Covid Crisis: ಮತ್ತೆ 745 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ..!

Kannadaprabha News   | Asianet News
Published : Jan 16, 2022, 10:14 AM IST
Covid Crisis: ಮತ್ತೆ 745 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ..!

ಸಾರಾಂಶ

*   ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು 195 ಕೇಸ್‌ *   ರಾಜ್ಯದಲ್ಲಿ ಸೋಂಕಿಗೀಡಾದ ವಿದ್ಯಾರ್ಥಿಗಳ ಒಟ್ಟಾರೆ ಸಂಖ್ಯೆ 3064ಕ್ಕೇರಿಕೆ *   7 ಶಿಕ್ಷಕರಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು   

ಬೆಂಗಳೂರು(ಜ.15):  ಕೊರೋನಾ ಮೂರನೇ ಅಲೆ(Covid 3rd Wave) ವಿದ್ಯಾರ್ಥಿಗಳನ್ನು(Students) ಬಹುವಾಗಿ ಕಾಡುತ್ತಿದ್ದು, ಶನಿವಾರವೂ ರಾಜ್ಯಾದ್ಯಂತ(Karnataka) 550ಕ್ಕೂ ಹೆಚ್ಚು ಮಕ್ಕಳಲ್ಲಿ(Children) ಕೊರೋನಾ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿಗೀಡಾದ ವಿದ್ಯಾರ್ಥಿಗಳ ಒಟ್ಟಾರೆ ಸಂಖ್ಯೆ 3064ಕ್ಕೇರಿದೆ. ಶನಿವಾರದಂದು ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು 195 ವಿದ್ಯಾರ್ಥಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ 103, ಬೆಳಗಾವಿ 96, ಬಾಗಲಕೋಟೆ 13, ಉತ್ತರ ಕನ್ನಡ 70, ಬಳ್ಳಾರಿ- ವಿಜಯನಗರ 97, ಮಂಡ್ಯ 77, ಹಾಸನ 44, ಗದಗದಲ್ಲಿ 32 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ವರದಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 19 ವಿದ್ಯಾರ್ಥಿಗಳು, 7 ಶಿಕ್ಷಕರಲ್ಲಿ(Teachers) ಕೊರೋನಾ ಸೋಂಕು ಕಾಣಿಸಿದೆ.

ಗದಗ ಜಿಲ್ಲೆ ರೋಣದ ರಾಜೀವಗಾಂಧಿ ಆಯುರ್ವೇದ ಕಾಲೇಜು ಒಂದರಲ್ಲೇ ಒಟ್ಟು 28 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಇನ್ನು ಉತ್ತರ ಕನ್ನಡದ ಅಂಕೋಲಾದ ಕೆಎಲ್ಇ ಕಾಲೇಜಿನಲ್ಲಿ 16, ಶಿರಸಿಯ ಎಂಇಎಸ್‌ ಪದವಿಪೂರ್ವ ಕಾಲೇಜಿನ 12, ಹೊನ್ನಾವರದ ಬಳಕೂರ, ಇಡಗುಂಜಿಯಲ್ಲಿ 10, ವಿಜಯನಗರ ಜಿಲ್ಲೆ ಹೊಸಪೇಟೆಯ ಕಸ್ತೂರ್‌ಬಾ ಶಾಲೆಯ 14, ಸರ್ದಾರ್‌ ವಲ್ಲಭಬಾಯಿ ಪಾಟೀಲ್‌ ಶಾಲೆಯ 10, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಶಾಲೆಯ 11 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌ ವರದಿ ಬಂದಿದೆ.

Covid Update ಕರ್ನಾಟಕದಲ್ಲಿ ಒಂದೇ ದಿನ 30 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ, ಆರೋಗ್ಯ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ 230 ದಿನಗಳ ಗರಿಷ್ಠ ಕೇಸ್‌: ಪಾಸಿಟಿವಿಟಿ ಪ್ರಮಾಣ ಶೇ.15ಕ್ಕೆ ಏರಿಕೆ

ರಾಜ್ಯದಲ್ಲಿ ಶನಿವಾರ ಬರೋಬ್ಬರಿ 32,793 ಕೋವಿಡ್‌ ಪ್ರಕರಣಗಳು (Covid19) ದಾಖಲಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.15 ಮುಟ್ಟಿದೆ. ಏಳು ಮಂದಿ ಮೃತರಾಗಿದ್ದಾರೆ. 4273 ಮಂದಿ ಚೇತರಿಸಿಕೊಂಡಿದ್ದಾರೆ. ಜನವರಿ 1 ರಂದು 1,033 ಹೊಸ ಪ್ರಕರಣ ವರದಿಯಾಗಿದ್ದರೆ ಹದಿನೈದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 32 ಸಾವಿರ ಮೀರಿದೆ. 

