* ಪುಣೆಯ ಗಣೇಶ್‌ಖಿಂಡ್‌ನಲ್ಲಿರುವ ಮಾಡರ್ನ್ ಕಾಲೇಜಿನಿಂದ ಹೊಸ ಕೋರ್ಸ್
* ವಿದ್ಯಾರ್ಥಿಗಳು, ವೃತ್ತಿನಿರತರು, ಗೃಹಿಣಿಯರು ಈ ಕೋರ್ಸ್ ಕಲಿಯಲು ಅರ್ಹರು
* ತಾರಸಿ ತೋಟ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗುತ್ತಿದೆ
ಕಾಲೇಜು ಅಂದ್ರೆ ನೂರಾರು ರೀತಿಯ ಕೋರ್ಸ್ಗಳು ಇರುತ್ತವೆ. ಟ್ರಡಿಷನಲ್ ಕೋರ್ಸ್ಗಳ ಜೊತೆಗೆ ಒಂದಷ್ಟು ಸ್ಪೆಷಲ್ ಕೋರ್ಸ್ಗಳು ಇರುತ್ವೆ. ಕುಕ್ಕಿಂಗ್, ಇಂಟೀರಿಯರ್ ಡಿಸೈನಿಂಗ್, ಟೈಲರಿಂಗ್, ಫ್ಯಾಷನ್ ಡಿಸೈನಲ್, ಆ್ಯಕ್ಟಿಂಗ್, ಅಗ್ರಿಕಲ್ಚರಿಂಗ್ - ಹೀಗೆ ನಾನಾ ಸದಾಭಿರುಚಿಯ ಕೋರ್ಸ್ಗಳನ್ನು ಮಾಡುವ ಅವಕಾಶಗಳಿವೆ. ಆದ್ರೆ ನಮ್ಮ ಮನೆಯ ಟೆರೆಸ್ ಗಾರ್ಡನ್ನಲ್ಲಿ ಏನೆಲ್ಲಾ ಬೆಳೆಸಬೇಕು? ಹೇಗೆ ಸಸಿಗಳನ್ನು ಆರೈಕೆ ಮಾಡಬೇಕು ಎಂಬ ಬಗ್ಗೆ ಎಲ್ಲಾದ್ರೂ ಕೋರ್ಸ್ ಇದ್ಯಾ?. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಪುಣೆಯ ಕಾಲೇಜ್ವೊಂದು ಡಿಫರೆಂಟ್ ಕೋರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಪುಣೆಯ ಗಣೇಶ್‌ಖಿಂಡ್‌ನಲ್ಲಿರುವ ಮಾಡರ್ನ್ ಕಾಲೇಜು, ಟೆರೇಸ್ ಗಾರ್ಡನ್‌ಗಳನ್ನು ಸ್ಥಾಪಿಸುವ ಕೋರ್ಸ್ ಅನ್ನು ಪರಿಚಯಿಸುತ್ತಿದೆ. ವಿದ್ಯಾರ್ಥಿಗಳು, ಕೆಲಸ ಮಾಡುವ ವೃತ್ತಿಪರರು ಮತ್ತು ಗೃಹಿಣಿಯರು ಸೇರಿದಂತೆ ಎಲ್ಲರಿಗೂ ಈ 'ಟೆರೇಸ್ ಗಾರ್ಡನಿಂಗ್' ಕೋರ್ಸ್ ತೆರೆದಿರುತ್ತದೆ. ಆಗಸ್ಟ್ ಮೊದಲ ವಾರದಲ್ಲಿ ಈ 'ಟೆರೇಸ್ ಗಾರ್ಡನಿಂಗ್' ಕೋರ್ಸ್ಗೆ ನೋಂದಣಿ ಶುರುವಾಗಲಿದೆ ಎಂದು ಪುಣೆಯ ಗಣೇಶ್‌ಖಿಂಡ್‌ನಲ್ಲಿರುವ ಮಾಡರ್ನ್ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಕಳೆದ ವರ್ಷ ಗಣೇಶ್‌ಖಿಂಡ್‌ನ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್‌ನಲ್ಲಿ ತಮ್ಮ 408 ಚದರ ಅಡಿ ಟೆರೇಸ್‌ನಲ್ಲಿ ಖಾಲಿ ಜಾಗವನ್ನು "ಹೋಮ್ ಗಾರ್ಡನ್" ಆಗಿ ಪರಿವರ್ತಿಸಲು ಖಾಸಗಿ ಕಂಪನಿಯನ್ನು ಸಂಪರ್ಕಿಸಿದಾಗ ಈ ಯೋಜನೆಯು ಪ್ರಾರಂಭವಾಗಿದೆ. ಟೆರೇಸ್‌ನಲ್ಲಿ ಖಾಲಿ ಜಾಗವನ್ನು ಸುಂದರಗೊಳಿಸಿದ ಬಳಿಕ ಪ್ರಮಾಣಪತ್ರ ಕೋರ್ಸ್ ಆರಂಭಿಸಲಾಗಿದೆ. 120 ಕ್ಕೂ ಹೆಚ್ಚು ವಿಧದ ಮರಗಳು ಮತ್ತು ಸಸ್ಯಗಳೊಂದಿಗೆ ಪೂರ್ಣ ಪ್ರಮಾಣದ ಟೆರೇಸ್ ಗಾರ್ಡನ್ ಇದಾಗಿದೆ.
