ಅಖಿಲ ಭಾರತೀಯ ಕೌನ್ಸಿಲ್ ಫಾರ್ ಟೆಕ್ನಿಕಲ್ ಸ್ಕಿಲ್ ಡೆವಲಪ್ಮೆಂಟ್(ಎಐಸಿಟಿಎಸ್‌ಡಿ) ಸಂಸ್ಥೆಯು 10ರಿಂದ 24 ವರ್ಷದೊಳಗಿನವರಿಗೆ ಆರ್ಯಭಟ ರಾಷ್ಟ್ರೀಯ ಗಣಿತ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆ ಜೂನ್ 10ರಂದು ನಡೆಯಲಿದ್ದು, ಜೂನ್ 30ಕ್ಕೆ ಫಲಿತಾಂಶ ಸಿಗಲಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 20 ಕೊನೆಯ ದಿನವಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 1.5 ಲಕ್ಷ ರೂಪಾಯಿವರೆಗೂ ಬಹುಮಾನ ಸಿಗಲಿದೆ.
ನಿಮಗೆ ಗಣಿತ ಅಂದ್ರೆ ತುಂಬಾ ಆಸಕ್ತಿ ಇದೆಯಾ? ಕೊರೊನಾ ಆರ್ಭಟದಿಂದಾಗಿ ತರಗತಿಗಳು ಬಂದ್ ಆಗಿರೋದು ಬೇಸರ ಉಂಟು ಮಾಡಿದ್ಯಾ? ಲಾಕ್‌ಡೌನ್ ಇರೋ ಈ ಸಂದರ್ಭದಲ್ಲೂ ನೀವು ಗಣಿತ ಜ್ಞಾನವನ್ನ ಓರೆ ಹಚ್ಚಿ ನೋಡಬಹುದು. ನೇರಾನೇರ ಸ್ಪರ್ಧೆಗಿಳಿದು ಎದುರಾಳಿಯನ್ನ ಎಷ್ಟರ ಮಟ್ಟಿಗೆ ಮೆಟ್ಟಿ ನಿಲ್ಲುತ್ತೀರಾ ಅಂತ ತೋರಿಸಬಹುದು. ಅದು ನೀವಿದ್ದಲ್ಲಿಂದಲೇ ಇದೆಲ್ಲವನ್ನೂ ಮಾಡಿ ತೋರಿಸಬಹುದು. ಹೌದು, ಗಣಿತದಲ್ಲಿ ಆಸಕ್ತಿ ಹೊಂದಿರುವ ಅಂತಹ ವಿದ್ಯಾರ್ಥಿಗಳಿಗಾಗೇ ಇದೀಗ ಸುವರ್ಣಾವಕಾಶವೊಂದು ಅರಸಿ ಬಂದಿದೆ. ಮನೆಯಿಂದಲೇ ಆನ್ಲೈನ್ ಮೂಲಕ ಇದರಲ್ಲಿ ಪಾಲ್ಗೊಳ್ಳಬಹುದು. ಅಂದಹಾಗೇ ಇದರಲ್ಲಿ ಭಾಗವಹಿಸಿದ್ರೆ ನಿಮ್ಮ ಜ್ಞಾನವಷ್ಟೇ ಅಲ್ಲ, ಲಕ್ಷ ಲಕ್ಷ ಹಣವನ್ನು ಗೆಲ್ಲಬಹುದು.
ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!
undefined
ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಸ್ಕಿಲ್ ಡೆವಲಪ್ಮೆಂಟ್ (ಎಐಸಿಟಿಎಸ್‌ಡಿ) 'ಆರ್ಯಭಟ್ಟ ರಾಷ್ಟ್ರೀಯ ಗಣಿತ ಸ್ಪರ್ಧೆ 2021' ಯ ಆಯೋಜಿಸಿದೆ. aictsd.com ನಲ್ಲಿ ಬಿಡುಗಡೆಯಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಈಗಾಗಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗಾಗಿ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿಯನ್ನು ಸಲ್ಲಿಸಲು ಮೇ 20 ಕೊನೆಯ ದಿನಾಂಕವಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೊಡ್ಡ ಮೊತ್ತದ ಹಣ ಗೆಲ್ಲುವ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಮೇ 20,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಪರೀಕ್ಷಾ ಫಲಿತಾಂಶವು ಜೂನ್ 30 ರಂದು ಘೋಷಣೆಯಾಗಲಿದೆ.
