72ನೇ ವಯಸ್ಸಿಗೆ ಕಾಲೇಜು ಡಿಗ್ರಿ: ಶಭಾಷ್ ಮಗನೇ ಎಂದ 99 ರ ಹರೆಯದ ಅಮ್ಮ

Published : May 23, 2023, 12:44 PM ISTUpdated : May 23, 2023, 12:46 PM IST
72ನೇ ವಯಸ್ಸಿಗೆ ಕಾಲೇಜು ಡಿಗ್ರಿ: ಶಭಾಷ್ ಮಗನೇ ಎಂದ 99 ರ ಹರೆಯದ ಅಮ್ಮ

ಸಾರಾಂಶ

ವೃದ್ಧರೊಬ್ಬರು ತಮ್ಮ 72ನೇ ವಯಸ್ಸಿನಲ್ಲಿ ಕಾಲೇಜು ಪದವಿ ಪಡೆದಿದ್ದಾರೆ. ಆದರೆ ಇದಕ್ಕಿಂತಲೂ ಸಂಭ್ರಮ ಹಾಗೂ ಅಚ್ಚರಿಯ ವಿಚಾರವೆಂದರೆ ಈ ಸಂದರ್ಭಕ್ಕೆ 72 ವರ್ಷದ ವೃದ್ಧರ 99 ವರ್ಷದ ಅಮ್ಮ ಸಾಕ್ಷಿಯಾಗಿದ್ದು, 

ಸಾಧನೆ ಮಾಡುವುದಕ್ಕೆ ವಯಸ್ಸಿನ ಹಂಗಿಲ್ಲ. ಮನಸ್ಸಿದ್ದರೆ ಅಸಾಧ್ಯವಾದುದನ್ನು ಕೂಡ ಸಾಧಿಸಬಹುದು. ಇತೀಚೆಗೆ ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಅನೇಕ ವೃದ್ಧರು ತಮ್ಮ ಸಾಧನೆ ಮೂಲಕ ಸಾಧಿಸಿ ತೋರಿಸಿದ್ದಾರೆ. ಅದೇ ರೀತಿ ವೃದ್ಧರೊಬ್ಬರು ತಮ್ಮ 72ನೇ ವಯಸ್ಸಿನಲ್ಲಿ ಕಾಲೇಜು ಪದವಿ ಪಡೆದಿದ್ದಾರೆ. ಆದರೆ ಇದಕ್ಕಿಂತಲೂ ಸಂಭ್ರಮ ಹಾಗೂ ಅಚ್ಚರಿಯ ವಿಚಾರವೆಂದರೆ ಈ ಸಂದರ್ಭಕ್ಕೆ 72 ವರ್ಷದ ವೃದ್ಧರ 99 ವರ್ಷದ ಅಮ್ಮ ಸಾಕ್ಷಿಯಾಗಿದ್ದು, 

ಅಮೆರಿಕಾದ ಲಾರೆನ್ಸ್ವಿಲ್ಲೆಯ ಸ್ಯಾಮ್ ಕಪ್ಲಾನ್ (Sam Kaplan) ಎಂಬುವವರೇ ಹೀಗೆ ತಮ್ಮ 72ರ ಹರೆಯದಲ್ಲಿ ಡಿಗ್ರಿ ಪಡೆದವರು. ಇವರು ಸ್ವಚ್ಛತಾ ಸೇವೆ, ಟೆಲಿಮಾರ್ಕೆಟಿಂಗ್ ಕಂಪನಿಯನ್ನು ನಡೆಸುವುದರಿಂದ ಹಿಡಿದು ಗ್ರಾಹಕ ಸೇವಾ ಕಾರ್ಯನಿರ್ವಾಹಕ ಮತ್ತು ಟ್ಯಾಕ್ಸಿ (taxi) ಓಡಿಸುವವರೆಗೆ ವಿವಿಧ ವೃತ್ತಿಗಳನ್ನು ನಿರ್ವಹಿಸಿದ್ದಾರೆ. ಈ ಮಧ್ಯೆ ಅವರಿಗೆ ಸ್ಕ್ರಿಪ್ಟ್‌ ರೈಟಿಂಗ್ ವಿಚಾರದಲ್ಲಿ ಆಸಕ್ತಿ ಹೊಂದಿದ್ದ ಅವರು ಅದರಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದು,  ಮೊದಲಿಗೆಎ ವಿಫಲರಾದರು ಸತತ ಪರಿಶ್ರಮದಿಂದ ಪದವಿ ಪಡೆಯಲು ಯಶಸ್ವಿಯಾಗಿದ್ದಾರೆ. 

