* ಆರ್ಯುವೇದ ಡೈಟಿಷಿಯನ್, ಆರ್ಯುವೇದ ಆಹಾರ ಮತ್ತು ಪೋಷಣ ಸಹಾಯಕ ಕೋರ್ಸ್ ಆರಂಭ
* ಆರು ತಿಂಗಳ ಅವಧಿಯ ಕೋರ್ಸ್‌ಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
* ಅಖಿಲ ಭಾರತ ಆರ್ಯುವೇದ ಸಂಸ್ಥೆಯು ಕೇಂದ್ರದ ಆಯುಶ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ
ನವದೆಹಲಿ: ಆರ್ಯುವೇದ (Ayurveda) ಭಾರತೀಯ ಪ್ರಾಚೀನ ವೈದ್ಯ ಪದ್ಧತಿಯಾಗಿದೆ. ಈ ಪದ್ಧತಿಯನ್ನು ಹೆಚ್ಚು ಪ್ರಚುರಪಡಿಸಲು ಮತ್ತು ವೈಜ್ಞಾನಿಕ ಅಧ್ಯಯನ ಮಾಡಲು ಅನೇಕ ಶೈಕ್ಷಣಿಕ ಸಂಸ್ಥೆಗಳಿವೆ. ಆ ಪೈಕಿ ಅಖಿಲ ಭಾರತ ಆರ್ಯುವೇದ ಸಂಸ್ಥೆ (The All India Institute of Ayurveda - AIIA) ಕೂಡ ಪ್ರಮುಖವಾಗಿದೆ. ಈ ಸಂಸ್ಥೆಯು ಇದೀಗ ಎರಡು ಹೊಸ ಕೋರ್ಸುಗಳನ್ನು ಪ್ರಾರಂಭಿಸಿದೆ. ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಆರ್ಯುವೇದ ಸಂಸ್ಥೆಯು ಕೇಂದ್ರ ಸರ್ಕಾರದ ಆಯುಶ್ (AYUSH) ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. AIIA ಸಂಸ್ಥೆಯು ಆರ್ಯುವೇದ ಡೈಟಿಷಿಯನ್ (Ayurveda Dietician) ಕೋರ್ಸ್ ಮತ್ತು ಆರ್ಯುವೇದ ಆಹಾರ ಮತ್ತು ಪೋಷಣ ಸಹಾಯಕ (Ayurveda Ahara and Poshana Sahayak) ಕೋರ್ಸುಗಳನ್ನು ಪ್ರಾರಂಭಿಸಿದೆ.
ಇಂಟರ್ ಡಿಸಿಪ್ಲಿನರಿ ಆಯುರ್ವೇದ ಅಧ್ಯಯನವನ್ನು ಉತ್ತೇಜಿಸಲು ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ ಮತ್ತು ಆರೋಗ್ಯ ವಲಯ ಕೌಶಲ್ಯ ಮಂಡಳಿ (Health Sector Skill Council - HSSC) ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (National Skill Development Corporation - NSDC) ಯೊಂದಿಗೆ ಸಂಯೋಜಿತವಾಗಿದೆ ಎಂದು ಸಂಸ್ಥೆ ಹೊರಡಿಸಿದ ಪ್ರಟಣೆಯಲ್ಲಿ ತಿಳಿಸಲಾಗಿದೆ.
ಆಯುರ್ವೇದ ಡಯೆಟಿಶಿಯನ್ ಕೋರ್ಸ್ BAMS ಪದವಿ ಹೊಂದಿರುವ ವೃತ್ತಿಪರರಿಗೆ ವಿಶೇಷ ಕಾರ್ಯಕ್ರಮವಾಗಿದೆ ಮತ್ತು ಆಯುರ್ವೇದ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳಲ್ಲಿ ವಿಶೇಷ ವೈದ್ಯರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಹಾಗಾಗಿ, ಈ ಕೋರ್ಸು ಅಧ್ಯಯನಕ್ಕೆ ವಿಶೇಷ ಮಹತ್ವ ಕೂಡ ಇದೆ. ಡಯೆಟಿಶಿಯನ್ ಎಂದ ಕೂಡಲೇ ಇಂಗ್ಲಿಷ್ ಪದ್ಧತಿಯ ಪ್ರಕಾರ ಎಂಬಂತೆ ನೋಡಲಾಗುತ್ತಿದೆ. ಆದರೆ, ಆರ್ಯುವೇದ ಪದ್ಧತಿಯಲ್ಲೂ ಡಯೆಟಿಶಿಯನ್‌ಗೆ ಹೆಚ್ಚಿನ ಮಹತ್ವದವಿದೆ ಎಂಬುದನ್ನು ಅಲ್ಲಗಳೆಯಲಾಗದು.
