5ನೇ ಕ್ಲಾಸ್‌ನ 80% ಮಕ್ಕಳಿಗೆ ಭಾಗಾಕಾರವೇ ಗೊತ್ತಿಲ್ಲ!

ಕರ್ನಾಟಕ ಸೇರಿ ದೇಶದ 29 ರಾಜ್ಯಗಳಲ್ಲಿ ಸರ್ವೆ ನಡೆಸಲಾಗಿದ್ದು, ರಾಜ್ಯ ಸರ್ಕಾರಿ ಶಾಲೆಯ 3ನೇ ತರಗತಿಯ ಶೇ.15.4ರಷ್ಟು ಮಕ್ಕಳು ಮಾತ್ರ 2ನೇ ತರಗತಿ ಪಠ್ಯವನ್ನು ಓದ ಬಲ್ಲರು. ಇನ್ನು 3ನೇ ತರಗತಿಯತೇ.23.9ರಷ್ಟು ಮಕ್ಕಳು ಮಾತ್ರ ಗಣಿತದ 'ಕಳೆಯುವ' ಲೆಕ್ಕ ಮಾಡಬಲ್ಲರು. 5ನೇ ತರಗತಿಯ ಶೇ.19.3ರಷ್ಟು ಮಕ್ಕಳು ಮತ್ತು 8ನೇ ತರಗತಿಯ ಶೇ.35.7ರಷ್ಟು ಮಕ್ಕಳು ಮಾತ್ರ ಭಾಗಕಾರ ಲೆಕ್ಕ ಮಾಡಬಲ್ಲರು ಎಂದು ಸರ್ವೆಯಲ್ಲಿ ತಿಳಿದು ಬಂದಿದೆ. 

80 Percent of 5th Students do not Know Mathematics in Karnataka

ಬೆಂಗಳೂರು(ಜ.29):  ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳ 5ನೇ ತರಗತಿಯ ಶೇ.32.8ರಷ್ಟು ಮಕ್ಕಳು ಮಾತ್ರ 2ನೇ ತರಗತಿಯ ಪಠ್ಯ ಓದಬಲ್ಲರು ಎಂಬ ಆಘಾತಕಾರಿ ಅಂಶವನ್ನು ಸರ್ಕಾರೇತರ ಸಂಸ್ಥೆ ಪ್ರಥಮ್ ಎಜುಕೇಷನ್ ಫೌಂಡೇಷನ್ ನಡೆಸಿರುವ 2024ನೇ ಸಾಲಿನ ಸ್ಯಾಂಪಲ್ ಸರ್ವೆ' ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ'ಯಲ್ಲಿ (ಎಎಸ್‌ಇಆರ್) ಬಹಿರಂಗವಾಗಿದೆ.

ಕರ್ನಾಟಕ ಸೇರಿ ದೇಶದ 29 ರಾಜ್ಯಗಳಲ್ಲಿ ಸರ್ವೆ ನಡೆಸಲಾಗಿದ್ದು, ರಾಜ್ಯ ಸರ್ಕಾರಿ ಶಾಲೆಯ 3ನೇ ತರಗತಿಯ ಶೇ.15.4ರಷ್ಟು ಮಕ್ಕಳು ಮಾತ್ರ 2ನೇ ತರಗತಿ ಪಠ್ಯವನ್ನು ಓದ ಬಲ್ಲರು. ಇನ್ನು 3ನೇ ತರಗತಿಯತೇ.23.9ರಷ್ಟು ಮಕ್ಕಳು ಮಾತ್ರ ಗಣಿತದ 'ಕಳೆಯುವ' ಲೆಕ್ಕ ಮಾಡಬಲ್ಲರು. 5ನೇ ತರಗತಿಯ ಶೇ.19.3ರಷ್ಟು ಮಕ್ಕಳು ಮತ್ತು 8ನೇ ತರಗತಿಯ ಶೇ.35.7ರಷ್ಟು ಮಕ್ಕಳು ಮಾತ್ರ ಭಾಗಕಾರ ಲೆಕ್ಕ ಮಾಡಬಲ್ಲರು ಎಂದು ಸರ್ವೆಯಲ್ಲಿ ತಿಳಿದು ಬಂದಿದೆ. 

Latest Videos

ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಾರಾ? ಹೀಗೆ ಮಾಡಿದರೆ ಪ್ರತಿ ದಿನ ಹಾಜರ್

ಅಂಗನವಾಡಿ ದಾಖಲಾತಿ ಉತ್ತಮ: 

ಇನ್ನು ಅಂಗನವಾಡಿ ಸೇರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 4 ವರ್ಷ ವಯೋಮಾನದ ಮಕ್ಕಳ ದಾಖಲಾತಿ ಪ್ರಮಾಣ ಕರ್ನಾಟಕದಲ್ಲಿ ಉತ್ತಮ ವಾಗಿದ್ದು, ಪ್ರತಿ 100 ಮಕ್ಕಳಲ್ಲಿ ಶೇ.95ಕ್ಕಿಂತ ಹೆಚ್ಚು ಮಕ್ಕಳು ಅಂಗನವಾಡಿ ಅಥವಾ ಶಾಲೆ ಗಳಿಗೆ ಸೇರುತ್ತಿದ್ದಾರೆ. 3ರಿಂದ4ರ ವಯೋ ಮಾನದ ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ.

