ಸ್ಕಾಲರ್‌ಶಿಪ್ ಆರಂಭಿಸಿದ ಸೋನು ಸೂದ್, ಯಾರೆಲ್ಲ ಅರ್ಹರು ಚೆಕ್ ಮಾಡ್ಕೊಳ್ಳಿ

By Suvarna News  |  First Published Sep 28, 2021, 3:56 PM IST

ನಟ ಸೋನು ಸೂದ್(Sonu Sood) ಕಚೇರಿಗಳ ಮೇಲೆ ಇತ್ತೀಚೆಗಷ್ಟೇ ಐಟಿ ದಾಳಿ(IT Raid) ನಡೆದಿತ್ತು. ಆದರೆ, ಅದಾವುದು ತಮ್ಮ ಜನಪರ ಕಾರ್ಯಕ್ರಮಗಳಿಗೆ ಅಡ್ಡಿಯಾಗಲ್ಲ ಎಂಬಂತೆ ಅವರು ಹಲವು ಸ್ಕಾಲರ್‌ಶಿಪ್‌ಗಳನ್ನು(Scholarship) ಆರಂಭಿಸಿದ್ದಾರೆ. ಆ ಮೂಲಕ ಅರ್ಹ ಹಾಗೂ ಬಡವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಿಗೆ ಮುಂದಾಗಿದ್ದಾರೆ. ಕೋವಿಡ್ ಉಚ್ಚ್ರಾಯ ಸ್ಥಿತಿಯಲ್ಲಿ ಸಾಕಷ್ಟು ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಅವರು ಹೆಸರುವಾಸಿಯಾಗಿದ್ದರು.


ಕೊಡುಗೈ ದಾನಿ ಅಂತಲೇ ಫೇಮಸ್ ಆಗಿರೋ ಸೋನು ಸೂದ್, ತಮ್ಮ ಮೇಲೆ ಏನೇ ಆರೋಪಗಳು ಕೇಳಿ ಬಂದ್ರೂ, ಐಟಿ ರೇಡ್ ನಡೆದ್ರೂ ಜಗ್ಗದೇ ಸೇವಾ ಕಾಯಕವನ್ನ ಮುಂದುವರಿಸಿದ್ದಾರೆ. 

ಸದಾ ಬಡವರ ಕಷ್ಟಕ್ಕೆ ಸ್ಪಂದಿಸುವ ಸೋನು ಸೂದ್(Sonu Sood), ಈಗಾಗಲೇ ಹತ್ತಾರು ರೀತಿಯಲ್ಲಿ ಸಮಾಜಕ್ಕೆ ಸಹಾಯಹಸ್ತ ಚಾಚಿದ್ದಾರೆ. ಅದರಲ್ಲೂ ಮಕ್ಕಳ ಬಗ್ಗೆ, ಅವರ ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ತೋರಿಸ್ರೋದ್ರಲ್ಲಿ ಎತ್ತಿದ ಕೈ. ಅದೇ ಹಾದಿಯಲ್ಲಿ ತಮ್ಮ ನಿಸ್ವಾರ್ಥ ಸೇವೆ ಮುಂದುವರಿಸಿರೋ ಸೋನು ಸೂದ್, ಇದೀಗ ವಿದ್ಯಾರ್ಥಿಗಳಿಗಾಗಿ ಸ್ಕಾಲರ್‌ಶಿಪ್(Scholarship) ನೀಡಲು ಮುಂದಾಗಿದ್ದಾರೆ. 

Tap to resize

Latest Videos

undefined

ಹೌದು.. ಸೋನು ಸೂದ್ ಫೌಂಡೇಷನ್(Sonu Sood Foundation) ವತಿಯಿಂದ ವಿದ್ಯಾರ್ಥಿ ವೇತನವನ್ನು ಆರಂಭಿಸಲಾಗಿದೆ. ಪ್ರೊ. ಸರೋಜ ಸೂದ್ ವಿದ್ಯಾರ್ಥಿವೇತನ ಮತ್ತು ಇತರ ಹಲವಾರು ವಿದ್ಯಾರ್ಥಿವೇತನಗಳನ್ನು ಪ್ರತಿಷ್ಠಾನವು ಆರಂಭಿಸಿದೆ. ಹೆಚ್ಚಿನ ಮಾಗಿತಿಗಾಗಿ soodcharityfoundation.org ಗೆ ಭೇಟಿ ನೀಡಿ ಪರಿಶೀಲಿಸಬಹುದು.  

ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಸೂದ್ ಫೌಂಡೇಶನ್ ಆರಂಭಿಸಿದ ಸ್ಕಾಲರ್‌ಶಿಪ್‌ಗಳು ಅವಕಾಶಗಳನ್ನು ಹೊಂದಿರದವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿವೆ. ಈ ವಿದ್ಯಾರ್ಥಿವೇತನದಿಂದ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳನ್ನು ಒದಗಿಸಲಾಗುತ್ತದೆ. ಹಾಗೂ  ಉತ್ತಮ ಅವಕಾಶಗಳನ್ನು ಹೊಂದಲು ಇದು ಸಹಾಯವಾಗುತ್ತದೆ. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಹಲವು ಮಾದರಿಯ ವಿದ್ಯಾರ್ಥಿವೇತನ  ಯೋಜನೆಗಳನ್ನು ರೂಪಿಸಲಾಗಿದೆ.