ಮೊಮ್ಮಗನ ಮದ್ವೆಲಿ 96 ವರ್ಷದ ತಾತನ ಸಖತ್ ಡಾನ್ಸ್‌: ವೈರಲ್ ವೀಡಿಯೋ

ನಾಲ್ಕು ವರ್ಷಗಳ ಹಿಂದೆ, ಅವರು ಜಾರ್ಜಿಯಾ ಗ್ವಿನೆಟ್ ಕಾಲೇಜಿನಲ್ಲಿ (Georgia Gwinnett College) ಸ್ಕ್ರಿಪ್ಟ್ ರೈಟಿಂಗ್‌ ವಿಚಾರದಲ್ಲಿ ಪದವಿ ಪಡೆಯಲು ಸೇರಿಕೊಂಡಿದ್ದು ಈ ವರ್ಷದ ಮೇ 11 ರಂದು ಅವರು ಪದವಿ ಪಡೆಯುವಲ್ಲಿ ಯಶಸ್ವಿಯೂ ಆಗಿದ್ದಾರೆ.  ಇದರ ಜೊತೆ ಖುಷಿಯ ವಿಚಾರವೆಂದರೆ ಈ ಪದವಿ ಪ್ರದಾನ ಸಮಾರಂಭದಲ್ಲಿ ಅವರ ಶತಾಯುಷಿ (septuagenarian) 99 ವರ್ಷದ ಅಮ್ಮ ಕೂಡ ಜೊತೆಗಿದ್ದಿದ್ದು, ವಿಶೇಷ.  ಇದಲ್ಲದೇ ಕಪ್ಲಾನ್ ಅವರು ತಮ್ಮ ಕುಟುಂಬದಲ್ಲೇ ಕಾಲೇಜು ಪದವಿ ಪಡೆದ ಮೊದಲಿಗರಾಗಿದ್ದಾರೆ. 

ಇನ್ಸ್ಟಾಗ್ರಾಮ್‌ನಲ್ಲಿ 'ಗುಡ್ ನ್ಯೂಸ್ ಮೂವ್‌ಮೆಂಟ್' (Good News Movement) ಪೇಜ್ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಕಪ್ಲಾನ್ ಅವರು, ಪದವಿ ಪಡೆಯುವ ವೇಳೆ ಧರಿಸುವ ಗೌನ್ ಧರಿಸಿದ್ದು, ಪ್ರಮಾಣಪತ್ರವನ್ನು ಪಡೆಯಲು ಮುಂದೆ ಬರುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಕಾಲೇಜು ಅಧಿಕಾರಿಗಳು ಸ್ವಲ್ಪ ಕಾಲ ತಮಾಷೆಯಾಗಿ ಆಟ ಆಡಿಸಿ ನಂತರ ಕೊನೆಯಲ್ಲಿ ಅವರಿಗೆ ಪ್ರಮಾಣ ಪತ್ರ (certificate) ನೀಡುತ್ತಾರೆ. ಈ ವೇಳೆ ವ್ಹೀಲ್ ಚೇರ್‌ನಲ್ಲಿ ಅವರ ತಾಯಿಯೂ ಕುಳಿತಿರುವುದನ್ನು ಕಾಣಬಹುದು. 

