* ಸಿಎಸ್‌ಐಆರ್ ಅಂತಿಮ ಸುತ್ತಿಗೆ ಹೋದ ಏಕೈಕ ಸರ್ಕಾರಿ ಶಾಲೆ
* ಪ್ರಶಸ್ತಿ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
* ಸಿಎಸ್‌ಐಆರ್ ರಾಷ್ಟ್ರಪ್ರಶಸ್ತಿ ಪಡೆದ ದೇಶದ ಏಕೈಕ ಸರ್ಕಾರಿ ಶಾಲೆ
ಉಡುಪಿ(ಸೆ.27): ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿ (ಸಿಎಸ್‌ಐಆರ್)ಯು ನಡೆಸಿದ್ದ ರಾಷ್ಟ್ರಮಟ್ಟದ ಇನ್ನೊವೇಶನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ್ರನ್ಸ್-2021ರಲ್ಲಿ ಉಡುಪಿ(Udupi) ಜಿಲ್ಲೆಯ ಅಲ್ಬಾಡಿ ಆರ್ಡಿ ಗ್ರಾಮದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಾಲ್ಕನೇ ಸ್ಥಾನ ಪಡೆದಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಈ ಶಾಲೆಯ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ರಕ್ಷಿತಾ ನಾಯ್ಕ ಅವರಿಗೆ ಭಾನುವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಅವರು ವರ್ಚುವಲ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ComedK Result: ದೇಶಕ್ಕೆ ರಾಜ್ಯದ ವೀರೇಶ್ ಪ್ರಥಮ
ಚಾರ್ಮಕ್ಕಿ ನಾರಾಯಣ ಶೆಟ್ಟಿ ಶಾಲೆಯು ಸಿಎಸ್‌ಐಆರ್ ರಾಷ್ಟ್ರಪ್ರಶಸ್ತಿ ಪಡೆದ ದೇಶದ ಏಕೈಕ ಸರ್ಕಾರಿ ಶಾಲೆಯಾಗಿದೆ.(Government School) ಚಾರ್ಮಕ್ಕೆ ಶಾಲೆಯು ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಸಂಸ್ಥೆ.
ಅನುಷಾ ಮತ್ತು ರಕ್ಷಿತಾ ಅವರು ಅಡುವೆ ಅನಿಲ ಉಳಿಸುವ ‘ಗ್ಯಾಸ್ ಸೇವಿಂಗ್ ಕಿಟ್’ ತಯಾರಿಸಿದ್ದರು. ವಿಜ್ಞಾನ ಶಿಕ್ಷಿಕಿ ವೈಶಾಲಿ ರಾವ್ ಮಾರ್ಗದರ್ಶನದಲ್ಲಿ ಸಂಶೋಧಿಸಿದ ಈ ಕಿಟ್‌ಗೆ .600 ವೆಚ್ಚ ತಗಲಿದೆ. ತಾಮ್ರದ ಸುರುಳಿಯಾಕಾರ ಪೈಪನ್ನು ಗ್ಯಾಸ್ ಸ್ಟೌಬರ್ನರ್‌ಗೆ ಅಳವಡಿಸಿದರೆ, ಅನ್ನ ತಯಾರಾಗುವಷ್ಟರಲ್ಲಿ, ಈ ಸುರಳಿಯಲ್ಲಿ ನಾಲ್ಕು ಮಂದಿಗೆ ಸ್ನಾನಕ್ಕೆ ಬೇಕಾಗುವಷ್ಟುನೀರು ಬಿಸಿಯಾಗಿ ಲಭಿಸುತ್ತದೆ.
ಶಾಲೆಯ ಸಾಧನೆ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕಾಗಿ ಈ ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ಪ್ರೋಮೋ ವಿಡಿಯೋ ಕೂಡಾ ಆಯ್ಕೆಯಾಗಿತ್ತು. ಮೋದಿ ಅವರೊಂದಿಗೆ ಸಂವಾದಕ್ಕೆ ಅನುಷಾ ಆಯ್ಕೆಯಾಗಿದ್ದರು.