India@75: ಬ್ರಿಟನ್‌ನಿಂದ 75 ವಿದ್ಯಾರ್ಥಿ ವೇತನ!
ಪ್ರಸ್ತುತ ಕಾಲೇಜಿನಲ್ಲಿ ಒಟ್ಟು 2 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ತಾರಸಿ ತೋಟ (Terrace Gardens) ದಲ್ಲಿ ದಾಳಿಂಬೆ (pomegranate), ಮಾವು (mango), ಬಾಳೆ (banana), ಸಿಹಿ ನಿಂಬೆ (sweet lemon), 12 ತಳಿಯ ಗುಲಾಬಿ (Rose) ಸೇರಿದಂತೆ 15 ಹಣ್ಣಿನ ತಳಿಗಳು ಸೇರಿದಂತೆ 120ಕ್ಕೂ ಹೆಚ್ಚು ಬಗೆಯ ಗಿಡಗಳು ಹಾಗೂ ಚಿಕ್ಕ ಮರಗಳಿವೆ. , ಇತರ ಹೂವಿನ ಪ್ರಭೇದಗಳು, ಬದನೆ (brinjal), ಎಲೆಕೋಸು (cabbage), ಟೊಮ್ಯಾಟೊ (tomatoes), ನಿಂಬೆಹಣ್ಣು (lemons), ಮೆಣಸಿನಕಾಯಿ (chilies) ಮತ್ತು ಹೆಚ್ಚಿನ ತರಕಾರಿ ಸಸಿಗಳಿವೆ.
ಆಗಸ್ಟ್ 15 ರಿಂದ ಸರ್ಟಿಫಿಕೇಟ್ ಕೋರ್ಸ್ ಆರಂಭವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ನೋಂದಣಿ ಆರಂಭವಾಗಲಿದೆ. ವಿದ್ಯಾರ್ಥಿಗಳು (Students), ಪಿಂಚಣಿದಾರರು, ಕೆಲಸ ಮಾಡುವ ವೃತ್ತಿಪರರು (Professionals), ಗೃಹಿಣಿಯರು (House wives) ಹೀಗೆ ಎಲ್ಲರಿಗೂ - ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸುವ ಕೋರ್ಸ್ ಎಲ್ಲರಿಗೂ ಮುಕ್ತವಾಗಿದೆ. ಇದು ತಲಾ 30 ಗಂಟೆಗಳ ಎರಡು ಕ್ರೆಡಿಟ್ ಕೋರ್ಸ್ ಆಗಿರುತ್ತದೆ. ಅದರಲ್ಲಿ 20 ಗಂಟೆಗಳ ಪ್ರಾಯೋಗಿಕ ಕಲಿಕೆ ಮತ್ತು 10 ಗಂಟೆಗಳ ತರಗತಿಯ ಬೋಧನೆ, ಮತ್ತು ಸಂಜೆ ಗಂಟೆಗಳಲ್ಲಿ ಕಲಿಸಲಾಗುತ್ತದೆ ಎಂದು ಪುಣೆಯ ಗಣೇಶ್‌ಖಿಂಡ್‌ನಲ್ಲಿರುವ ಮಾಡರ್ನ್ ಕಾಲೇಜಿನ ಪ್ರಾಂಶುಪಾಲರ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
58ನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸಾದ ಒಡಿಶಾ ಶಾಸಕ
ಪುಣೆ (Pune) ಯ ಗಮೇಶ್‌ಖಿಂಡ್ (Ganeshkhind) ನಲ್ಲಿರುವ ಮಾಡರ್ನ್ ಕಾಲೇಜ್ (Modern Collage) ರೂಪಿಸಿರುವ ಈ ಹೊಸ ಕೋರ್ಸ್ ಕುತೂಹಲ ಕೆರಳಿಸಿದೆ. ನಗರಗಳಲ್ಲಿ ಸಾಮಾನ್ಯವಾಗಿ ಜನರು ತಮ್ಮ ತಾರಸಿ ಮೇಲೆ ಚಿಕ್ಕ ತೋಟವನ್ನು ಮಾಡಿಕೊಂಡಿರುತ್ತಾರೆ. ಹವ್ಯಾಸಿ ಆಗಿರುವ ಈ ಪ್ರಕ್ರಿಯೆಗೆ ಕಲಿಕೆಯ ಚೌಕಟ್ಟನ್ನು ಒದಗಿಸಿರುವ ಮಾರ್ಡನ್ ಕಾಲೇಜಿನ ಪ್ರಯತ್ನಕ್ಕೆ ಮೆಚ್ಚುಗೆ ದೊರೆಯುತ್ತಿದೆ. ಇನ್ನು ಮುಂದೆ ಜನರು ಮನೆಯ ತಾರಸಿಯ ಮೇಲೆ ತೋಟವನ್ನು ಯಾವ ರೀತಿ ಕೈಗೊಳ್ಳಬಹುದು ಎಂಬುದನ್ನು ಅಕಾಡೆಮಿಕ್ ಆಗಿ ಕಲಿಯಬಹುದು.