ವಿಜಯಪುರ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುವ ವೇಳೆ ವಿದ್ಯಾರ್ಥಿಗಳು ಬಿಕ್ಕಿ-ಬಿಕ್ಕಿ ಅತ್ತಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಂತಿತ್ತು.
ವಿಜಯಪುರ(ಏ.13): ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವ ತರ್ಕಗಳ ನಡುವೆಯೇ, ವಿಜಯಪುರ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುವ ವೇಳೆ ವಿದ್ಯಾರ್ಥಿಗಳು ಬಿಕ್ಕಿ-ಬಿಕ್ಕಿ ಅತ್ತಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಂತಿತ್ತು.
ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂರಕಿನ ಬೋಳತಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪಿಎಸ್ ತೊರವಿ ತಮ್ಮ 11 ವರ್ಷದ ಸುದೀರ್ಘ ಸೇವೆಯ ನಂತರ ಬೇರೆಡೆಗೆ ವರ್ವಾವಣೆಯಾಗಿದ್ದರು. ಹೀಗಾಗಿ ಅವರಿಗೆ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ್ಕೆ ಹಾಜರಾಗಿದ್ದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು, ಮಕ್ಕಳ ಜೊತೆಗೆ ಪೋಷಕರು ಕೂಡ ದುಃಖದಲ್ಲಿದ್ದರು.
ಪಿಎಸ್ ತೊರವಿ ಅವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಆಕೆ ಕೇವಲ ಬೋಧನೆಗಾಗಿ ತಮ್ಮ ಸೇವೆ ಸೀಮಿತಗೊಳಿಸಿರಲಿಲ್ಲ, ವಿದ್ಯಾರ್ಥಿಗಳಿಗೆ ನೈತಿಕ ಪಾಠ, ಶಿಸ್ತು, ಸಂಸ್ಕೃತಿಗಳ ಬಗ್ಗೆ ಹೇಳಿಕೊಡುತ್ತಿದ್ದರು, ರಾಷ್ಟ್ರೀಯ ನಾಯಕರು ಮತ್ತು ತತ್ವಜ್ಞಾನಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಇದರ ಜೊತೆಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದರು.
LINKEDIN RESEARCH 2022ರಲ್ಲಿ ಉದ್ಯೋಗ ಬಿಡಲು ಶೇ.70ರಷ್ಟು ಮಹಿಳೆಯರು ಮುಂದು!
ಶಾಲೆ ಆರಂಭವಾದಾಗಿನಿಂದ ಇಂತಹ ಶಿಕ್ಷಕರನ್ನು ನಾವು ನೋಡಿರಲಿಲ್ಲ ಎಂದು ಗ್ರಾಮಸ್ಥರಾದ ಜಿಯು ಗೋಡಯಾಳ್ ತಿಳಿಸಿದ್ದಾರೆ. ಶಾಲೆ ಬಿಟ್ಟ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿತೋರವಿ ಅವರು ವಾಪಸ್ ಶಾಲೆಗೆ ಕರೆತರುತ್ತಿದ್ದರು. ಕೇವಲ ಶಾಲೆಯಲ್ಲಿ ಮಾತ್ರವಲ್ಲ ಇಡೀ ಗ್ರಾಮಸ್ಥರೆಲ್ಲ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳನ್ನು ಸಕ್ರಿಯವಾಗಿ ಆಯೋಜಿಸುತ್ತಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯ ಎಸ್ ಎಸ್ ಬಾಗಲಕೊಟ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ತೋರವಿ ಅವರು, ನಾನು ಈ ಊರಿಗೆ ಶಾಲೆಗೆ ಬಂದಾಗ, ಇಡೀ ಗ್ರಾಮಸ್ಥರು ನನ್ನನ್ನು ಮಗಳಂತೆ ನೋಡಿಕೊಂಡಿದ್ದಾರೆ. ಗ್ರಾಮ ಮತ್ತು ಶಾಲೆ ಬಿಟ್ಟು ಹೋಗುತ್ತಿರುವುದು ವಯಕ್ತಿಕವಾಗಿ ನನಗೆ ತುಂಬಾ ನೋವು ತರುತ್ತಿದೆ. ಗ್ರಾಮಸ್ಥರೊಂದಿಗೆ ಭಾವನಾತ್ಮಕ ಬಾಂಧವ್ಯವಿತ್ತು, ಯಾವುದೇ ಶಾಲೆಗೆ ನನ್ನನ್ನು ವರ್ಗಾವಣೆ ಮಾಡಿದರೂ ಅಲ್ಲಿಯೂ ಇದೇ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದರು.