ಪ್ರೊ. ಸರೋಜ ಸೂದ್ ವಿದ್ಯಾರ್ಥಿವೇತನ(Prof Saroja Sood Scholarship): ಈ ವಿದ್ಯಾರ್ಥಿವೇತನಕ್ಕೆ ನಟ ಸೋನು ಸೂದ್ ರ ದಿವಂಗತ ತಾಯಿಯ ಹೆಸರನ್ನು ಇಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಹಣಕಾಸಿನ ತೊಂದರೆಗಳನ್ನು ಲೆಕ್ಕಿಸದೆ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಲು ಒಂದು ಅವಕಾಶವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.  ವಿಜ್ಞಾನ, ಕಲೆ, ಕ್ರೀಡೆ ಮತ್ತು ಇತರೆ ವಿವಿಧ ಯೋಜನೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನಕ್ಕಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳು  soodcharityfoundation.org ನಲ್ಲಿ ಅರ್ಜಿ ಸಲ್ಲಿಸಬಹುದು.

ಐಎಎಸ್ ವಿದ್ಯಾರ್ಥಿವೇತನ(IAS Scholarship): ಈ ವಿದ್ಯಾರ್ಥಿವೇತನವು ಐಎಎಸ್ ಆಕಾಂಕ್ಷಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿದೆ. ಫೌಂಡೇಶನ್ ಡಿವೈನ್ ಇಂಡಿಯಾ ಯೂತ್ ಅಸೋಸಿಯೇಷನ್‌(Foundation Divine India Youth Association)ನೊಂದಿಗೆ ಸೋನು ಸೂದ್ ಫೌಂಡೇಷನ್ ಕೈಜೋಡಿಸಿದ್ದು, ಸಂಭಾಮ್ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ವಿದ್ಯಾರ್ಥಿಗಳ ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುವ ಮತ್ತು ಅವರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

513 ಹುದ್ದೆಗಳಿಗೆ ಇಂಡಿಯನ್ ಆಯಿಲ್ ಕಂಪನಿ ನೇಮಕಾತಿ, 1.05 ಲಕ್ಷ ರೂ.ವರೆಗೆ ಸಂಬಳ

ಉಚಿತ ಕಾನೂನು ಶಿಕ್ಷಣ(Free Law Education): ಈ ಉಪಕ್ರಮವು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ಉಚಿತ ಕಾನೂನು ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ವಿದ್ಯಾರ್ಥಿಗಳು ಅದಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಸಂಕಲ್ಪ ಎಂದು ಹೆಸರಿಡಲಾಗಿದೆ. ಪ್ರೊಫೆಸರ್ ರಾಜೇಶ್(Prof Rajesh), ಸಂಸ್ಥಾಪಕ ಮತ್ತು ನಿರ್ದೇಶಕ ವಿಪಿಆರ್‌ಒವಿ(VPROV) ಅವರ ಸಹಯೋಗದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ.

ಅಂದಹಾಗೇ ಇದಿಷ್ಟೇ ಅಲ್ಲ,  ಮುಂಬೈನ ವಿದ್ಯಾರ್ಥಿಗಳಿಗೆ ಉಚಿತ ಪದವಿ ಒದಗಿಸುವಂತಹ ಹಥ್ಯಾನೆಗಳನ್ನ ಈಗಾಗಲೇ ಸೋನು ಫೌಂಡೇಷನ್ ನಡೆಸುತ್ತಾ ಬಂದಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ಇನ್ನು ಸಿಎ(CA) ಆಕಾಂಕ್ಷಿಗಳಿಗೆ ಉಚಿತ ಬೋಧನೆ ಮತ್ತು ಸಿಎ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್(Internship) ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಸಕ್ಷಮ್ ಹೆಸರಿನ ಯೋಜನೆ ಕೂಡ ಕಾರ್ಯರೂಪದಲ್ಲಿದೆ. 

ಕೋವಿಡ್ ಎಫೆಕ್ಟ್: ಕಾಲೇಜು ಬಿಟ್ಟವರು ಎಷ್ಟು?

ಒಟ್ಟಾರೆ ಸೋನು ಸೂದ್ ರ ಈ ಮಹತ್ಕಾರ್ಯವನ್ನ ಎಲ್ಲರೂ ಮೆಚ್ಚಬೇಕು. ಸೋನು ಸೂದ್ ರ ಸಂಸ್ಥೆಯಿಂದ ಸ್ಕಾಲರ್ ಶಿಪ್ ಪಡೆದು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಒಟ್ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಗಳ ಸೇವೆಗೆ ಟೊಂಕ ಕಟ್ಟಿ ನಿಂತಿರೋ ಸೋನು ಸೂದ್ ಗೆ ಸಲಾಂ ಹೇಳಲೇಬೇಕು.

click me!