ಆಂಧ್ರದ 5 ಲಕ್ಷ ವಿದ್ಯಾರ್ಥಿಗಳಿಗೆ ಇ-ಕಂಟೆಂಟ್ ಆಧರಿತ ಟ್ಯಾಬ್ ವಿತರಣೆ!

By Suvarna News  |  First Published Dec 23, 2022, 2:28 PM IST

*ಆಂಧ್ರಪ್ರದೇಶದಲ್ಲಿ ಶಿಕ್ಷಣ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರ
*ಮಕ್ಕಳಿಗೆ ಡಿಜಿಟಲ್ ಮೂಲಕ ಕಲಿಕೆಯನ್ನು ಸುಲಭವಾಗಿಸಲು ಟ್ಯಾಬ್ಲೆಟ್ ವಿತರಣೆ
* ಪ್ರತಿ ವರ್ಷ 8ನೇ ತರಗತಿ ಮಕ್ಕಳಿಗೆ ಟ್ಯಾಬ್ಲೆಟ್ ವಿತರಣೆ ಮಾಡಲಾಗುತ್ತಿದೆ.
 


ಆಂಧ್ರಪ್ರದೇಶ ಸರ್ಕಾರ (Andhra Pradesh Government) ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್, ಟ್ಯಾಬ್ ನೀಡೋ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ (YS Jagan Mohan Reddy), ಬಪಟ್ಲಾ ಜಿಲ್ಲೆಯ ಯದ್ಲಪಲ್ಲಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಟ್ಯಾಬ್ ಅನ್ನು ವಿತರಿಸಿದ್ದಾರೆ. 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೈಜೂಸ್ ಸಂಸ್ಥೆಯ  ಇ-ಕಂಟೆಂಟ್ ಆಧಾರಿತ ಟ್ಯಾಬ್ಲೆಟ್‌ಗಳನ್ನು ವಿತರಿಸಿದರು. ಉತ್ತಮ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ವಿಷಯಗಳನ್ನು ಸುಲಭವಾಗಿ ಗ್ರಹಿಸಲು ಪ್ರತಿ ವರ್ಷ 8ನೇ ತರಗತಿ ವಿದ್ಯಾರ್ಥಿಗಳಿಗೆ ಆಂಧ್ರ ಸರ್ಕಾರ ಟ್ಯಾಬ್‌ಗಳನ್ನು (Tablet) ವಿತರಿಸಲಾಗ್ತಿದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಮತ್ತು ಮನೆಯಲ್ಲಿ ಸುಲಭವಾಗಿ ಕಲಿಯಲು ಅನುವು ಮಾಡಿಕೊಡಲು ಡಿಜಿಟಲ್ ಮೋಡ್ ಶಿಕ್ಷಣವನ್ನು ಸುಲಭಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಕಂಟೆಂಟ್ ಹೊಂದಿರುವ ಪ್ರತಿ ಟ್ಯಾಬ್‌ನ ಬೆಲೆ 32,000 ರೂ. ಆಗಿದೆ. ಇದು ವಾರ್ಷಿಕ ಕಾರ್ಯಕ್ರಮವಾಗಿದ್ದು, ಟ್ಯಾಬ್‌ಗಳ ವಿತರಣೆಯು ರಾಜ್ಯಾದ್ಯಂತ ಇನ್ನು ಒಂದು ವಾರ ಮುಂದುವರಿಯಲಿದೆ. ವಿದ್ಯಾರ್ಥಿಗಳು ಈ ಟ್ಯಾಬ್ಗಳನ್ನು ಆಫ್‌ಲೈನ್ ಮೋಡ್‌ನಲ್ಲಿಯೂ ಬಳಸಬಹುದು. 

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಜಗನ್, ಶಿಕ್ಷಕರಲ್ಲದೆ 4.59 ಲಕ್ಷ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೈಜೂಸ್ ವಿಷಯದೊಂದಿಗೆ ಲೋಡ್ ಮಾಡಲಾದ 5,18,740 ಟ್ಯಾಬ್‌ಗಳನ್ನು ಉಚಿತವಾಗಿ ವಿತರಿಸಲು ಸುಮಾರು 686 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.  ಇದೇ ವೇಳೆ ಈ ಟ್ಯಾಬ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿ ಹೇಳಿದ ಸಿಎಂ ಜಗನ್, ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ 8 ಭಾಷೆಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು ಆಧರಿಸಿ ಇದನ್ನ ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಈ ಟ್ಯಾಬ್ ಸಹಕಾರಿಯಾಗಿಲಿದೆ ಎಂದು ವಿವರಿಸಿದರು.
 

