ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ರಾಷ್ಟ್ರಪತಿ ನರೇಂದ್ರ ಮೋದಿ. ಇದು ಶಾಲಾ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಕೊಟ್ಟಉತ್ತರ.
ಬೀದರ್ (ಜೂ.22) : ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ರಾಷ್ಟ್ರಪತಿ ನರೇಂದ್ರ ಮೋದಿ. ಇದು ಶಾಲಾ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಕೊಟ್ಟಉತ್ತರ. ಕಲುಷಿತ ನೀರು ಸೇವನೆಯಿಂದ ಅಸ್ವಸ್ತಗೊಂಡವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಕರಕ್ಯಾಳ ಗ್ರಾಮಕ್ಕೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಲ್ಲಿನ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದಾಗ ಈ ಉತ್ತರಗಳು ಬಂದಿವೆ.
ಸಚಿವ ಈಶ್ವರ ಖಂಡ್ರೆ(Eshwar khandre) ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಶಾಲಾ ಮಕ್ಕಳು, ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಥಟ್ ಅಂತ ಸ್ಪಷ್ಟವಾಗಿ ಹೇಳಿದ ಸರ್ಕಾರಿ ಶಾಲಾ ಮಕ್ಕಳು, ರಾಷ್ಟ್ರಪತಿ ಹೆಸರು ಹೇಳುವ ಸಂದರ್ಭ ಎಡವಟ್ಟು ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿ ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದರು. ಸಚಿವ ಖಂಡ್ರೆ ಅಧಿಕಾರಿಗಳನ್ನು ತಮ್ಮತ್ತ ಕರೆದು ಇದೇನ್ರಿ ಎಂದು ಹೇಳಿ ನಮ್ಮ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಎಂದು ಹೇಳಿದರಲ್ಲದೆ, ರಾಜ್ಯದಲ್ಲಿರುವ ಜಿಲ್ಲೆಗಳೆಷ್ಟುಎಂದು ಕೇಳಿದಾಗ ವಿದ್ಯಾರ್ಥಿಗಳಿರಲಿ ಆ ಶಾಲೆಯ ಶಿಕ್ಷಕರಿಗೂ ಗೊತ್ತಿರಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಸಚಿವರು ಮಕ್ಕಳನ್ನು ಸುಧಾರಿಸಬೇಕಾದ ನೀವೇ ಹೀಗಾದರೆ ಹೇಗೆ ಎಂದು ಪ್ರಶ್ನಿಸಿ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ, ಮಕ್ಕಳ ಹಾಜರಾತಿ ಬಗ್ಗೆ ಮಾಹಿತಿ ಪಡೆದು ಸಸಿ ನೆಟ್ಟು ದೇಶ ಉಳಿಸೋಣ, ಹಸಿರೇ ಉಸಿರು ಎಂಬ ಘೋಷಣೆಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.
ಕಾಂಗ್ರೆಸ್ ಗ್ಯಾರಂಟಿ ಜಾರಿಯಿಂದ ಬಿಜೆಪಿಗೆ ನಡುಕ: ಸಚಿವ ಈಶ್ವರ ಖಂಡ್ರೆ