ಕರ್ನಾಟಕ CET, NEET 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ ಕೆಇಎ, 16,748 ಸೀಟುಗಳು ಉಳಿಕೆ

By Gowthami K  |  First Published Sep 18, 2024, 9:29 PM IST

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 16,748 ಸೀಟುಗಳು ಉಳಿಕೆಯಲ್ಲಿದ್ದು, ಎಂಜಿನಿಯರಿಂಗ್ ನಲ್ಲಿ‌ 3,126 ಮತ್ತು ವೈದ್ಯಕೀಯದಲ್ಲಿ 383 ಸೀಟುಗಳು ಲಭ್ಯವಿದೆ.


ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದೆ. ವಿಭಾಗವಾರು ಸೀಟು ಹಂಚಿಕೆ ಮಾಡಿ ಫಲಿತಾಂಶ ಪ್ರಕಟಿಸಿದೆ. ಒಟ್ಟು 16,748 ಸೀಟು ಉಳಿಕೆಯಲ್ಲಿದೆ.

ಎಂಜಿನಿಯರಿಂಗ್ ನಲ್ಲಿ‌ 3,126; ವೈದ್ಯಕೀಯದಲ್ಲಿ 383 ಸೀಟು ಉಳಿಕೆಯಲ್ಲಿದೆ. ಒಟ್ಟು‌ 1,29,417 ಸೀಟುಗಳ ಪೈಕಿ 1,12,677 ಸೀಟುಗಳು‌ ಹಂಚಿಕೆಯಾಗಿದೆ. ಎಂಜಿನಿಯರಿಂಗ್ ಕೋರ್ಸ್ ಗಳಿಗೆ 73,847 ಸೀಟು ಹಂಚಿಕೆಯಾಗಿದೆ. ಇದರಲ್ಲಿ 3,126 ಸೀಟು ಉಳಿಕೆಯಾಗಿದೆ.

Tap to resize

Latest Videos

undefined

ತೆಲುಗು ಬಿಗ್‌ಬಾಸ್‌ ನಲ್ಲಿ ಪ್ರೇಮಕಥೆ, ಒಂದೇ ಕಪ್‌ ನಲ್ಲಿ ಕಾಫಿ ಹೀರಿದ ಮಂಗಳೂರು ಶೆಟ್ಟಿ ಬೆಂಗಳೂರು ಯಶ್ಮಿ ಗೌಡ!

ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 8,798 ಸೀಟು ಹಂಚಿಕೆಯಾಗಿದ್ದು, 383 ಮ್ಯಾನೇಜ್ಮೆಂಟ್ ಸೀಟು ಮಾತ್ರ ಹಂಚಿಕೆಗೆ ಬಾಕಿ‌ ಇವೆ. ದಂತ ವೈದ್ಯಕೀಯ ಕೋರ್ಸ್ ನಲ್ಲಿ 2,636 ಸೀಟು ಹಂಚಿಕೆ ಆಗಿದ್ದು, ಇನ್ನೂ 14 ಸೀಟು ಮಾತ್ರ ಉಳಿದಿವೆ. ಬಿ-ಫಾರ್ಮಾ ಮತ್ತು ಫಾರ್ಮಾ- ಡಿ ಕೋರ್ಸ್ ಗಳ ಎಲ್ಲ ಸೀಟು ಹಂಚಿಕೆಯಾಗಿವೆ.

ಕೃಷಿ ಕೋರ್ಸ್ ನಲ್ಲಿ 2,782 ಸೀಟುಗಳ ಪೈಕಿ 12 ಸೀಟು ಮಾತ್ರ ಲಭ್ಯವಿದೆ. ಆಯುಷ್ ನಲ್ಲಿ ‌ 5,790 ಸೀಟುಗಳು ಹಂಚಿಕೆಯಾಗಿದ್ದು, ಇದರಲ್ಲಿ 2,477 ಸೀಟು ಉಳಿಕೆಯಲ್ಲಿದೆ. ಯೋಗಾ, ನ್ಯಾಚುರೋಪತಿಯಲ್ಕಿ 374 ಸೀಟು ಹಂಚಿಕೆಯಾಗಿದ್ದು, ಇದರಲ್ಲಿ 34 ಸೀಟು ಬಾಕಿ‌ ಇವೆ. ಪಶುವೈದ್ಯ ಕೋರ್ಸ್ ನಲ್ಲಿ‌ 315 ಸೀಟು ಹಂಚಿಕೆ
ಇನ್ನೂ ಒಂದು ಸೀಟು ಮಾತ್ರ ಲಭ್ಯವಿದೆ.

ದೇಶದ ರಾಜಕೀಯದ ಇತಿಹಾಸದಲ್ಲಿ ಅತಿ ಹೆಚ್ಚು ಸಮಯ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಮಹಿಳೆಯರು

ನರ್ಸಿಂಗ್ ಕೋರ್ಸ್ ನಲ್ಲಿ 14,448 ಸೀಟು ಹಂಚಿಕೆಯಾಗಿದ್ದು, ಇದರಲ್ಲಿ 10,194 ಸೀಟು ಬಾಕಿ ಉಳಿಕೆಯಾಗಿದೆ. ಆರ್ಕಿಟೆಕ್ಚರ್ ಕೋರ್ಸ್ ನಲ್ಲಿ‌ 484 ಸೀಟುಗಳು ಹಂಚಿಕೆಯಾಗಿದ್ದು, 498 ಸೀಟು ಬಾಕಿ‌  ಉಳಿಕೆಯಾಗಿದೆ. ಕರ್ನಾಟಕ ‌ಪರೀಕ್ಷಾ ಪ್ರಾಧಿಕಾರ ‌ನಿರ್ದೇಶಕ ಪ್ರಸನ್ನ ಈ ಬಗ್ಗೆ  ಮಾಹಿತಿ ನೀಡಿದ್ದಾರೆ.

click me!