UP CM ಯೋಗಿ ಆದಿತ್ಯನಾಥರ ಭೇಟಿಗೆ 10 ವರ್ಷದ ಬಾಲಕಿಯ 200 ಕಿ.ಮೀ. ಮ್ಯಾರಾಥಾನ್!

By Suvarna News  |  First Published Apr 14, 2022, 10:34 AM IST

*ಉತ್ತರ ಪ್ರದೇಶದ ನಾಲ್ಕು ವರ್ಷ ವಯಸ್ಸಿನ ಬಾಲಕಿ ಕಾಜಲಳ ಅಪ್ರತಿಮ ಸಹಾಸ
*ಏ.10ರಿಂದ ಪ್ರಯಾಗರಾಜ್‌ನಿಂದ ಮ್ಯಾರಾಥಾನ್ ಆರಂಭ, ಲಖನೌಗೆ ಏ.17 ತಲುಪಲಿದ್ದಾರೆ
*ಅಥ್ಲಿಟ್ ಆಗುವ ಗುರಿ ಇರುವ ಕಾಜಲ್‌ ಯುಪಿ ಸಿಎಂ ಅವರಿಂದ ಸಹಾಯದ ನಿರೀಕ್ಷೆ


ತಮ್ಮ‌ ಫೇವರಿಟ್ ಸೆಲೆಬ್ರಿಟಿಗಳನ್ನ ನೋಡಲು ಅಭಿಮಾನಿಗಳು ಸದಾ ಕಾತುರದಿಂದ ಕಾಯುತ್ತಾರೆ. ಅದು ಮುಖ್ಯಮಂತ್ರಿಗಳಾಗಿರಬಹುದು, ಸಿನಿಮಾ ನಟಿ ನಟಿಯರು ಇರಬಹುದು, ಉದ್ಯಮಿಗಳಿರಬಹುದು, ರಾಜಕಾರಣಿಗಳೂ ಇರಬಹುದು. ತಮ್ಮ ಫೇವರಿಟ್ ವ್ಯಕ್ತಿಯನ್ನ ನೋಡಲು ‌ಏನು ಬೇಕಾದರೂ ಮಾಡಲು ಸಿದ್ಧ ಇರುತ್ತಾರೆ. ಅದೇ ರೀತಿ‌ ಇಲ್ಲೊಬ್ಬಳು ಶಾಲಾ ಬಾಲಕಿ, ಸಿಎಂರನ್ನ ಭೇಟಿಯಾಗಲು ಭಾರೀ ಸಾಹಸವೊಂದನ್ನ ಕೈಗೊಂಡಿದ್ದಾಳೆ. ಉತ್ತರ ಪ್ರದೇಶ (Uttar Pradesh) ದ ಮುಖ್ಯಮಂತ್ರಿ (Chief Minister) ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಭೇಟಿ ಮಾಡಲು ವಿದ್ಯಾರ್ಥಿನಿ ಕಾಜಲ್ (Kajal), ಮ್ಯಾರಥಾನ್ ಮಾಡುತ್ತಿದ್ದಾರೆ. ಅದು ಬರೋಬ್ಬರೀ 200 ಕಿ.ಮೀ.. ಪ್ರಯಾಗ್ ರಾಜ್ (Prayagraj) ನಿಂದ ಸಿಎಂ ಯೋಗಿ ನಿವಾಸ ಇರುವ ಲಕ್ನೋ(Lucknow)ದತ್ತ ಹೊರಟಿದ್ದಾಳೆ. ಮೊನ್ನೆ ಏಪ್ರಿಲ್ 10 ರಂದು ಮ್ಯಾರಥಾನ್ ಗೆ ಚಾಲನೆ ಸಿಕ್ಕಿದ್ದು, ಕಾಜಲ್  ಪ್ರಯಾಗ್ ರಾಜ್‌ನಿಂದ ಉತ್ತರ ಪ್ರದೇಶದ ರಾಜಧಾನಿ ಲಕ್ನೋವರೆಗೆ 200 ಕಿ.ಮೀ ಮ್ಯಾರಥಾನ್ ಆರಂಭಿಸಿದ್ದಾಳೆ.  ಏಪ್ರಿಲ್ 17 ರಂದು ಸಿಎಂ ಯೋಗಿ ಆದಿತ್ಯನಾಥ್ ನಿವಾಸ ತಲುಪಲಿದ್ದಾಳೆ.