Tap to resize

Latest Videos

16ನೇ ವಯಸ್ಸಿಗೆ ಮಾಸ್ಟರ್ ಡಿಗ್ರಿ ಪಡೆದುಕೊಂಡ ಪ್ರತಿಭಾವಂತ
 
ಇನ್ನು ಟ್ಯಾಬ್ಗಳಲ್ಲಿ ಡೇಟಾವನ್ನು ಸುರಕ್ಷಿತವಾಗಿರಿಸಲು ಸುರಕ್ಷಿತ ಮೊಬೈಲ್ ಸಾಧನ ನಿರ್ವಹಣೆ ಸಾಫ್ಟ್‌ವೇರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಇದು ಯಾವುದೇ ಅನಪೇಕ್ಷಿತ ವಸ್ತುಗಳಿಗೆ ಪ್ರವೇಶವನ್ನು ಈ ಟ್ಯಾಭ್ ನಿರಾಕರಿಸಲಿದೆ.  ಹೈಸ್ಕೂಲ್ ಮಕ್ಕಳಿಗೆ ಸರ್ಕಾರ ವಿತರಿಸುವ ಈ ಟ್ಯಾಬ್‌ಗಳು ಮೂರು ವರ್ಷಗಳ ವಾರಂಟಿ ಹೊಂದಿರುತ್ತವೆ. ಒಂದು ವೇಳೆ ಟ್ಯಾಬ್ಗಳು ಕೆಟ್ಟು ಹೋದರೆ, ಸಂಬಂಧಪಟ್ಟ ಗ್ರಾಮ/ವಾರ್ಡ್ ಸಚಿವಾಲಯಕ್ಕೆ ನೀಡಿ ದುರಸ್ತಿ ಮಾಡಬಹುದು ಅಥವಾ ಬದಲಾಯಿಸಬಹುದು. ಸಂಪೂರ್ಣವಾಗಿ ಟ್ಯಾಬ್ ಕೆಟ್ಟಿದ್ದರೆ ವಿದ್ಯಾರ್ಥಿಗಳು ವಾರದೊಳಗೆ ಪರ್ಯಾಯ  ಟ್ಯಾಬ್ ಪಡೆಯಲು ಅರ್ಹರಾಗಿರುತ್ತಾರೆ.

ಗೂಗಲ್‌ನಿಂದ ಐಐಟಿ ಮದ್ರಾಸ್ ಎಐ ಕೇಂದ್ರಕ್ಕೆ 10 ಲಕ್ಷ ಡಾಲರ್ ನೆರವು!

ನಾಡು-ನೆಡು ಹಂತ-1 ಕಾಮಗಾರಿ ಪೂರ್ಣಗೊಂಡಿರುವ 15,634 ಶಾಲೆಗಳಲ್ಲಿ 6ನೇ ತರಗತಿ ಮತ್ತು ಅದಕ್ಕಿಂತ ಮೇಲ್ಪಟ್ಟ 30,032 ತರಗತಿ ಕೊಠಡಿಗಳಲ್ಲಿ ಜೂನ್, 2023 ರೊಳಗೆ ಇಂಟರಾಕ್ಟಿವ್ ಫ್ಲಾಟ್ ಪ್ಯಾನೆಲ್‌ಗಳ (ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳು) ಮೂಲಕ ಬೋಧನೆಯನ್ನು ಪರಿಚಯಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಜಗನ್ ತಿಳಿಸಿದ್ದಾರೆ. ಶೈಕ್ಷಣಿಕ ವಲಯದಲ್ಲಿ ಆಂಧ್ರ ಪ್ರದೇಶ ಸರ್ಕಾರವು ಸಾಕಷ್ಟು ಸುಧಾರಣೆಗಳನ್ನು ತರುತ್ತಿದೆ. ಅದರ ಭಾಗವಾಗಿಯೇ ಈಗ ಟ್ಯಾಬ್ಲೆಟ್ ಹಂಚಿಕೆ ಮಾಡಲಾಗುತ್ತಿದೆ. ಡಿಜಿಟಲ್ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಟ್ಯಾಬ್ ನೀಡುವುದು ಮಾತ್ರವಲ್ಲದೇ ಅವರ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯವಾಗಿರುವ ಹಲವಾರು ಕ್ರಮಗಳನ್ನು ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿದೆ. ಅವರ ಕಾರ್ಯಕಕ್ಕೆ ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ.

click me!