ರಾಜ್ಯದಲ್ಲಿ ಈ ವಯೋಮಾನದ ಶೇ.75ಕ್ಕಿಂತ ಹೆಚ್ಚು ಮಕ್ಕಳು ಅಂಗನವಾಡಿಗಳಿಗೆ ನೋಂದಣಿಯಾಗುತ್ತಿದ್ದಾರೆ. ಸರ್ಕಾರಿ ಶಾಲೆ ದಾಖಲಾತಿ ಕುಸಿತ: 6-14ರ ವಯೋಮಾನದ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುವ ಪ್ರಮಾಣ ಕುಸಿತವಾಗಿದೆ. 2022ರಲ್ಲಿ ಶೇ.76 ಇದ್ದದ್ದು 2024ರಲ್ಲಿ ಶೇ.71ಕ್ಕೆ ಇಳಿಕೆಯಾಗಿದೆ. 2018ಕ್ಕೆ (ಶೇ.69) ಹೋಲಿಸಿದರೆ ಈ ಪ್ರಮಾಣ ಸುಧಾರಣೆ ಕಂಡಿದೆ. ರಾಜ್ಯದ ಶೇ.83ರಷ್ಟು ಸರ್ಕಾರಿ ಶಾಲೆಗಳು 60 ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿವೆ.

ಸ್ಮಾರ್ಟ್‌ಫೋನ್ ಬಳಕೆಯಲ್ಲಿ ನಿಪುಣರು

ರಾಜ್ಯದಲ್ಲಿ ಶೇ.94ರಷ್ಟು ಮನೆಗಳಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಅದರಲ್ಲಿ 14-16 ವಯೋಮಾನದ ಶೇ.82ರಷ್ಟು ಮಕ್ಕಳು ಸ್ಟಾರ್ಟ್‌ ಫೋನ್ ಬಳಕೆ ಕಲಿತಿದ್ದಾರೆ. ಅಲಾರಂ ಇಡುವುದು, ಗೂಗಲ್ ಸರ್ಚ್ ಮಾಡುವುದು ಮತ್ತು ಯುಟ್ಯೂಬ್‌ನಲ್ಲಿ ನಿರ್ದಿಷ್ಟವಿಡಿಯೋ ಹುಡುಕಿ ಅದನ್ನು ಶೇರ್‌ಮಾಡುವ ಟಾಸ್ಕ್ ಕೊಟ್ಟಾಗ, ಹೆಣ್ಣು-ಗಂಡು ಸೇರಿ ಶೇ.82ರಷ್ಟು ಮಕ್ಕಳು ಈ ಟಾಸ್ಯಗಳನ್ನು ಪೂರ್ಣಗೊಳಿಸಿದ್ದಾರೆ.

ವಿಜಯನಗರ: ಊಟದ ಕೊಠಡಿಯಲ್ಲಿ ಮಲಗುವ ಮೊರಾರ್ಜಿ ವಸತಿ ಶಾಲಾ ಮಕ್ಕಳು!

ಶಿಕ್ಷಣ ಇಲಾಖೆಗೆ ಗರಿಷ್ಠ ಹಣ ವಿನಿಯೋಗ

ವಿಶೇಷವೆಂದರೆ ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅತಿ ಹೆಚ್ಚು ಹಣ ನೀಡಲಾಗುತ್ತಿದ್ದು, ಅದರಲ್ಲಿ ಶಿಕ್ಷಕರ ವೇತನಕ್ಕೆ ಗರಿಷ್ಠ ಹಣ ವಿನಿಯೋಗವಾಗುತ್ತದೆ.

ಸ್ಯಾಂಪಲ್ ಸರ್ವೆ

ಕರ್ನಾಟಕ ಸೇರಿ 29 ರಾಜ್ಯಗಳು, 605 ಜಿಲ್ಲೆಗಳು, 17,997 ಗ್ರಾಮಗಳು, 15,728 ಶಾಲೆಗಳು, 3,52,028 ಮನೆಗಳು ಹಾಗೂ 6.49 ಲಕ್ಷ ಮಕ್ಕಳನ್ನು ಸರ್ವೆಗೆ ಒಳಪಡಿಸಲಾಗಿದೆ.

vuukle one pixel image
click me!
vuukle one pixel image vuukle one pixel image