ಹದಿನೈದು ದಿನದಲ್ಲಿ 9,386 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 1.69 ಲಕ್ಷಕ್ಕೆ ಜಿಗಿದಿದೆ. ಒಂದರೊಳಗೆ ಇದ್ದ ಪಾಸಿಟಿವಿಟಿ ದರ ಶೇ.15 ತಲುಪಿದೆ. ರಾಜ್ಯದಲ್ಲಿ 230 ದಿನಗಳ (7.5 ತಿಂಗಳ) ಗರಿಷ್ಠ ಪ್ರಕರಣ ದಾಖಲಾಗಿದೆ. ಮೇ 19 ರಂದು 34,281 ಪ್ರಕರಣ ದಾಖಲಾದ ಬಳಿಕದ ಗರಿಷ್ಠ ಪ್ರಕರಣ ಇದಾಗಿದೆ. ಅದೇ ರೀತಿ ಮೇ 28ರ ಬಳಿಕ ಮೊದಲ ಬಾರಿಗೆ ರಾಜ್ಯದ ಪಾಸಿಟಿವಿಟಿ ದರ ಶೇ.15 ಮುಟ್ಟಿದೆ.

Covid 19 Spike: ಮಂಡ್ಯದ ಒಂದೇ ಶಾಲೆಯ 20 ಮಕ್ಕಳಿಗೆ ಕೊರೋನಾ: ಸ್ಕೂಲ್ ಸೀಲ್ ಡೌನ್!

ಬೆಂಗಳೂರು, ಇತರೆಡೆ ಭಾರೀ ಏರಿಕೆ: ಬೆಂಗಳೂರಿನಲ್ಲಿ 22,284 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು ಉಳಿದ ಹತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ರಾಜ್ಯದ ಬೇರೆ ಭಾಗಗಳಲ್ಲಿ ಪತ್ತೆಯಾಗಿದ್ದಾರೆ. ರಾಜ್ಯದ ಶನಿವಾರದ ಪ್ರಕರಣದಲ್ಲಿ ಬೆಂಗಳೂರಿನ ಪಾಲು ಶೇ.68 ರಷ್ಟಾಗಿದ್ದಾರೆ, ಇತರ ಜಿಲ್ಲೆಗಳ ಪಾಲು ಶೇ. 32ಕ್ಕೆ ಏರಿದೆ. ಶುಕ್ರವಾರ ಬೆಂಗಳೂರಿನ ಪಾಲು ಶೇ.70 ಇತ್ತು. ಅದಕ್ಕೂ ಮೊದಲು ಶೇ.80ರಷ್ಟುಪ್ರಕರಣಗಳು ರಾಜ್ಯ ರಾಜಧಾನಿಯಲ್ಲೇ ದಾಖಲಾಗುತ್ತಿತ್ತು.

ತುಮಕೂರಲ್ಲಿ ಮೊದಲ ಬಾರಿ 1000+: 

ಮೂರನೇ ಅಲೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಸಾವಿರಕ್ಕಿಂತ ಹೆಚ್ಚು ಪ್ರಕರಣ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ತುಮಕೂರು (1,326), ಹಾಸನ (968), ದಕ್ಷಿಣ ಕನ್ನಡ (792), ಮೈಸೂರು (729), ಮಂಡ್ಯ (718), ಧಾರವಾಡ (648), ಉಡುಪಿ (607) ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ. ಯಾದಗಿರಿ 13, ಹಾವೇರಿ 17, ವಿಜಯಪುರ 76, ಚಾಮರಾಜನಗರ 93 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚು ಹೊಸ ಪ್ರಕರಣ ವರದಿಯಾಗಿದೆ. 
 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