ಈ 2 ಕಾರಣಕ್ಕೆ ವಿದೇಶಕ್ಕೆ ಹೋಗದೆ ಯುಪಿಎಸ್‌ ಬರೆದು ದೇಶಕ್ಕೇ ಟಾಪರ್‌ ಆದ ಆದಿತ್ಯ ಶ್ರೀವಾಸ್ತವ!

By Suvarna News  |  First Published Apr 17, 2024, 1:43 PM IST

2023ರ ಯುಪಿಎಸ್‌ಸಿ ಟಾಪರ್‌  ಆದಿತ್ಯ ಶ್ರೀವಾಸ್ತವ ವಿದೇಶ ಉದ್ಯೋಗಕ್ಕೆ ಹೋಗದೆ ಭಾರತದಲ್ಲೇ ಉಳಿದುಕೊಂಢಿದ್ದರು ಯಾಕೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.


ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)  2023ರ ನಾಗರಿಕ ಲೋಕ ಸೇವಾ ಪರೀಕ್ಷೆಯಲ್ಲಿ ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಲಕ್ನೋ ಮೂಲದ  ಆದಿತ್ಯ, AIR 216 ಅನ್ನು ಪಡೆದುಕೊಳ್ಳುವ ಮೂಲಕ 2022 ರಲ್ಲಿ  UPSC CSE ಪರೀಕ್ಷೆಯಲ್ಲಿ ಭಾರತೀಯ ಪೊಲೀಸ್ ಸೇವೆ (IPS) ಗೆ ಆಯ್ಕೆಯಾಗಿದ್ದರು. ಬಳಿಕ ಪಶ್ಚಿಮ ಬಂಗಾಳದ ಕೇಡರ್‌ನಲ್ಲಿ IPS ಅಧಿಕಾರಿಯಾಗಲು ತರಬೇತಿ ಪಡೆಯುತ್ತಿದ್ದರು. ಈಗ 2023ರಲ್ಲಿ ಆದಿತ್ಯ ಶ್ರೀವಾಸ್ತವ  ತಮ್ಮ IPS ತರಬೇತಿಯ ಜೊತೆಗೆ UPSC CSE 2023 ಪರೀಕ್ಷೆಗೆ ಅಧ್ಯಯನ ಮಾಡಿ ದೇಶಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಆದಿತ್ಯ ಶ್ರೀವಾಸ್ತವ ಅವರು CMS ಲಕ್ನೋದ ಅಲಿಗಂಜ್ ಶಾಖೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. 12ನೇ ತರಗತಿಯಲ್ಲೂ  95% ಅಂಕ ಪಡೆಯುವ ಮೂಲಕ  ಟಾಪರ್ ಆಗಿ ಮೂಡಿಬಂದಿದ್ದರು.  ಐಐಟಿ ಕಾನ್ಪುರದಿಂದ ಬಿಟೆಕ್ ಮತ್ತು ಎಂಟೆಕ್ ಪದವಿಯನ್ನು ಪಡೆದಿದ್ದಾರೆ. ಮಾತ್ರವಲ್ಲ ಚಿನ್ನದ ಪದಕ ವಿಜೇತರೂ ಆಗಿದ್ದಾರೆ.  ಶ್ರೀವಾಸ್ತವ ಅವರು UPSC ಮಾಡಲು ನಿರ್ಧರಿಸುವ ಮುನ್ನ  15 ತಿಂಗಳುಗಳ ಕಾಲ ಗೋಲ್ಡ್‌ಮನ್ ಸ್ಯಾಕ್ಸ್‌ಗಾಗಿ ಕೆಲಸ ಮಾಡಿದ್ದರು. 

Latest Videos

undefined

 ಶ್ರೀವಾಸ್ತವ ಅವರಿಗೆ ವಿದೇಶಕ್ಕೆ ಹೋಗಲು ಅನೇಕ ಅವಕಾಶಗಳು ಬಂದರೂ ಅವರು ಹೋಗಲಿಲ್ಲ. ಈ ಬಗ್ಗೆ ಅವರು ಕಾರಣ ನೀಡಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಎರಡು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಮೊದಲನೆಯದಾಗಿ ತಮ್ಮ ಶಾಲೆಯಲ್ಲಿ ಬ್ರೈನ್ ಡ್ರೈನ್ ಪರಿಕಲ್ಪನೆಯ ಬಗ್ಗೆ ಓದಿದ ನಂತರ ಈ ಬಗ್ಗೆ ಪ್ರೇರಣೆಯನ್ನು ಬೆಳೆಸಿಕೊಂಡರು ಹೀಗಾಗಿ ಭಾರತದಲ್ಲಿ ಉಳಿಯಲು ಬಯಸಿದ್ದರು. ಎರಡನೇಯದಾಗಿ ತಮ್ಮ ವಯಸ್ಸಾದ ಪೋಷಕರನ್ನು ನೋಡಿಕೊಳ್ಳಲು ಬಯಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನು ಗೋಲ್ಡ್‌ಮನ್ ಸ್ಯಾಕ್ಸ್‌ನಲ್ಲಿ ತಿಂಗಳಿಗೆ 2.5 ಲಕ್ಷ ರೂ ನೀಡುವ ಕೆಲಸವನ್ನು ಏಕೆ ತೊರೆದರು ಎಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ. ಮೊದಲನೆಯದಾಗಿ, ನಾನು ಹುಟ್ಟಿ ಬಂದ ಮಣ್ಣಿನಿಂದ ನನಗೆ ಆಶೀರ್ವಾದವಿದ್ದಿದ್ದು,  ಕಲೆಕ್ಟರ್ ಆಗಬೇಕೆಂದು ಹೀಗಾಗಿ ನಾಗರಿಕ ಸೇವೆಗಳ ಬಗ್ಗೆ ನನಗೆ ಮೊದಲಿನಿಂದಲೂ ಒಂದು ರೀತಿಯ ಜ್ಞಾನವಿತ್ತು. ಆದರೆ ನಾನು ಅದನ್ನು ಗಂಭೀರವಾಗಿ ಪರಿಗಣಿಸಿದ ಕೊನೆಯ ಬದಲಾವಣೆಯೆಂದರೆ, ನನ್ನ ಕೆಲಸದ ದಿನಗಳಲ್ಲಿ ನಾನು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದೇನೆ. ಅಲ್ಲಿ ಮಕ್ಕಳಿಗೆ ಹೋಗಿ ಆಹಾರ ನೀಡುವುದು ಅವರ ಜೀವನದ ಮೇಲೆ ಅರ್ಥಪೂರ್ಣ ಪರಿಣಾಮ ಬೀರಲು ಸಾಕಾಗುವುದಿಲ್ಲ ಎಂದು ನಾನು ಅರಿತುಕೊಂಡೆ ಇದರ ಜೊತೆಗೆ ಅದಕ್ಕೆ ಸಂಬಂಧಿಸಿದ ಸಾಮಾಜಿಕ ಪ್ರತಿಷ್ಠೆಯ ಅಂಶವೂ ಕೂಡ  ಎಂದಿದ್ದಾರೆ.

click me!