: ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಇವಿಎಂ ಬಳಸಿಕೊಂಡು ಸರ್ಕಾರಿ ಶಾಲೆಯ ಪುಟಾಣಿಗಳು ಸೇರಿ 'ಶಾಲಾ ಸಂಸತ್ ಚುನಾವಣೆ' ನಡೆಸುವ ಮೂಲಕ ಶಾಲೆಯ ಪುಟಾಣಿ ಗಮನ ಸೆಳೆದಿದ್ದಾರೆ.
ಚಿಕ್ಕೋಡಿ (ಜೂ.23) : ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಇವಿಎಂ ಬಳಸಿಕೊಂಡು ಸರ್ಕಾರಿ ಶಾಲೆಯ ಪುಟಾಣಿಗಳು ಸೇರಿ 'ಶಾಲಾ ಸಂಸತ್ ಚುನಾವಣೆ' ನಡೆಸುವ ಮೂಲಕ ಶಾಲೆಯ ಪುಟಾಣಿ ಗಮನ ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ 2023-24ನೇ ಸಾಲಿಗಾಗಿ ಶಾಲಾ ಸಂಸತ್ ಆಡಳಿತ ಮಂಡಳಿಗೆ ಅಧಿಕೃತ ಚುನಾವಣೆ ನಡೆಸಿದರು. ಚುನಾವಣೆಗೆ ಜೂನ್ 16ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಜೂನ್ 17 ರಂದು ನಾಮಪತ್ರ ಸಲ್ಲಿಕೆ, ಅವತ್ತೆ ನಾಮಪತ್ರ ಪರಿಶೀಲನೆ ಹಾಗೂ ಹಿಂಪಡೆಯಲು ಕೊನೆ ದಿನವಾಗಿತ್ತು.
ಜೂನ್ 17& 18 ರಂದು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ಅವಕಾಶ. ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದ ವಿದ್ಯಾರ್ಥಿಗಳು. ಜೂನ್ 19ರಂದು ಮಧ್ಯಾಹ್ನ 2:30 ರಿಂದ 4:30 ರವರೆಗೆ ಮತದಾನ ನಡೆಯಿತು. ಸರದಿ ಸಾಲಿನಲ್ಲಿ ಬಂದು ಮತದಾನ ಮಾಡಿದ ವಿದ್ಯಾರ್ಥಿಗಳು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೆ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿ ನೇಮಕ. ಶಾಲಾ ಸಿಬ್ಬಂದಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಂಬಲವಾಡ ಗ್ರಾಮಸ್ಥರು..
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಶಿಕ್ಷಣ ಸಚಿವರ ಮನವಿ