SBI Recruitment 2022: ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ
20 ವರ್ಷಗಳ ನಂತರ ಕರ್ನಾಟಕ ಕಾಲೇಜ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ: ಶಿಕ್ಷಣ ಕಾಶಿ ಧಾರವಾಡದಲ್ಲಿರುವ ಪ್ರತಿಷ್ಠಿತ ಕರ್ನಾಟಕ ಕಲಾ ಮಹಾವಿದ್ಯಾಲಯದ 1997ರಿಂದ 2002ರ ವರೆಗಿನ ಬ್ಯಾಚ್ ವಿದ್ಯಾರ್ಥಿಗಳು 20 ವರ್ಷಗಳ ನಂತರ ತಮ್ಮೊಂದಿಗೆ ಕಲಿತ ಆತ್ಮಿಯ ಸ್ನೇಹಿತರನ್ನು ಒಂದೆಡೆ ಸೇರಿಸಿ, ವಿದ್ಯಾರ್ಥಿ ಜೀವನದ ಸವಿನೆನೆಪುಗಳನ್ನು ಹಂಚಿಕೊಳ್ಳಲು ಹಳೆಯ ವಿದ್ಯಾರ್ಥಿಗಳೆಲ್ಲರೂ ಒಗ್ಗೂಡಿ ಸ್ನೇಹಕೂಟದಲ್ಲಿ ಭಾಗವಹಿಸುವ ಮೂಲಕ ಗಟ್ಟಿ ಗೆಳೆತನಕ್ಕೆ ಸಾಕ್ಷಿಯಾದರು.
ಏಪ್ರಿಲ್ 10ರ ಕರ್ನಾಟಕ ಕಾಲೇಜ್ ಆವರಣದಲ್ಲಿ ಪ್ರಸ್ತುತ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ.ಡಿ.ಬಿ. ಕರಡೋಣಿ ಅವರಿಗೆ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಸನ್ಮಾನ ಮಾಡಿದರು. ಹಳೆ ವಿದ್ಯಾರ್ಥಿಗಳ ಗೌರವ ಸ್ವೀಕರಿಸಿ ಮಾತನಾಡಿದ ಕರಡೋಣಿ ಅವರು, 20 ವರ್ಷಗಳ ನಂತರ ನೀವು ನಿಮ್ಮ ಗುರುಗಳನ್ನು ನೆನಪಿಸಿಕೊಂಡು ಮತ್ತೆ ಕಾಲೇಜ್ ಗೆ ಬಂದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಈಗ ನೀವು ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ, ಇತರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ನಿಮ್ಮ ವೃತ್ತಿ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯರಿ ಎಂದು ಹಾರೈಸಿದರು.
ಬಳಿಕ ಇಕೋ ವಿಲೇಜ್ ನಲ್ಲಿ ನಡೆದ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಹಲವು ವರ್ಷಗಳ ನಂತರ ಸೇರಿದ್ದ ವಿದ್ಯಾರ್ಥಿಗಳು ತಮ್ಮ ಕಾಲೇಜ್ ದಿನಗಳ ಸಂಭ್ರಮ, ಅಭ್ಯಾಸ, ಅಂದಿನ ಸಿಹಿ, ಕಹಿ ಕ್ಷಣಗಳನ್ನು ನೆನಪಿಸಿಕೊಂಡರು. ಸ್ನೇಹಿತರಗಾಗಿ, ಸ್ನೇಹಕ್ಕೋಸ್ಕರ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಕುರಿತು ಪರಸ್ಪರ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮಗೆ ಕಲಿಸಿದ್ದ ಗುರುಗಳನ್ನು ನೆನೆದರು.