ಕೊರೋನಾ ಸಂಕಷ್ಟದ ಭೀತಿಯ ನಡುವೆಯೂ ಈ ವರ್ಷ ನಮ್ಮ ಮಕ್ಕಳು ಶಾಲೆಗೆ ಹೋಗದೇ ಇದ್ದರೂ ಪರವಾಗಿಲ್ಲ. ಕೊರೋನಾ ರೋಗಕ್ಕೆ ತುತ್ತಾಗಿ ಮಕ್ಕಳು ತೊಂದರೆ ಅನುಭವಿಸೋದು ಬೇಡ. ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗೋದು ಬೇಡ ಅಂತ ಅನೇಕ ಪೋಷಕರು, ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಆದ್ರೆ, ಸರ್ಕಾರ ಅಕ್ಟೋಬರ್ 15ರ ನಂತರ ಪ್ರಾರಂಭಿಸಲು ಚಿಂತನೆ ನಡೆಸಿದೆ. ಆದ್ರೆ, ಆರಂಭದಲ್ಲಿಯೇ ಸರ್ಕಾರಕ್ಕೆ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
ಕಲಬುರಗಿ, (ಅ.08): ವಿದ್ಯಾಗಮ ಯೋಜನೆಯಡಿಯಲ್ಲಿ ಅಫಜಲ್ಪುರ ತಾಲೂಕಿನ ಮಾಶಾಳದಲ್ಲಿ ನಡೆಯುತ್ತಿರುವ ವಠಾರ ಶಾಲೆಯ ನಾಲ್ವರು ಮಕ್ಕಳಿಗೆ ಕೋವಿಡ್- 19 ಸೋಂಕು ಧೃಢಪಟ್ಟಿರೋದರಿಂದ ಈಗ ಆ ಶಾಲೆ 2 ವಾರ ಸೀಲ್‍ಡೌನ್ ಮಾಡಿರುವ ಬೆಳವಣಿಗೆ ನಡೆದಿದೆ.
ತಾಲೂಕಿನ ಮಾಶಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 5 ವಠಾರ ಶಾಲೆಯ ಒಟ್ಟು 207 ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದ್ದು ಇದರಲ್ಲಿ 5 ನೇ ತರಗತಿಯಿಂದ 8 ನೇ ತರಗತಿಯ 4 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 24 ವಿದ್ಯಾರ್ಥಿಗಳ ಕೋವಿಡ್ ವರದಿ ಬರಬೇಕಾಗಿದೆ.
ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು
ಮಾಶಾಳ ಗ್ರಾಮದಲ್ಲಿ ಒಟ್ಟು 19 ವಠಾರ ಶಾಲೆಗಳಿವೆ.ಒಂದು ವಠಾರ ಶಾಲೆಯಲ್ಲಿ 40 ವಿದ್ಯಾರ್ಥಿಗಳಂತೆ 19 ವಠಾರ ಶಾಲೆ ಆರಂಭಿಸಲಾಗಿದೆ. ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 865 ವಿದ್ಯಾರ್ಥಿಗಳಿದ್ದು 20 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿz್ದÁರೆ. 20 ದಿವಸಗಳ ಹಿಂದೆ ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕಕ್ಕೆ ಬಂದ ಶಾಲೆಯ ಮುಖ್ಯ ಗುರುಗಳಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಅವರು ಕಲಬುರಗಿ ಜಿಮ್ಸ ಆಸ್ಪತ್ರೆಯಲ್ಲಿ 20 ದಿನ ಚಿಕಿತ್ಸೆ ಪಡೆದು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.
ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ವಿಷಯವನ್ನು ಮುಖ್ಯ ಗುರು ಕ್ಷೇತ್ರ ಶಿಕ್ಷಣಾಧಿಕಾರಿಳಿಗೆ ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಬಿಇಓ ಚಿತ್ರಶೇಖರ ದೇಗಲಮಡಿ ಅವರು ಕೋವಿಡ್ ಪಾಸಿಟಿವ್ ದೃಢಪಟ್ಟ ವಿದ್ಯಾರ್ಥಿಗಳನ್ನು ಶಾಲೆಗೆ ಬರಬೇಡಿ ಎಂದು ತಿಳಿಸಿ ಇನ್ನೂ 15 ದಿವಸಗಳವರೆಗೆ ವಠಾರ ಶಾಲೆ ನಡೆಸಬೇಡಿ ಬಂದ್ ಮಾಡಿ ಎಂದು ಆದೇಶಿಸಿದ್ದಾರೆ.
'ಇನ್ನೂ ಒಂದು ತಿಂಗಳು ರಾಜ್ಯದಲ್ಲಿ ಶಾಲೆ ತೆರೆಯಲ್ಲ'
ವಠಾರ ಶಾಲೆಯ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿರಿ ಎಂದು ಶಿP್ಷÀಣ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ, ಆದರೆ ಮಾಶಾಳದಲ್ಲಿ ಮುಖ್ಯಗುರು ಸೋಂಕಿತರ ಸಂಪರ್ಕಕ್ಕೆ ಬಂದು ಕೋವಿಡ್ ಧೃಢಪಟ್ಟಿದ್ದರಿಂದ ಎಲ್ಲ ಮಕ್ಕಲಿಗೆ ಪರೀಕ್ಷೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಕೇವಲ 5 ವಠಾರ ಶಾಲೆಯ ವಿದ್ಯಾರ್ಥಿಗಳನ್ನು ಮಾತ್ರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನುಳಿದ ವಠಾರ ಶಾಲೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಇದರಿಂದ ಹೆದರಿ ತಮ್ಮ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಹೆದರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಸರಕಾರ ಅಕ್ಟೋಬರ್ 15 ರ ನಂತರ ಶಾಲೆಗಳನ್ನು ಪ್ರಾರಂಭಿಸಲು ಹೊರಟಿದೆ. ಆದರೆ ವಠಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಡುತ್ತಿವೆ. ಮುಂಬರುವ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸುವ ಮೊದಲೇ ಸರಕಾರ ಎಚ್ಚೆತ್ತು ಕೊಂಡರೆ ಒಳ್ಳೆಯದು ಎಂದು ಮಾಶಾಳದಲ್ಲಿನ ಪಾಲಕರು ಒತ್ತಾಯಿಸಿದ್ದಾರೆ.