ಖಾಸಗಿ ವಿಶ್ವವಿದ್ಯಾಲಯಗಳ ಪ್ರತ್ಯೇಕ ಪ್ರವೇಶ ಪರೀಕ್ಷೆಗೆ ನಿರ್ಬಂಧ: ಸಚಿವ ಸುಧಾಕರ್

By Kannadaprabha News  |  First Published Sep 20, 2024, 12:39 PM IST

ಸರ್ಕಾರದ ನಿರ್ಧಾರ ವೃತ್ತಿಪರ ಕೋರ್ಸುಗಳನ್ನು ನಡೆಸುತ್ತಿರುವ ರಾಜ್ಯದ 17 ಖಾಸಗಿ ವಿವಿಗಳು ಸರ್ಕಾರದೊಂದಿಗಿನ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ. 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ ಹಾಗಾಗಿ 2025-26ನೇ ಸಾಲಿನಿಂದ ಇದು ಜಾರಿಗೆ ಬರಲಿದೆ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ 


ಬೆಂಗಳೂರು(ಸೆ.20):  ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಇನ್ನು ಮುಂದೆ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸರ್ಕಾರಿ ಕೋಟಾ ಹೊರತುಪಡಿಸಿದ ಸೀಟುಗಳಿಗೆ ತಮ್ಮದೇ ಪ್ರವೇಶ ಪರೀಕ್ಷೆ ನಡೆಸದಂತೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಬದಲಿಗೆ ಸರ್ಕಾರ, ಶಿಕ್ಷಣ ಸಂಸ್ಥೆ ಗಳ ಒಕ್ಕುಟ, ವಿವಿಧ ಪ್ರಾಧಿಕಾರಗಳು ನಡೆಸುವ ಸಿಇಟಿ, ಕಾಮೆಡ್-ಕೆ, ಜೆಇಇ, ಗೇಟ್ ಪರೀಕ್ಷೆಗಳನ್ನು ಮಾತ್ರ ಪ್ರವೇಶಕ್ಕೆ ಮಾನದಂಡವಾಗಿ ಪರಿಗಣಿಸಲು ಸೂಚಿಸಿದೆ. ಇದಕ್ಕೆ ಖಾಸಗಿ ವಿವಿಗಳೂ ಒಪ್ಪಿಗೆ ನೀಡಿವೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಸರ್ಕಾರದ ನಿರ್ಧಾರ ವೃತ್ತಿಪರ ಕೋರ್ಸುಗಳನ್ನು ನಡೆಸುತ್ತಿರುವ ರಾಜ್ಯದ 17 ಖಾಸಗಿ ವಿವಿಗಳು ಸರ್ಕಾರದೊಂದಿಗಿನ ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ. 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ ಹಾಗಾಗಿ 2025-26ನೇ ಸಾಲಿನಿಂದ ಇದು ಜಾರಿಗೆ ಬರಲಿದೆ. ಪ್ರತೀ ವರ್ಷ ಪ್ರವೇಶ ಪ್ರಕ್ರಿಯೆ ನಡೆಸುವ ಮೊದಲು ಇವುಗಳಲ್ಲಿ ಯಾವ ಪರೀಕ್ಷಾ ಫಲಿತಾಂಶವು ಮಾನದಂಡ ವಾಗಿ ಪರಿಗಣಿಸುತ್ತೇವೆ ಎಂದು ನಿರ್ಧರಿಸಿ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು. 