SAI RECRUITMENT 2022: ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ, ಕೆಲವೇ ದಿನ ಬಾಕಿ
ಆಯುರ್ವೇದ ಆಹಾರ ಸಹಾಯಕರಾಗಿ ವೃತ್ತಿಯನ್ನು ಬಯಸುವ ಹೈಸ್ಕೂಲ್ ಪದವೀಧರರಿಗೆ ಆಯುರ್ವೇದ ಆಹಾರ ಮತ್ತು ಪೋಷಣ ಸಹಾಯಕ್ ಕೋರ್ಸ್ ಆರಂಭಿಸಲಾಗಿದೆ. ಆರೋಗ್ಯ ರೆಸಾರ್ಟ್ (health resorts) ಗಳು, ಕ್ಷೇಮ ಕೇಂದ್ರ (wellness centres) ಗಳು ಮತ್ತು ಆಸ್ಪತ್ರೆ (hospitals) ಗಳಲ್ಲಿ ಇಂತಹ ವೃತ್ತಿಪರರಿಗೆ ಸಾಕಷ್ಟು ಬೇಡಿಕೆಯಿದೆ ಎಂದು ಹೇಳಿಕೆ ತಿಳಿಸಿದೆ.
ಆಯುರ್ವೇದದಲ್ಲಿ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದು ದೇಹದ ಗುಣಪಡಿಸುವ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ಪ್ರಮುಖ ಕೋಶಗಳ ಸೃಷ್ಟಿ ಮತ್ತು ಪುನರ್ನಿರ್ಮಾಣವನ್ನು ವೇಗಗೊಳಿಸುತ್ತದೆ. ಜಠರಗರುಳಿನ ಕಾಯಿಲೆಗಳಂತಹ ಹಲವಾರು ಸಾಮಾನ್ಯ ಕಾಯಿಲೆಗಳು ನಾವು ಸೇವಿಸುವ ಆಹಾರದಿಂದ ನೇರವಾಗಿ ಪ್ರಭಾವಿತವಾಗಿರುತ್ತದೆ. ಅದಕ್ಕಾಗಿಯೇ, ಆಯುರ್ವೇದವು ಬಲವಾದ ಒತ್ತು ನೀಡುತ್ತದೆ.
ಶಿಕ್ಷಣ, ಧರ್ಮ ಎರಡು ಕಣ್ಣುಗಳಿದ್ದಂತೆ: ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ತಂದೆ ಹೇಳಿಕೆ
“ದೇಹಕ್ಕೆ ಸರಿಯಾದ ಆಹಾರಗಳನ್ನು ಗುರುತಿಸುವಲ್ಲಿ ಕಳೆದ ಕೆಲವು ವರ್ಷಗಳಲ್ಲಿ, ಆಯುರ್ವೇದ ಕ್ಷೇತ್ರದಲ್ಲಿ ಆಹಾರ ಸಹಾಯಕರು ಮತ್ತು ತಜ್ಞರ ಬೇಡಿಕೆ ಹೆಚ್ಚುತ್ತಿದೆ ಮತ್ತು ಆದ್ದರಿಂದ, ಹೊಸ ಕೋರ್ಸ್‌ಗಳು ಆಯುರ್ವೇದ ವೃತ್ತಿಪರರಿಗೆ ಆಸ್ಪತ್ರೆಗಳು, ಆರೋಗ್ಯ ರೆಸಾರ್ಟ್‌ಗಳು ಮತ್ತು ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಭಾರತ ಮತ್ತು ವಿದೇಶಗಳಲ್ಲಿ ಕ್ಷೇಮ ಕೇಂದ್ರಗಳಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ" ಎಂದು ಎಐಐಎ ನಿರ್ದೇಶಕಿ ಪ್ರೊಫೆಸರ್ ತನುಜಾ ಮನೋಜ್ ನೇಸರಿ (Pro. Tanuja Manoj Nesari) ಹೇಳಿದ್ದಾರೆ.
AIIA ಆರಂಭಿಸಿರುವ ಈ ಎರಡೂ ಕೋರ್ಸ್‌ಗಳು ಆರು ತಿಂಗಳ ಅವಧಿಯದ್ದಾಗಿದ್ದು, ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳು ಹಾಗೂ ಆಸಕ್ತರು ಈ ಕೋರ್ಸಿಗೆ ಸೇರಿಕೊಳ್ಳಲು ಅರ್ಜಿಸಲ್ಲಿಸಬಹುದಾಗಿದೆ.