ತಾಲಿಬಾನಿಗಳಿಗೇ ಸಡ್ಡು ಹೊಡೆದ ಆಫ್ಘಾನಿಸ್ತಾನ ವಿದ್ಯಾರ್ಥಿನಿಯರು

Kannadaprabha News   | Kannada Prabha
Published : Aug 08, 2025, 04:12 AM ISTUpdated : Aug 08, 2025, 04:18 AM IST
muslim woman

ಸಾರಾಂಶ

ತಾಲಿಬಾನಿಗಳು ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಾಲೆಗಳ ತನಕ ಮಾತ್ರ ಕಲಿಯುವ ಅವಕಾಶ ನೀಡಿದೆ. ಆದರೆ  ಅದಕ್ಕೆ ಸಡ್ಡು ಹೊಡೆದು   ಹೆಣ್ಣುಮಕ್ಕಳಿಗೆ ಓದಿನ ಆಸಕ್ತಿಯಿದೆ ಎನ್ನುವುದನ್ನು ಅರಿತು  ಆನ್‌ಲೈನ್ ಕೋರ್ಸ್‌ಗಳ ಮೊರೆ ಹೋಗಿದ್ದಾರೆ.

ಕಾಬೂಲ್: ಮೂಲಭೂತ ಶಿಕ್ಷಣಕ್ಕೂ ಅಡ್ಡಿ ಮಾಡುತ್ತಿರುವ ತಾಲಿಬಾನಿಗಳಿಗೆ ಸಡ್ಡು ಹೊಡೆದಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿನಿಯರು ಕಲಿಕೆಗಾಗಿ ಆನ್‌ಲೈನ್ ಕೋರ್ಸ್‌ಗಳ ಮೊರೆ ಹೋಗಿದ್ದಾರೆ.

ತಾಲಿಬಾನಿಗಳು ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಾಲೆಗಳ ತನಕ ಮಾತ್ರ ಕಲಿಯುವ ಅವಕಾಶ ನೀಡಿದೆ. ಆದರೆ ಸೋಡಬಾ ಎನ್ನುವ ಯುವತಿ ಅದಕ್ಕೆ ಸಡ್ಡು ಹೊಡೆದು ತನ್ನ ದೇಶದಲ್ಲಿನ ಹೆಣ್ಣುಮಕ್ಕಳಿಗೆ ಓದಿನ ಆಸಕ್ತಿಯಿದೆ ಎನ್ನುವುದನ್ನು ಅರಿತು ಆನ್‌ಲೈ ನ್‌ನಲ್ಲಿ ಉಚಿತ ಕಂಪ್ಯೂಟರ್‌ ಕೋಡಿಂಗ್ ಕೋರ್ಸ್‌ ಆರಂಭಿಸಿದರು, ಗ್ರೀಕ್‌ನಲ್ಲಿರುವ ಯುವ ಆಫ್ಘನ್‌ ನಿರಾಶ್ರಿತ ಯುವಕ ದರಿ ಜೊತೆ ಕೈ ಜೋಡಿಸಿ ತಮ್ಮ ಭಾಷೆಯಲ್ಲಿ ಕಂಪ್ಯೂಟರ್‌ ಪ್ರೋಗ್ರಾಮಿಂಗ್ ಮತ್ತು ವೆಬ್‌ಸೈಟ್‌ ಆರಂಭಿಸಿದರು. ಮುಂದೆ ಅದು ಆಫ್ಗನ್‌ ಗೀಕ್ಸ್‌ ಸಂಸ್ಥೆಯೊಂದಿಗೆ ಸೇರಿ ಜಾದು ಮಾಡಿದೆ.

ಸುಮಾರು 28 ವಿದ್ಯಾರ್ಥಿನಿಯರು ವಿವಿಧ ಹಂತದ ಶಿಕ್ಷಣ ಪೂರೈಸಿದ್ದಾರೆ. ಆನ್‌ಲೈನ್‌ನಲ್ಲಿ ಕೌಶಲ್ಯ ಕಲಿತು ಉದ್ಯೋಗದ ಹಾದಿಯಲ್ಲಿದ್ದಾರೆ. ಮತ್ತೊಂದೆಡೆ ಅಫ್ಘಾನಿಸ್ತಾನದ ಜುಹಾಲ್ ಎನ್ನುವ ಯುವತಿ ತನ್ನ ಪ್ರಾಧ್ಯಾಪಕರ ಜತೆ ಸೇರಿ ಮಹಿಳೆಯರಿಗೆ ಆನ್‌ಲೈನ್ ಅಕಾಡೆಮಿ ಪ್ರಾರಂಭಿಸಿದ್ದರು. ಈಗ 150 ಶಿಕ್ಷಕರ ಈ ತಂಡದಲ್ಲಿ 4500ಕ್ಕೂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