Ballari Schools Closed: ಬಳ್ಳಾರಿಯಲ್ಲಿ ಶಾಲೆಗಳು ಕಾಲೇಜುಗಳು ಬಂದ್, ರಾತ್ರಿ 8 ರಿಂದಲೇ ನೈಟ್ ಕರ್ಫ್ಯೂ

By Suvarna News  |  First Published Jan 15, 2022, 3:54 PM IST

ಈ ಮಧ್ಯೆ ಗಡಿನಾಡು ಬಳ್ಳಾರಿ ಜಿಲ್ಲೆಗೂ ಕೊರೊನಾ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಬಳ್ಳಾರಿಯಲ್ಲಿ  ರಾತ್ರಿ 8 ರಿಂದ ಮುಂಜಾನೆ 6 ರ ವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ಬಳ್ಳಾರಿ(ಜ.15): ರಾಜ್ಯಾದ್ಯಂತ  ಕೊರೊನಾ (corona) ಅಬ್ಬರ ಜೋರಾಗಿದ್ದು, ಶಾಲೆ-ಕಾಲೇಜುಗಳನ್ನು ಜಿಲ್ಲೆಗನುಗುಣವಾಗಿ ಒದೊಂದಾಗಿ ಬಂದ್ ಮಾಡಲಾಗುತ್ತಿದೆ. ಈ ಮಧ್ಯೆ ಗಡಿನಾಡು ಬಳ್ಳಾರಿ (ballari) ಜಿಲ್ಲೆಗೂ ಕೊರೊನಾ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಬಳ್ಳಾರಿಯಲ್ಲಿ  ರಾತ್ರಿ 8 ರಿಂದ ಮುಂಜಾನೆ 6 ರ ವರೆಗೂ ನೈಟ್ ಕರ್ಫ್ಯೂ (Night curfew) ಜಾರಿ ಮಾಡಿ ಆದೇಶ ಹೊರಡಿಲಾಗಿದೆ. ಶಾಲೆ, ಜಿಮ್, ವಿವಿಧ ಪ್ರಾರ್ಥನಾ ಮಂದಿರ, ದೇವಾಲಯ, ಚಿತ್ರಮಂದಿರ , ಈಜುಕೊಳ, ಸಂಪೂರ್ಣ ಬಂದ್ ಮಾಡಿ ಜಿಲ್ಲಾಧಿಕಾರಿ ಡಾ. ಜನಾರ್ದನ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಬಳ್ಳಾರಿಯಲ್ಲಿ ಕಳೆದ  ಡಿಸೆಂಬರ್ 31ಕ್ಕೆ ಶೇ0.14ರಷ್ಟಿದ್ದ ಕೊರೊನಾ ಸೋಂಕಿನ ಪ್ರಮಾಣ ಜನವರಿ 14ಕ್ಕೆ ಶೇ.10ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ತಾಲೂಕಿನಲ್ಲಿ ಪಾಸಿಟಿವ್ ರೇಟ್ ಶೇ.13ರನ್ನು ದಾಟಿ ಗಂಭೀರ ರೀತಿಯಲ್ಲಿ ಹೆಚ್ಚಳವಾಗುತ್ತಿದೆ.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮತ್ತು ಕಾಲೇಜುಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬಳ್ಳಾರಿ ಜಿಲ್ಲಾಡಳಿತ ಭವನದ 13 ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆಂದು ಜಿಲ್ಲಾಡಳಿತದಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದೆ.  ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತದ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಇದರ  ಬೆನ್ನಲ್ಲೇ ಬಳ್ಳಾರಿ ಜಿಲ್ಲಾಧಿಕಾರಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.

Tap to resize

Latest Videos

undefined

ಬಳ್ಳಾರಿಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪಾಸಿಟಿವ್ ರೇಟ್ ಗಣನೀಯ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಜನರ ಓಡಾಟವನ್ನು ನಿಯಂತ್ರಿಸಲು ರಾತ್ರಿ 8 ರಿಂದ ಮುಂಜಾನೆ 6 ರ ವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.  ಈ ಮೂಲಕ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ನೈಟ್ ಕರ್ಫ್ಯೂನಲ್ಲಿ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಬಳ್ಳಾರಿಯಲ್ಲಿ ಜನವರಿ 31ರವರೆಗೂ ನೈಟ್  ಕರ್ಫ್ಯೂ ಜಾರಿಯಲ್ಲಿರಲಿದೆ. 

