‌ವಾಸ್‌ ಶೂ ಮತ್ತು ಕಾಲಚೀಲ ನೀಡಬೇಕು. ಪ್ರಸಕ್ತ ಶೈಕ್ಷಣಕ ವರ್ಷ ಆರಂಭಗೊಂಡು ಮೂರು ತಿಂಗಳು ಪೂರ್ಣಗೊಂಡಿದ್ದರೂ ಮಕ್ಕಗಳಿಗೆ ಶೂ ನೀಡುವ ಕಾರ್ಯವನ್ನು ಬಿಬಿಎಂಪಿ ಮಾಡಿಲ್ಲ.


ಬೆಂಗಳೂರು(ಸೆ.06):  ಬಿಬಿಎಂಪಿ ಶಾಲೆ-ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಮೂರು ತಿಂಗಳು ಮುಕ್ತಾಯಗೊಂಡರೂ ಇನ್ನೂ ‘ಶೂ’ ಸಿಕ್ಕಿಲ್ಲ. ಬಿಬಿಎಂಪಿಯಲ್ಲಿ 93 ಶಿಶು ವಿಹಾರ, 16 ಪ್ರಾಥಮಿಕ ಶಾಲೆ, 33 ಪ್ರೌಢ ಶಾಲೆ ಹಾಗೂ 19 ಪದವಿ ಪೂರ್ವ ಕಾಲೇಜಿನಲ್ಲಿ ಇರುವ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಕಪ್ಪು ಬಣ್ಣದ ಶೂ, ಕಂದು ಹಾಗೂ ನೀಲಿ ಬಣ್ಣದ ಕ್ಯಾನ್‌ವಾಸ್‌ ಶೂ ಮತ್ತು ಕಾಲಚೀಲ ನೀಡಬೇಕು. ಪ್ರಸಕ್ತ ಶೈಕ್ಷಣಕ ವರ್ಷ ಆರಂಭಗೊಂಡು ಮೂರು ತಿಂಗಳು ಪೂರ್ಣಗೊಂಡಿದ್ದರೂ ಮಕ್ಕಗಳಿಗೆ ಶೂ ನೀಡುವ ಕಾರ್ಯವನ್ನು ಬಿಬಿಎಂಪಿ ಮಾಡಿಲ್ಲ.

ಎರಡು ಬಾರಿ ಟೆಂಡರ್‌:

Tap to resize

Latest Videos

ವಿದ್ಯಾರ್ಥಿಗಳಿಗೆ ಶೂ ಖರೀದಿಸಿ ವಿತರಿಸಲು ಕಳೆದ ಮಾಚ್‌ರ್‍ನಿಂದ ಒಟ್ಟು ಎರಡು ಬಾರಿ ಟೆಂಡರ್‌ ಆಹ್ವಾನಿಸಲಾಗಿತ್ತಾದರೂ ಯಾವುದೇ ಪೂರೈಕೆದಾರರು ಟೆಂಡರ್‌ನಲ್ಲಿ ಭಾಗವಹಿಸಲಿಲ್ಲ. ಹೀಗಾಗಿ, ಡಾ. ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್‌) ಸರ್ಕಾರದಿಂದ 4ಜಿ ವಿನಾಯಿತಿ ಮೂಲಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ ಶೂ ಸರಬರಾಜು ಮಾಡುವಂತೆ ಲಿಡ್ಕರ್‌ಗೆ ಕಾರ್ಯಾದೇಶವನ್ನು ನೀಡಲಾಗಿದೆ. ಆದರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಕಾಲಿನ ಅಳತೆ ತೆಗೆದುಕೊಳ್ಳಲು 45 ದಿನ ಸಮಯ ಬೇಕು. ನಂತರ ಸರಬರಾಜು ಮಾಡುವುದಾಗಿ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹುತೇಕ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯದ ಬಳಿಕ ಶೂ ದೊರೆಯುವ ಸಾಧ್ಯತೆ ಇದೆ.

ಎಲ್ಲಿ ನೋಡಿದ್ರೂ ಶಾಲಾ ಕಟ್ಟಡದಲ್ಲಿ ಬಿರುಕು: ಮೂಲಭೂತ ಸೌಕರ್ಯವಿಲ್ಲದೇ ಸ್ಕೂಲ್‌ ಅಧ್ವಾನ..!

1.17 ಕೋಟಿ ವೆಚ್ಚ

ಲಿಡ್ಕರ್‌ ಸಂಸ್ಥೆಯು ಕಪ್ಪು ಬಣ್ಣದ ಶೂಗೆ .235ರಿಂದ .246 ದರ ನಿಗದಿ ಪಡಿಸಿದೆ. ಸಾಕ್ಸ್‌ಗೆ .40ರಿಂದ .44, ಕಂದು ಬಣ್ಣದ ಕ್ಯಾನ್‌ವಾಸ್‌ ಶೂಗೆ .227ರಿಂದ .238 ಹಾಗೂ ನೀಲಿ ಬಣ್ಣದ ಕ್ಯಾನ್‌ವಾಸ್‌ ಶೂಗೆ .303 ದರ ನಿಗದಿ ಪಡಿಸಿದೆ.
ಶಿಶು ವಿಹಾರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕಪ್ಪು ಬಣ್ಣದ ಶೂ ಮತ್ತು ಸಾಕ್ಸ್‌ ನೀಡಲು .47,78,585 ಹಾಗೂ ಶಿಶುವಿಹಾರ, ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕಂದು ಬಣ್ಣದ ಶೂ ಹಾಗೂ ಸಾಕ್ಸ್‌ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನೀಲಿ ಬಣ್ಣದ ಶೂ ಹಾಗೂ ಸಾಕ್ಸ್‌ಗೆ .69,61,959 ಸೇರಿದಂತೆ ಒಟ್ಟು .1,17,40,544 ವೆಚ್ಚ ಮಾಡಲಾಗುತ್ತಿದೆ.

ಶೂ ವಿತರಣೆಗೆ ಎರಡು ಬಾರಿ ನಡೆಸಿದ ಟೆಂಡರ್‌ನಲ್ಲಿ ಯಾವುದೇ ವ್ಯಕ್ತಿಗಳು ಭಾಗವಹಿಸಿಲ್ಲ. ಹೀಗಾಗಿ, ಲಿಡ್ಕರ್‌ ಸಂಸ್ಥೆಗೆ 4ಜಿ ವಿನಾಯಿತಿ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಮಕ್ಕಳಿಗೆ ಶೂ ಲಭ್ಯವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. 

click me!