Age Just Number: 82 ದಾಟಿದರೂ ಕುಂದದ ಉತ್ಸಾಹ, ಹನುಮಾನ್ ಕತೆ ಹೇಳುವ ಅಜ್ಜಿಗೆ ಇಂಟರ್‌ನೆಟ್ ಫಿದಾ

ಅನೇಕರ ಪಾಲಿಗೆ ಈ ವೀಡಿಯೋ ಹಾಗೂ ಕಪ್ಲಾನ್ ಅವರ ಸಾಧನೆ ಸ್ಫೂರ್ತಿ ತುಂಬಿದೆ. ನಿಮ್ಮ ಕನಸುಗಳನ್ನು ಪೂರ್ಣಗೊಳಿಸುವುದಕ್ಕೆ ನಿಮಗೆ ಎಂದಿಗೂ ವಯಸ್ಸಾಗುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಅದ್ಭುತ ದೃಶ್ಯ ಕಲಿಯುವುದನ್ನು ಎಂದಿಗೂ ನಿಲ್ಲಿಸಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
ಇನ್ನು ಕಪ್ಲಾನ್ ಅವರ ತಾಯಿ ಮಗನ ಸಾಧನೆ ಬಗ್ಗೆ ಬಹಳ ಹೆಮ್ಮೆ ಪಟ್ಟಿದ್ದು, ಆತ 1969 ರಲ್ಲಿ ಪ್ರೌಢಶಾಲೆಯಿಂದ (high school)ಪದವಿ ಪಡೆದ ನಂತರ ಉನ್ನತ ಶಿಕ್ಷಣ ಮುಂದುವರಿಸುವ ಬಗ್ಗೆ ಯೋಚನೆಯೇ ಮಾಡಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ಇತ್ತ ಈ ಇಳಿವಯಸ್ಸಿನಲ್ಲಿ ತಾನು ಪದವಿಗೆ ದಾಖಲಾದ ಬಗೆಯನ್ನು ಕಪ್ಲಾನ್ ಕಾಲೇಜಿನ ಅಧಿಕಾರಿಗಳಿಗೆ ವಿವರಿಸಿದ್ದಾರೆ. ನಾನು ಡೌನ್ 316 ಕೆಳಗೆ ಕಾರಿನಲ್ಲಿ ಹೋಗುತ್ತಿದ್ದಾಗ ಜಾರ್ಜಿಯಾದ ಗ್ವಿನೆಟ್ ಕಾಲೇಜು ಸ್ಕ್ರಿಪ್ಟ್ ರೈಟಿಂಗ್ ಅನ್ನು ಒಳಗೊಂಡಿರುವ ಪದವಿಯನ್ನು ನೀಡುತ್ತಿದೆ ಎಂದು ರೇಡಿಯೊದಲ್ಲಿ ಕೇಳಿದೆ.  ಇದಾಗಿ ಸ್ವಲ್ಪ ಹೊತ್ತಿನಲ್ಲೇ ನಾನು ಕಾಲೇಜು ಮುಂದಿದ್ದೆ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಅಧ್ಯಯನಕ್ಕೆ ಹೋಗುವುದು ಮತ್ತು ಯುವಕರೊಂದಿಗೆ ಬೆರೆತುಕೊಳ್ಳುವುದು ಅವರಿಗೆ ಒಂದು ಕೇಕ್‌ವಾಕ್ ಆಗಿರಲಿಲ್ಲ. ಅವರು ದಿನಕ್ಕೆ ಒಬ್ಬ ವಿದ್ಯಾರ್ಥಿಯೊಂದಿಗೆ ಮಾತನಾಡುವ ಮತ್ತು ಅವರ ಅಧ್ಯಯನ, ಭರವಸೆ ಮತ್ತು ಕನಸುಗಳ ಬಗ್ಗೆ ಅವರೊಂದಿಗೆ ಸಂವಹನ ನಡೆಸುವ ಗುರಿಯನ್ನು ಹೊಂದಿದ್ದರು. ಅವರು ಸಾಮಾನ್ಯ ಆಸಕ್ತಿಗಳನ್ನು ಕಂಡುಕೊಳ್ಳಲು ಮತ್ತು ಬಂಧಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು.

 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