ಭಾರತದ ಶೇ.82 ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಗೊತ್ತು; ಪಾಠ ಕೇಳುವವರ ಸಂಖ್ಯೆ ಬಹಳ ಕಡಿಮೆ!

Published : Jan 28, 2025, 07:48 PM IST
ಭಾರತದ ಶೇ.82 ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಗೊತ್ತು; ಪಾಠ ಕೇಳುವವರ ಸಂಖ್ಯೆ ಬಹಳ ಕಡಿಮೆ!

ಸಾರಾಂಶ

ಭಾರತದಲ್ಲಿ 14 ರಿಂದ 16 ವರ್ಷದೊಳಗಿನ ಶೇ.82ರಷ್ಟು ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಗೊತ್ತಿದೆ. ಆದರೆ, ಶೇ.57ರಷ್ಟು ಮಕ್ಕಳು ಮಾತ್ರ ಶೈಕ್ಷಣಿಕ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ASER ವರದಿಯು ಕಲಿಕೆಯ ಮಟ್ಟ ಮತ್ತು ತಂತ್ರಜ್ಞಾನ ಬಳಕೆಯ ಬಗ್ಗೆ ಬೆಳಕು ಚೆಲ್ಲುತ್ತದೆ.

ದೆಹಲಿ (ಜ.28): ಭಾರತದಲ್ಲಿ 14 ವರ್ಷದಿಂದ 16 ವರ್ಷಗಳ ನಡುವಿನ ಶೇ.82 ಪರ್ಸೆಂಟ್ ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಮಾಡುವುದು ಗೊತ್ತಿದೆ. ಆದರೆ, ಈ ಪೈಕಿ ಶೇ.57 ಮಕ್ಕಳು ಮಾತ್ರ ಇದನ್ನು ಶಾಲೆಯಲ್ಲಿ ಹೇಳಿಕೊಡಲಾಗುವ ಪಾಠ, ಶೈಕ್ಷಣಿಕ ವಿಡಿಯೋ ಹಾಗೂ ಶಾಲೆ ಸಂಬಂಧಿತ ಚಟುವಟಿಕೆಗಳಿಗೆ ಬಳಸುತ್ತಾರೆ ಎಂದು ಆನ್ಯುಯಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್ (ಎಎಸ್‌ಇಆರ್)ವರದಿ ಹೇಳುತ್ತದೆ.

ಕೋವಿಡ್ ನಂತರ ಸಂಭವಿಸಬಹುದಾದ ಕಲಿಕೆಯ ನಷ್ಟದಿಂದ ಚೇತರಿಸಿಕೊಳ್ಳಲು ಸ್ಮಾರ್ಟ್ ಫೋನ್‌ಗಳ ಬಳಕೆಯು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದೆ. ಇದಲ್ಲದೆ, ಪ್ರಾಥಮಿಕ ತರಗತಿಗಳಲ್ಲಿ ಕಲಿಕೆಯ ಗುಣಮಟ್ಟವು ಹಿಂದಿನದಕ್ಕಿಂತ ಹೆಚ್ಚಾಗಿರುತ್ತದೆ ಎಂದು ASER ವರದಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ 14 ವರ್ಷದಿಂದ 16 ವರ್ಷಗಳ ನಡುವಿನ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ.

ASER ವರದಿ ಎಂದರೇನು?
ಇದು ಗ್ರಾಮೀಣ ಭಾರತದ ಮಕ್ಕಳ ಶಾಲಾ ಶಿಕ್ಷಣ ಮತ್ತು ಕಲಿಕೆಯ ಅಂಕಿಅಂಶಗಳನ್ನು ಒದಗಿಸುವ ಸಮೀಕ್ಷೆಯಾಗಿದೆ. ಈ ಸಮೀಕ್ಷೆಯನ್ನು ಮೊದಲು 2005 ರಲ್ಲಿ ನಡೆಸಲಾಯಿತು. ASER ಮಕ್ಕಳ ಶಾಲಾ ಪ್ರವೇಶದ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಪರೀಕ್ಷೆಗಳ ಮೂಲಕ ಮಕ್ಕಳ ಮೂಲಭೂತ ಓದುವಿಕೆ ಮತ್ತು ಕೌಶಲ್ಯಗಳನ್ನು ನಿರ್ಣಯಿಸುತ್ತದೆ. ಸಮೀಕ್ಷೆಯು ಗ್ರಾಮೀಣ ಭಾರತದಲ್ಲಿ ಶಿಕ್ಷಣ ಮತ್ತು ಕಲಿಕೆಯ ಮಿತಿಗಳನ್ನು ಎತ್ತಿ ತೋರಿಸುತ್ತದೆ.

ತಂತ್ರಜ್ಞಾನ ದುರ್ಬಳಕೆ: ಇನ್ನು ಭಾರತದಲ್ಲಿ ಏಸರ್ ವರದಿಯಲ್ಲಿ ತಿಳಿಸಿದಂತೆ ಹದಿನಾಲ್ಕರಿಂದ ಹದಿನಾರು ವರ್ಷದೊಳಗಿನ ಶೇ.82 ಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆ ಗೊತ್ತಿದ್ದರೂ, ಉಳಿದ ಶೇ.18 ಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆ ಗೊತ್ತಿಲ್ಲ. ಇದರಿಂದ ಗ್ರಾಮೀಣ ಭಾರತದಲ್ಲಿ ಇನ್ನೂ ಕೆಲವು ಮಕ್ಕಳು ತಂತ್ರಜ್ಞಾನದಿಂದ ದೂರ ಉಳಿದಿದ್ದಾರೆ ಎಂದು ತಿಳಿದುಬರುತ್ತದೆ. ಆದರೆ, ಸ್ಮಾರ್ಟ್ ಫೋನ್ ಬಳಕೆ ಗೊತ್ತಿದ್ದವರ ಪೈಕಿ ಶೇ.57 ಮಕ್ಕಳು ಮಾತ್ರ ಶೈಕ್ಷಣಿಕ ಕಾರ್ಯಕ್ಕೆ ಮೊಬೈಲ್ ಬಳಸುತ್ತಾರೆ. ಉಳಿದ ಶೇ.25 ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲ ಕಾರ್ಯಕ್ಕೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಆನ್‌ಲೈನ್ ಗೇಮಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳು ಕೂಡ ಸೇರಿರಬಹುದು. ಆದ್ದರಿಂದ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡುವಾಗ ಪೋಷಕರು ನಿಗಾವಹಿಸುವುದು ಉತ್ತಮ..

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