ಅವಮಾನವಾಗಿದ್ದಕ್ಕೆ ಪೊಲೀಸ್ ಹುದ್ದೆ ತ್ಯಜಿಸಿ ಯುಪಿಎಸ್‌ಸಿ ಬರೆದು ಪಾಸಾಗಿ ಗೆದ್ದ ರೆಡ್ಡಿ!

By Suvarna News  |  First Published Apr 17, 2024, 3:36 PM IST

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪೇದೆಯೊಬ್ಬ ತನಗಾದ ಅವಮಾನವನ್ನು ಸಹಿಸದೆ ಉದ್ಯೋಗಕ್ಕೆ ರಾಜೀನಾಮೆ ನೀಡಿ  ಯುಪಿಎಸ್‌ಸಿ ಬರೆದು  ಪಾಸ್‌ ಆಗಿ ಸಾಧನೆ ಮಾಡಿದ್ದಾರೆ.


2023 ರ  UPSC ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಬ್ಬೊಬ್ಬರ ಒಂದೊಂದು ಕುತೂಹಲಕಾರಿ ಕಥೆ ಹೊರಬರುತ್ತಿದೆ. ಪೊಲೀಸ್‌ ಇಲಾಖೆಯಲ್ಲಿ ಪೇದೆಯಾಗಿದ್ದವನೊಬ್ಬನನ್ನು ವೈಯಕ್ತಿಕ ದ್ವೇಷದಿಂದ ಹೀನಾಯವಾಗಿ ಅವಮಾನಿಸಿದ್ದು, ಪರಿಣಾಮ ಪೇದೆ ಪೊಲೀಸ್‌ ಇಲಾಖೆಗೆ ರಾಜೀನಾಮೆ ನೀಡಿ ಯುಪಿಎಸ್‌ಸಿ ಬರೆದು ಇಂದು ಪಾಸ್‌ ಆಗಿ ಸಾಧನೆ ಮಾಡಿದ್ದಾರೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಉದಯ್ ಕೃಷ್ಣಾ ರೆಡ್ಡಿ ಎಂಬುವವರೇ ಈ ಸಾಧನೆ ಮಾಡಿದವರು. ಯುಪಿಎಸ್‌ಸಿಯಲ್ಲಿ  780 ನೇ ರ್ಯಾಂಕ್ ಗಳಿಸಿದ್ದಾರೆ.  ಅವರು 2013 ರಿಂದ 2018 ರವರೆಗೆ ಆಂಧ್ರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದರು. ವರದಿಯ ಪ್ರಕಾರ ವೈಯಕ್ತಿಕ ದ್ವೇಷಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ಅವಮಾನಿಸಿದ್ದರು.

Tap to resize

Latest Videos

undefined

ಸರ್ಕಲ್ ಇನ್ಸ್‌ಪೆಕ್ಟರ್ ಸುಮಾರು 60 ಪೊಲೀಸರ ಮುಂದೆ ತಮ್ಮನ್ನು ಅವಮಾನಿಸಿದರು. ಇದರಿಂದ ಬೇಸತ್ತು ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ. ಮತ್ತು ಯುಪಿಎಸ್‌ಸಿಯನ್ನು ಭೇದಿಸಿ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಉದಯ್ ಕೃಷ್ಣಾ ರೆಡ್ಡಿ ಅವರನ್ನು ಭಾರತೀಯ ಕಂದಾಯ ಸೇವೆಗೆ ನಿಯೋಜಿಸಬಹುದು, ಆದರೆ ಅವರು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗುವವರೆಗೂ ತಯಾರಿ ಮುಂದುವರಿಸುವುದಾಗಿ ಹೇಳುತ್ತಾರೆ.

UPSC CSE ಪರೀಕ್ಷೆಯು ವಿವಿಧ ಸರ್ಕಾರಿ ಇಲಾಖೆಗಳಲ್ಲಿ 1,105 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿರುವ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ಅಂತಿಮ ಫಲಿತಾಂಶಗಳನ್ನು ಏಪ್ರಿಲ್ 16 ರಂದು ಬಿಡುಗಡೆಯಾಗಿದ್ದು, ಆದಿತ್ಯ ಶ್ರೀವಾಸ್ತವ  ದೇಶಕ್ಕೆ ಟಾಪರ್ ಆಗಿದ್ದಾರೆ. 

click me!