ಅರ್ಜಿ ಸಲ್ಲಿಕೆ ಹೇಗೆ ?: ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.aictsd.com/ ಗೆ ಭೇಟಿ ನೀಡಬೇಕು. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ನಿಮ್ಮ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಅಭ್ಯರ್ಥಿಗಳು 290/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ. ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ 48 ಗಂಟೆಯೊಳಗೆ ಅರ್ಜಿ ಸಲ್ಲಿಕೆ ವಿವರ ಮತ್ತು ಪರೀಕ್ಷೆಯ ಪ್ರವೇಶ ಪತ್ರದ ವಿವರವನ್ನು ನಿಮ್ಮ ಇ-ಮೇಲ್ ವಿಳಾಸಕ್ಕೆ ಬರಲಿದೆ.
51 ಲಕ್ಷ ರೂ. ವಿದ್ಯಾರ್ಥಿ ವೇತನ; ಶ್ರೀನಗರದ ವಿದ್ಯಾರ್ಥಿನಿಗೆ ಬಂಪರ್
ವಿಜೇತರಿಗೆ ಬಂಪರ್ ಬಹುಮಾನ: ಹೌದು.. ಆರ್ಯಭಟ್ಟ ಗಣಿತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಿಜಕ್ಕೂ ಜಾಕ್‌ಪಾಟ್ ಹೊಡೆಯಲಿದೆ. ಲಕ್ಷ ಲಕ್ಷ ರೂಪಾಯಿ ಹಣ ತಮ್ಮದಾಗಿಸಿಕೊಳ್ಳಬಹುದು. ಮೊದಲ ಸ್ಥಾನ ಪಡೆದವರಿಗೆ 1.5 ಲಕ್ಷ ಸಿಗಲಿದೆ. ಹಾಗೇ ದ್ವಿತೀಯ ಸ್ಥಾನ ವಿಜೇತರಿಗೆ 50,000 ಹಾಗೂ ತೃತೀಯ ಸ್ಥಾನ ಪಡೆದವರಿಗೆ 10,000 ರೂ. ಬಹುಮಾನ ಸಿಗಲಿದೆ.
ಏನೇನ್ ಅರ್ಹತೆ ಇರಬೇಕು?:
ಆರ್ಯಭಟ್ಟ ಗಣಿತ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿಯಿಲ್ಲ.. ಶಾಲೆ, ಕಾಲೇಜು ಎಂಬ ಹಂತಗಳ ಮಿತಿಯೂ ಇಲ್ಲ. ಕನಿಷ್ಠ 10 ರಿಂದ ಗರಿಷ್ಟ 24 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಬಹುದು.
ಸ್ಪರ್ಧೆ ಹೇಗಿರುತ್ತೆ ?:
ಮನೆಯಿಂದಲೇ ಆನ್ಲೈನ್ ಮೂಲಕ ಆರ್ಯಭಟ್ಟ ಗಣಿತ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಫರ್ಧಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆಯ ಮತ್ತು ಸಂದರ್ಶನದ ಲಿಂಕ್ ಅನ್ನು ಅವರ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ತಲುಪಿಸಲಾಗುವುದು. ಪ್ರಶ್ನೆಪತ್ರಿಕೆಯು 30 ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಹೊಂದಿರುತ್ತದೆ. ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತದೆ. ಒಟ್ಟಾರೆ ಪರೀಕ್ಷೆಯು 45 ನಿಮಿಷಗಳ ಅವಧಿಯದ್ದಾಗಿರುತ್ತದೆ. ಪರೀಕ್ಷೆ ಬರೆದ ಬಳಿಕ ಒಟ್ಟು ಟಾಪ್ 20 ವಿದ್ಯಾರ್ಥಿಗಳನ್ನು ಆನ್‌ಲೈನ್ ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಆ 20 ವಿದ್ಯಾರ್ಥಿಗಳ ಪೈಕಿ 3 ವಿದ್ಯಾರ್ಥಿಗಳನ್ನ ಮಾತ್ರ ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಜವಾಹರ ನವೋದಯ ವಿದ್ಯಾಲಯ ಸೆಲೆಕ್ಷನ್ ಟೆಸ್ಟ್ ಮುಂದೂಡಿಕೆ