NEET Results 2022: ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಹಮದಾಬಾದ್‌ನ 52 ವರ್ಷದ ಉದ್ಯಮಿ

Published : Sep 10, 2022, 08:14 PM IST
NEET Results 2022: ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಹಮದಾಬಾದ್‌ನ 52 ವರ್ಷದ ಉದ್ಯಮಿ

ಸಾರಾಂಶ

ನೀಟ್‌ ಪರೀಕ್ಷೆ ಕಠಿಣ ಪರೀಕ್ಷೆಗಳಲ್ಲಿ ಒಂದು. ಆದರೂ, ಇಂದಿನ ಯುವಕರಿಗೆ ಸೆಡ್ಡು ಹೊಡೆದು 52 ವರ್ಷದ ಉದ್ಯಮಿಯೊಬ್ಬರು ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆದರೂ, ಮೆಡಿಕಲ್‌ಗೆ ಸೇರಲ್ಲ ಎಂದಿದ್ದಾರೆ. ಹಾಗಾದ್ರೆ, ಇವರು ಪರೀಕ್ಷೆ ಬರೆದಿದ್ದು ಯಾಕೆ ಅಂತೀರಾ..? ಇಲ್ಲಿದೆ ವಿವರ..

ಓದಲು ವಯಸ್ಸಿನ ಹಂಗಿಲ್ಲ ಅಂತಾರೆ. ಅನೇಕರು ಮದುವೆ, ಮಕ್ಕಳಾದ ಬಳಿಕವೂ ಹಾಗೂ ಹಿರಿಯ ನಾಗರಿಕರೂ ಸಹ ಓದಿ ಅನೇಕ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಬಗ್ಗೆ ಕೆಲ ವರದಿಗಳನ್ನು ಓದಿರುತ್ತೀರ. ಅದೇ ರೀತಿ, ಗುಜರಾತ್‌ನ ಅಹಮದಾಬಾದ್‌ನ 52 ವರ್ಷದ ಉದ್ಯಮಿಯೊಬ್ಬರು (Businessman) ನೀಟ್ (NEET) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸುಮಾರು 3 ದಶಕಗಳ ಹಿಂದೆ ಇವರು ಸಕ್ರಿಯ ಅಧ್ಯಯನವನ್ನು ತೊರೆದಿದ್ದರೂ, ಇವರು ಕ್ಲಿಷ್ಟಕರ ಎನಿಸುವ ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಈಗಿನ ಕಾಲದ ಯುವಕರಿಗೆ ಸೆಡ್ಡು ಹೊಡೆದಿದ್ದಾರೆ. ಪ್ರದೀಪ್ ಕುಮಾರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿ 720 ಅಂಕಗಳಿಗೆ 607 ಅಂಕಗಳನ್ನು ಪಡೆದಿದ್ದಾರೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಪ್ರದೀಪ್ ಕುಮಾರ್ ಸಿಂಗ್, "52 ನೇ ವಯಸ್ಸಿನಲ್ಲಿ, ನಾನು 98.98 ಶೇಕಡಾವನ್ನು ಪಡೆದುಕೊಂಡಿದ್ದೇನೆ. ನನಗೆ ವೈದ್ಯಕೀಯ ಕಾಲೇಜಿಗೆ ಸೇರುವ ಉದ್ದೇಶವಿಲ್ಲ, ಆದರೆ ಬಡ ವಿದ್ಯಾರ್ಥಿಗಳಿಗೆ ಉಚಿತ ನೀಟ್‌ ಕೋಚಿಂಗ್ ಸೆಂಟರ್ (Free NEET Coaching Centre) ಅನ್ನು ಪ್ರಾರಂಭಿಸಲು ನಾನು ಬಯಸುತ್ತೇನೆ" ಎಂದು ಅವರು ತಿಳಿಸಿದರು. 1987ರಲ್ಲಿ ದೆಹಲಿಯಲ್ಲಿ ನಡೆದ 12 ನೇ ತರಗತಿ ವಿಜ್ಞಾನ ಪರೀಕ್ಷೆಯಲ್ಲಿ ಪ್ರದೀಪ್‌ ಕುಮಾರ್‌ ಸಿಂಗ್ 71 ಪ್ರತಿಶತ ಅಂಕಗಳನ್ನು ಗಳಿಸಿದ್ದರು. ನಂತರ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಕಲೆಯಲ್ಲಿ (ಅರ್ಥಶಾಸ್ತ್ರ) (Economics) ಪದವಿ ಪಡೆದರು ಹಾಗೂ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಬಿಸಿನೆಸ್ ಎಕನಾಮಿಕ್ಸ್‌ನಲ್ಲಿ (Business Economics) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

