ವೈದ್ಯಕೀಯ ಕೋರ್ಸ್‌ ಪ್ರವೇಶ ಕ್ರೀಡಾ ಕೋಟಾ, ರ್‍ಯಾಂಕಿಂಗ್‌ ನಿಗದಿಗೆ ರಾಜ್ಯ ಹೈಕೋರ್ಟ್ ಆದೇಶ

By Gowthami KFirst Published Dec 23, 2022, 1:52 PM IST
Highlights

ಎಂಬಿಬಿಎಸ್‌ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ರಾಜ್ಯದ ಕ್ರೀಡಾ ಕೋಟಾದ ರ್‍ಯಾಂಕಿಂಗ್‌ ಅನ್ನು ಹೊಸದಾಗಿ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸರ್ಕಾರ ಮತ್ತು ರಾಜ್ಯ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.

 

ಬೆಂಗಳೂರು (ಡಿ.23): ಎಂಬಿಬಿಎಸ್‌ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ರಾಜ್ಯದ ಕ್ರೀಡಾ ಕೋಟಾದ ರ್‍ಯಾಂಕಿಂಗ್‌ ಅನ್ನು ಹೊಸದಾಗಿ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸರ್ಕಾರ ಮತ್ತು ರಾಜ್ಯ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ 18 ವರ್ಷದ ಡೈವಿಂಗ್‌ ಚಾಂಪಿಯನ್‌ ಅದಿತಿ ದಿನೇಶ್‌ರಾವ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಮಾಡಿದೆ. ಜತೆಗೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರೂಪಿಸುವ ರಾರ‍ಯಂಕಿಂಗ್‌ ಅನ್ವಯ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಕಲ್ಪಿಸುವುದನ್ನು ಕೆಇಎ ಖಾತರಿಪಡಿಸಬೇಕು ಎಂದು ನಿರ್ದೇಶಿಸಿದೆ.

Latest Videos

ಅರ್ಜಿದಾರ ಅಭ್ಯರ್ಥಿ ಅದಿತಿ ಅವರು ಎಂಬಿಬಿಎಸ್‌ ಸೀಟು ಸಿಗದೆ ಬಿಡಿಎಸ್‌ ಕೋರ್ಸ್‌ ಸೇರಿದ್ದರು. ಆದರೆ, ಮೂವರು ಚೆಸ್‌ ಆಟಗಾರರಾದ ಸಾತ್ವಿಕ್‌ ಶಿವಾನಂದ್‌, ಎಸ್‌.ಆರ್‌.ಪ್ರತಿಮಾ ಮತ್ತು ಖುಷಿ ಎಂ.ಹೊಂಬಾಳ್‌ ಅವರು ಕ್ರೀಡಾಕೋಟಾದಲ್ಲಿ ಪ್ರವೇಶ ಪಡೆದಿದ್ದರು. ಈ ಕ್ರಮವನ್ನು ಅದಿತಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. 

ಎಂಬಿಬಿಎಸ್‌ ಕಲಿಕೆಗೆ ಹಣ ಹೊಂದಿಸಲು ಹೊಲದಲ್ಲಿ ದುಡಿಯುತ್ತಿರುವ ಪ್ರತಿಭಾವಂತ!

ಕ್ರೀಡಾ ಕೋಟಾದಡಿ ಅರ್ಹತಾ ಮಾನದಂಡ ಅತ್ಯಂತ ಸ್ಪಷ್ಟವಾಗಿದೆ, ಅಭ್ಯರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ ಜಯಿಸಿರಬೇಕು ಎಂದು ಉಲ್ಲೇಖವಿದೆ. ಅದರಂತೆ ಅರ್ಜಿದಾರೆ  ಅದಿತಿ ದಿನೇಶ್‌ರಾವ್‌ ಭಾರತೀಯ ಈಜು ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್‌ಗಳಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದ್ದಾರೆ. ಆದರೂ ಆಕೆಗೆ ವೈದ್ಯಕೀಯ ಸೀಟು ಸಿಕ್ಕಿಲ್ಲ. ಆದರೆ ಮೂವರು ಚೆಸ್‌ ಆಟಗಾರರು  ಪದಕಗಳನ್ನು ಗೆದ್ದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ವಾದಿಸಿದ್ದಾರೆ. 

 

ಡಾಕ್ಟರ್‌ ಆಗೋಕು ಸೈ, ಜನಸೇವೆಗೂ ಜೈ; ಗ್ರಾ.ಪಂ ಚುನಾವಣೆ ಗೆದ್ದ ಎಂಬಿಬಿಎಸ್ ವಿದ್ಯಾರ್ಥಿನಿ

ಮೂವರು ಚೆಸ್‌ ಆಟಗಾರರು  ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಅವರು ಪದಕ ಜಯಿಸಿಲ್ಲ.  ಹೀಗಾಗಿ ಅವರು ಕ್ರೀಡಾ ಕೋಟಾದ ಮಾನದಂಡಕ್ಕೆ ಒಳಪಡುವುದಿಲ್ಲ. ಇದನ್ನು ಗುರುತಿಸುವಲ್ಲಿ ಸಮಿತಿ ವಿಫಲವಾಗಿದೆ ಎಂದು ಅರ್ಜಿ ದಾರೆ ವಾದವಾಗಿದೆ.  ಮೊದಲು ಪ್ರಕಟಿಸಿದ್ದ ಪಟ್ಟಿಯಲ್ಲಿ ಅರ್ಜಿದಾರೆ 10ನೇ ಶ್ರೇಯಾಂಕದಲ್ಲಿದ್ದರು, ಆನಂತರ ಪ್ರತಿವಾದಿಗಳಿದ್ದರು. ಆದರೆ ನಂತರ ಬಿಡುಗಡೆಯಾಧ ಪರಿಷ್ಕೃತ ರ‍್ಯಾಂಕಿಂಗ್‌ನಲ್ಲಿ ಅರ್ಜಿದಾರರು 16ನೇ ಸ್ಥಾನದಲ್ಲಿದ್ದರು, ಅದಕ್ಕೂ ಮೊದಲಿನ ರ‍್ಯಾಂಕಿಂಗ್‌ನಲ್ಲಿ ಮೂವರು ಆಟಗಾರರಿದ್ದಾರೆ. ಈ ಹಿನ್ನೆಲೆಯಲ್ಲಿ  ಇದು ಸರಿಯಲ್ಲ ಎಂದಿರುವ ನ್ಯಾಯಾಲಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರ‍್ಯಾಂಕಿಂಗ್‌ ನಿಗದಿಪಡಿಸಿ, ಕೆಇಎಗೆ ಸಲ್ಲಿಕೆ ಮಾಡಬೇಕು ಎಂದು ತನ್ನ ಆದೇಶ ಹೊರಡಿಸಿದೆ. 

 

click me!