Tap to resize

Latest Videos

undefined

ಸರ್ಕಾರ ಹೊರಗಿಟ್ಟು ಖಾಸಗಿ ವಿವಿಗಳ ಆಡಳಿತ ಸಭೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸರ್ಕಾರ

ಒಂದೇ ಕೋರ್ಸಿಗೆ ಹಲವು ಪ್ರದೇಶ ಪರೀಕೆ ಬರೆಯುವುದರಿಂದ ಮಕ್ಕಳಿಗೆ ಹೊರೆಯಾಗುತ್ತಿದೆ. ಇದನ್ನು ಆದಷ್ಟು ಕಡಿಮೆ ಮಾಡವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ಪ್ರವೇಶ ಪರೀಕ್ಷೆಗಳಲ್ಲಿ ಯಾವುದೇ ಅನುಮಾನಗಳಿಗೆ ಆಸದವಾಗಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ಹಾಗೂ ವಿವಿಧ ಪ್ರಾಧಿಕಾರಗಳು ನಡೆಸುವ ಪ್ರವೇಶ ಪರೀಕ್ಷೆಗಳನ್ನು ಮಾತ್ರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಮಾನದಂಡವಾಗಿ ಪರಿಗಣಿಸಲು ಸೂಚಿಸಲಾಗಿದೆ ಎಂದರು. 
ಸದ್ಯ ಶೇ.40ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾ ಸೀಟುಗಳಾಗಿ ಖಾಸಗಿ ವಿವಿಗಳು ನೀಡುತ್ತಿವೆ. ಉಳಿದ ಶೇ.60ರಷ್ಟು ಸೀಟುಗಳಲ್ಲಿ ನೀಡುತ್ತಿವೆ. ಉಳಿದ ಶೇ.60ರಷ್ಟು ಸೀಟುಗಳಲ್ಲಿ ಮಂಡಳಿ, ಸೀಟುಗಳಾಗಿದ್ದು ಅವುಗಳನ್ನು ಕೆಲವು ವಿವಿಗಳು ಬೇರೆ ಬೇರೆ ಪ್ರವೇಶ ಪರೀಕ್ಷೆಗಳ ರಾಂಕಿಂಗ್ ಅಭ್ಯರ್ಥಿಗಳನ್ನು, ಇನ್ನು ಕೆಲವು ತಮ್ಮದೇ ಪ್ರವೇಶ ಪರೀಕ್ಷೆ ಮೂಲಕ  ಭರ್ತಿ ಮಾಡುತ್ತಿದ್ದವು.

ಶುಲ್ಕ ನಿಯಂತ್ರಣಕ್ಕೆ ಸಮಿತಿ

ಕಾಲೇಜುಗಳಲ್ಲಿ ಸರ್ಕಾರೇತರ ಸೀಟುಗಳಿಗೆ ನಿಯಮಾನುಸಾರ ಶುಲ್ಕ ನಿಗದಿಮಾಡಲು ಬರುವುದಿಲ್ಲ. ಹಾಗಾಗಿ ಈ ಸಂಬಂಧ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ಮಾಡಲಾಗುತ್ತದೆ. ಆ ಸಮಿತಿ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆಯಬೇಕಾಗುತ್ತದೆ ಎಂದರು.

ವಿವಿ ಪ್ರವೇಶ, ಪರೀಕ್ಷೆಗಳು, ಫಲಿತಾಂಶಕ್ಕೆ ಏಕರೂಪ ವೇಳಾಪಟ್ಟಿ

ಬೆಂಗಳೂರು:  ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪ್ರಕ್ರಿಯೆ, ಪರೀಕ್ಷಾ ವೇಳಾಪಟ್ಟಿ, ಫಲಿತಾಂಶ ಪ್ರಕಟಣೆಗೆ ರೂಪಿಸಿರುವ ಏಕರೂಪ ವೇಳಾಪಟ್ಟಿಯು 2025-26ನೇ ಸಾಲಿನಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಈ ವರ್ಷ ಮಾತ್ರ ಕೆಲ ವಿವಿಗಳಿಗೆ ದಿನಾಂಕ ವಿಸ್ತರಿಸಲು ವಿನಾಯಿತಿ ನೀಡಲಾಗಿದೆ ಎಂದು ಸಚಿವ ಸುಧಾಕ‌ರ್ ತಿಳಿಸಿದರು.

click me!