NEET Result 2022: ರಾಜಸ್ಥಾನದ ತನಿಷ್ಕಾ ದೇಶಕ್ಕೆ ಮೊದಲ ರ‍್ಯಾಂಕ್, ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ

ಆದರೆ, ಬಡ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ನೀಟ್‌ ಪರೀಕ್ಷೆಗೆ ಹಾಜರಾಗಲು ಪ್ರದೀಪ್‌ ಕುಮಾರ್‌ ಸಿಂಗ್ ನಿರ್ಧರಿಸಿದರು. ಅಂತಿಮವಾಗಿ 2019 ರಲ್ಲಿ ನೀಟ್‌ ಅನ್ನು ತೇರ್ಗಡೆಗೊಳಿಸಿ 595 ಅಂಕಗಳನ್ನು ಗಳಿಸಿದ ತನ್ನ ಮಗ ಬಿಜಿನ್ ಸ್ನೇಹಾನ್ಶ್‌ಗೆ ಸಹಾಯ ಮಾಡುವಾಗ, ತಾನೂ ಸಹ ನೀಟ್‌ ಪರೀಕ್ಷೆ ಬರೆಯುವ ಆಲೋಚನೆ ಮಾಡಿದರಂತೆ. "ನನ್ನ ಮಗ ನೀಟ್‌ಗೆ ತಯಾರಿ ಆರಂಭಿಸಿದಾಗ, ಅವನಿಗೆ ಬೆಂಬಲ ನೀಡಲು ನಾನು ಅದರಲ್ಲಿ ಆಸಕ್ತಿ ವಹಿಸಿದೆ. ಕೋಚಿಂಗ್ ಸಂಸ್ಥೆಗಳು (Coaching Institutions) ಭಾರಿ ಶುಲ್ಕವನ್ನು ವಿಧಿಸುತ್ತವೆ ಎಂದು ನಾನು ಅರಿತುಕೊಂಡೆ ಮತ್ತು ಇದರಿಂದ ಬಡ ಆಕಾಂಕ್ಷಿಗಳಿಗೆ ಕಷ್ಟವಾಗಿದೆ, ಅವರನ್ನು ಪರೀಕ್ಷೆಯಿಂದ ದೂರವೇ ಇಟ್ಟಿದೆ" ಎಂದೂ ನೀಟ್‌ ಪರೀಕ್ಷೆ ತೇರ್ಗಡೆಯಾದ 52 ವರ್ಷದ ವ್ಯಕ್ತಿ ಹೇಳಿದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬುಧವಾರ ಸಂಜೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) UG-2022 ಫಲಿತಾಂಶಗಳನ್ನು ಪ್ರಕಟಿಸಿದೆ. ಜುಲೈ 17 ರಂದು ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆದಿತ್ತು. ದೇಶದ 497 ನಗರಗಳು ಮತ್ತು ವಿದೇಶದ 14 ನಗರಗಳು ಸೇರಿ 3,570 ಕೇಂದ್ರಗಳಲ್ಲಿ ಈ ವರ್ಷ ನಡೆದ NEET ಪರೀಕ್ಷೆಯಲ್ಲಿ 18 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಕಟ್ಟಿದ್ದರು.

ಬಳಿಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾದ 17.64 ಲಕ್ಷ ಅಭ್ಯರ್ಥಿಗಳ ಪೈಕಿ ರಾಜಸ್ಥಾನದ ತನಿಷ್ಕಾ ಅಗ್ರಸ್ಥಾನ ಪಡೆದಿದ್ದಾರೆ. ಹಾಗೂ, ದೆಹಲಿಯ ವತ್ಸ ಆಶಿಶ್ ಬಾತ್ರಾ ಮತ್ತು ಕರ್ನಾಟಕದ ಹೃಷಿಕೇಶ ನಾಗಭೂಷಣ ಗಂಗೂಲೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದರು. ಗಮನಾರ್ಹವಾಗಿ, ತನಿಷ್ಕಾ 2, 3 ಹಾಗೂ 4ನೇ ರ‍್ಯಾಂಕ್ನಲ್ಲಿರುವವರೊಂದಿಗೆ ಒಂದೇ ಸ್ಕೋರ್ (715) ಹಂಚಿಕೊಂಡಿದ್ದಾರೆ.

NEET 2022; ದಿನಗೂಲಿ ನೌಕರನ ಮಗ ಮತ್ತು ತರಕಾರಿ ಮಾರುವವನ ಮಗಳು ನೀಟ್ ಪಾಸ್

ದೇಶಾದ್ಯಂತ ಟಾಪ್ 50 (Top 50) ಅಭ್ಯರ್ಥಿಗಳ ಪಟ್ಟಿಯಲ್ಲಿ 18 ಮಹಿಳೆಯರು ಮತ್ತು 32 ಪುರುಷ ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