"

Covid 19 Spike: ಮಂಡ್ಯದ ಒಂದೇ ಶಾಲೆಯ 20 ಮಕ್ಕಳಿಗೆ ಕೊರೋನಾ: ಸ್ಕೂಲ್ ಸೀಲ್ ಡೌನ್!

ಇನ್ನು ಬಳ್ಳಾರಿಯ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಈ ನಡುವೆ ನಗರದಲ್ಲಿ ಹೆಚ್ಚಿನ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಶಾಲಾ ಕಾಲೇಜ್ ಬಂದ್ ಗೆ ಆದೇಶ ನೀಡಲಾಗಿದೆ. ಜಿಂದಾಲ್ ಪ್ರದೇಶದ ಶಾಲೆ, ಹಾಸ್ಟೇಲ್ ಗಳನ್ನು ಸಂಪೂರ್ಣ ಮುಚ್ಚುವಂತೆ ತಿಳಿಸಲಾಗಿದೆ. ಜನವರಿ 23 ರ ರವರೆಗೂ ಶಾಲಾ ಕಾಲೇಜ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜೊತೆಗೆ ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯಗಳು, ನಾನಾ ತರಹದ ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ಬಂದ್ ಮಾಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಷ್ಟಕರವಾಗುವುದರಿಂದ ಜೊತೆಗೆ ಆರೋಗ್ಯದ ಹಿತದೃಷ್ಠಿಯಿಂದಲೂ ದೇವಾಲಯ, ಮಸೀದಿ,ಚರ್ಚ್ , ಜೈನ ಮಂದಿರಗಳು ಹಾಗೂ ಇನ್ನಿತರ ಪ್ರಾರ್ಥನಾ ಮಂದಿರಗಳಲ್ಲಿ ಭಕ್ತಾದಿಗಳಿಗೆ ನಿಷೇಧ ಹೇರಲಾಗಿದೆ. ಜನವರಿ 31ರವರೆಗೂ ಇದು ಜಾರಿಯಲ್ಲಿರಲಿದೆ.

ಇದಲ್ಲದೆ ಜಿಲ್ಲೆಯಾದ್ಯಂತ ಎಲ್ಲಾ ಈಜುಕೊಳ, ಜಿಮ್, ಮತ್ತು ಚಿತ್ರಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ಜನವರಿ 31ರವರೆಗೂ ಬಂದ್ ಮಾಡಿ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Ballari: ವಿದ್ಯಾರ್ಥಿಗಳ ಮೇಲೆ ಕೋವಿಡ್‌ ದಾಳಿ: ಆತಂಕದಲ್ಲಿ ಪೋಷಕರು

70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್‌ : ಬಳ್ಳಾರಿ(Ballari) ನಗರದಲ್ಲಿಯೇ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ (Students) ಕೋವಿಡ್‌ ಇರುವುದು ದೃಢಗೊಂಡಿದೆ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದಂತೆಯೇ ಮಕ್ಕಳಲ್ಲಿ ಕೋವಿಡ್‌ ಇರುವುದು ಖಚಿತಗೊಳ್ಳುತ್ತಿದೆ. ಈ ವರೆಗೆ ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋವಿಡ್‌ ಇದೀಗ ಮಕ್ಕಳ(Children) ಮೇಲೆ ದಾಳಿ ನಡೆಸಿರುವುದು ಕಂಡು ಬರುತ್ತಿದೆ. ಎಲ್ಲ ಕಡೆ ವೈದ್ಯಕೀಯ ಪರೀಕ್ಷೆಯನ್ನು ಚುರುಕುಗೊಳಿಸಿದ್ದೇವೆ. ವಿದ್ಯಾರ್ಥಿಗಳಲ್ಲಿ(Students) ಹೆಚ್ಚಿನ ಸೋಂಕು ಹರಡಿಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳ ಪರೀಕ್ಷೆ ಹೆಚ್ಚಳಗೊಳಿಸಿದ್ದು, ಪರೀಕ್ಷೆ ನಡೆಸಿದಾಗ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ಕನ್ನಡಪ್ರಭಕ್ಕೆ(Kannada Prabha) ತಿಳಿಸಿದ್ದಾರೆ.

click me!