4ನೇ ತರಗತಿ ಓದುತ್ತಿರುವ 10 ವರ್ಷದ ಕಾಜಲ್ ಗೆ ಅಥ್ಲೀಟ್ ಆಗಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಅದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಲು ಮ್ಯಾರಥಾನ್ ‌ಕೈಗೊಂಡಿದ್ದಾಳೆ. ಅಥ್ಲೀಟ್ ಆಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆ ಎಂದು ಕಾಜಲ್ ಹೇಳಿದ್ದಾರೆ. ಅಥ್ಲೀಟ್‌ ಆಗಲು ಮತ್ತು ದೇಶದಲ್ಲಿ ಹೆಸರು ಗಳಿಸಲು ಬೇಕಾದ ಸಂಪನ್ಮೂಲಗಳೊಂದಿಗೆ ಮ್ಯಾರಥಾನ್ ಆರಂಭಿಸಿದ್ದೇನೆ ಎಂದ ಅವರು, ಸಿಎಂ ಯೋಗಿ (Yogi) ಅವರಿಗೆ ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದರು. ಅಂದಹಾಗೇ ಈ ಪುಟಾಣಿ, ಇಂದಿರಾ 2021 ರಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಆದರೆ, ಈವರೆಗೂ ಜಿಲ್ಲಾಡಳಿತ ಮತ್ತು ಅವರ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸುಡುವ ಬಿಸಿಲಲ್ಲೂ ನಿಲ್ಲದ ಓಟ
ಸದ್ಯ ಬೇಸಿಗೆ ಆಗಿರೋದ್ರಿಂದ  ಬಿಸಿಲು ಮೈ ಸುಡುತ್ತಿದೆ. ಇಂಥ ದಗೆಯಲ್ಲೂ ಪೋರಿ ಕಾಜಲ್ (Kajal) ತಮ್ಮ ಗುರಿ ಈಡೇರಿಸಿಕೊಳ್ಳಲು ಸಿಎಂ ಭೇಟಿಗಾಗಿ ಓಟ ಆರಂಭಿಸಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಪ್ರತಿದಿನ ಬೆಳಗ್ಗೆ 5ರಿಂದ ರಾತ್ರಿ 8ರವರೆಗೆ. ಸಂಜೆ 5ರಿಂದ 7ರವರೆಗೆ ಓಡುತ್ತಾರೆ. ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಕಳೆದ ವರ್ಷ ಇಲ್ಲಿನ ಇಂದಿರಾ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ 4ನೇ ತರಗತಿ ವಿದ್ಯಾರ್ಥಿನಿ ಕಾಜಲ್ ಭಾನುವಾರ ಪ್ರಯಾಗರಾಜ್‌ನಿಂದ ಲಕ್ನೋಗೆ ಓಟ ಆರಂಭಿಸಿದ್ದರು. ಅಥ್ಲೀಟ್ ಆಗಬೇಕೆಂಬ ಹಂಬಲ ಹೊಂದಿರುವ ಕಾಜಲ್ ಏಪ್ರಿಲ್ 17ರಂದು ಲಕ್ನೋದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ ಆಗಮಿಸಲಿದ್ದಾರೆ.

Campus Placement: ಅಮೆಜಾನ್‌ನಲ್ಲಿ 1.18 ಕೋಟಿ ರೂ. ಸಂಬಳದ ನೌಕರಿ ಪಡೆದ ಯುಪಿ ವಿದ್ಯಾರ್ಥಿ

ಇಲ್ಲಿನ ಸಿವಿಲ್ ಲೈನ್ಸ್‌ನಿಂದ ಲಕ್ನೋಗೆ ತೆರಳುವ ಮುನ್ನ ಮಾತನಾಡಿದ್ದ ಕಾಜಲ್ , ಕಳೆದ ವರ್ಷ ಇಂದಿರಾ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದೆ. ಆದರೆ ತನಗೆ ಶಾಲೆಯಾಗಲಿ, ಜಿಲ್ಲಾಡಳಿತವಾಗಲಿ ಸಹಾಯ ಮಾಡಲಿಲ್ಲ ಎಂದು ಹೇಳುತ್ತಾರೆ. ವಿದ್ಯಾರ್ಥಿನಿ ಕಾಜಲ್ ಮೊದಲು ಪ್ರತಾಪ್‌ಗಢದ ಕುಂಡಾಕ್ಕೆ ತೆರಳಲಿದ್ದು, ಅಲ್ಲಿ ಶಾಸಕ ರಾಜಾ ಭಯ್ಯಾ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಕಾಜಲ್ ಉಂಚಹಾರ್, ರಾಯ್ ಬರೇಲಿ ಮೂಲಕ ಏಪ್ರಿಲ್ 17 ರಂದು ಲಕ್ನೋ ತಲುಪಲಿದ್ದಾರೆ ಅಂತಾರೆ ಕಾಜಲ್ ಅವರ ತರಬೇತುದಾರ ರಜನಿಕಾಂತ್ (Rajanikant).

Tap to resize

Latest Videos

ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಆಧುನಿಕ ಶಿಕ್ಷಣ ಮೊಬೈಲ್ ಅಪ್ಲಿಕೇಷನ್

ಉತ್ತರಪ್ರದೇಶದಲ್ಲಿರುವ ಲಲಿತ್‌ಪುರ, ವಿದ್ಯಾರ್ಥಿನಿ ಕಾಜಲ್‌ ಅವರ ತವರೂರು. ಕಾಜಲ್ ಅವರ ತಂದೆ ಪಾಯಿಂಟ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಕಾಜಲ್ ಕೋಚ್ ರಜನಿಕಾಂತ್ ರೈಲ್ವೇಯಲ್ಲಿ ಪಾಯಿಂಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಲು ನಿರ್ಧರಿಸಿರುವ ತನಗೆ, ಸಿಎಂ ಯೋಗಿ ಸಹಾಯ ಮಾಡುತ್ತಾರೆ ಅನ್ನೋದು ಕಾಜಲ್ ಆಶಯ.

click me!