ಒಡಿಶಾದಲ್ಲಿ ದಿನಗೂಲಿ ಕಾರ್ಮಿಕನ ಮಗ ಮತ್ತು ತರಕಾರಿ ಮಾರುವವನ ಮಗಳು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಸೀಟು ಪಡೆಯಲು ಮುಂದಾಗಿದ್ದಾರೆ.
ಭುವನೇಶ್ವರ (ಸೆ.10): ಒಡಿಶಾದಲ್ಲಿ ದಿನಗೂಲಿ ಕಾರ್ಮಿಕನ ಮಗ ಮತ್ತು ತರಕಾರಿ ಮಾರುವವನ ಮಗಳು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಕೂಲಿಯವ ಮಗ ಗಂಜಾಂ ಜಿಲ್ಲೆಯ ಪೊಲಸರ ಬ್ಲಾಕ್‌ನ ನಿವಾಸಿಯಾಗಿರುವ ಸಂತಾನು ದಲೈ ಅವರು ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ (NEET) ಇಡೀ ದೇಶಕ್ಕೆ 19,678 ಶ್ರೇಣಿಯನ್ನು ಪಡೆದಿದ್ದಾರೆ. ಇನ್ನು ಗಜಪತಿ ಜಿಲ್ಲೆಯ ಅದಾವ ಗ್ರಾಮದ ಇಶ್ರಿತಾ ಪಾಂಡಾ ಎಂಬಾಕೆ 720ಕ್ಕೆ 622 ಅಂಕ ಪಡೆದು ದೇಶಕ್ಕೇ 11,895 ರ್ಯಾಂಕ್ ಪಡೆದಿದ್ದಾಳೆ. ಈಕೆ ಅದಾವ ಮಾರುಕಟ್ಟೆಯಲ್ಲಿ ತರಕಾರಿ ಮಾರುವವನ ಮಗಳಾಗಿದ್ದಾಳೆ. ಕಳೆದ ವರ್ಷ ಮೊದಲ ಬಾರಿಗೆ ನೀಟ್ ಬರೆದ ಇವರಿಬ್ಬರೂ ಕೂಡ ಪಾಸ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಇಬ್ಬರೂ ತಮ್ಮ ಎರಡನೇ ಅವಕಾಶದಲ್ಲಿ ಪ್ರತಿಷ್ಠಿತ ಪರೀಕ್ಷೆಯಲ್ಲಿ ಪಾಸ್ ಆಗಿ ಸಾಧಿಸಿ ತೋರಿಸಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಇಶ್ರಿತಾ ಪಾಂಡಾ, ಇದಕ್ಕಾಗಿ ನಾನು ತುಂಬಾ ಶ್ರಮಿಸಿದ್ದೇನೆ ಮತ್ತು ತನ್ನ ಅಂಕಗಳಿಂದ ಸಂತೋಷವಾಗಿದೆ ಎಂದಿದ್ದಾರೆ ಜೊತೆಗೆ ಅವರು ಕಟಕ್ ಅಥವಾ ಬರ್ಹಾಂಪುರದಲ್ಲಿರುವ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಸೀಟು ಪಡೆಯಲು ಮುಂದಾಗಿದ್ದಾರೆ.
ಕೋವಿಡ್-19 ನಿಂದಾಗಿ ಕಳೆದ ಎರಡು ವರ್ಷಗಳಿಂದ ತನ್ನ ವ್ಯವಹಾರದಲ್ಲಿ ನಷ್ಟದ ಹೊರತಾಗಿಯೂ ತನ್ನ ಮಗಳ ಅಧ್ಯಯನವನ್ನು ನಿರ್ಲಕ್ಷಿಸಲಿಲ್ಲ ಎಂದು ಪಾಂಡಾ ತಂದೆ ಹೇಳಿದ್ದಾರೆ. ಅವಳು ವೈದ್ಯಳಾಗಬೇಕೆಂಬುದು ನನ್ನ ಕನಸು ಅದಕ್ಕೆ ಅನುಗುಣವಾಗಿ ನಾನು ಅವಳಿಗೆ ಯಾವುದೇ ಸಹಾಯವನ್ನು ಮಾಡುತ್ತೇನೆ ಎಂದು ತಂದೆ ಹೇಳಿದ್ದಾರೆ.
ದಿನಗೂಲಿ ಕಾರ್ಮಿಕನ ಮಗನಾದ ಶ್ರೀ ದಲೈ ಕೂಡ ತನ್ನ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದು, ರಾಜ್ಯದ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸುತ್ತೇನೆ ಎಂದಿದ್ದಾರೆ. ಹಣಕಾಸಿನ ತೊಂದರೆಯಿದ್ದರೂ ನಾನು ಅವನ ಅಧ್ಯಯನವನ್ನು ನಿರ್ಲಕ್ಷಿಸಲಿಲ್ಲ ಎಂದು ಮಗನ ಸಾಧನೆ ಬಗ್ಗೆ ತಂದೆ ಹೇಳಿಕೆ ನೀಡಿದ್ದಾರೆ. ಶ್ರೀ ದಲೈ ಅವರು ಶಿಕ್ಷಣ ತಜ್ಞ ಸುಧೀರ್ ರೌತ್ ಎಂಬವರು ನಡೆಸುತ್ತಿದ್ದ ಆರ್ಯಭಟ್ಟ ಎಂಬ ಖಾಸಗಿ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ಪಡೆದುಕೊಂಡಿದ್ದಾರೆ.
ಶ್ರೀ ರೌತ್ ತಮ್ಮ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ಕೆಲವು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ ಮತ್ತು ಅವರ ಪ್ರವೇಶಕ್ಕಾಗಿ ಹಣವನ್ನು ವ್ಯವಸ್ಥೆಗೊಳಿಸಿದೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆದ 1193 ವಿದ್ಯಾರ್ಥಿಗಳು
ನವದೆಹಲಿ: ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವ ಕೇಂದ್ರ ಸರ್ಕಾರದ ಒತ್ತಾಸೆಗೆ ಇದೀಗ ವಿದ್ಯಾರ್ಥಿ ಸಮುದಾಯ ಕೂಡಾ ಕೈ ಜೋಡಿಸಿದ್ದು, ಈ ವರ್ಷ ನೀಟ್ ಪರೀಕ್ಷೆಯನ್ನು ದಾಖಲೆಯ 1.37 ಲಕ್ಷ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆದಿದ್ದಾರೆ. ಈ ಪೈಕಿ ಕನ್ನಡದಲ್ಲಿ ಪರೀಕ್ಷೆ ಬರೆದ 1193 ವಿದ್ಯಾರ್ಥಿಗಳು ಕೂಡಾ ಸೇರಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಳೆದ ಜು.17ರಂದು ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ 18.7 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಪೈಕಿ 1.37 ಲಕ್ಷ ವಿದ್ಯಾರ್ಥಿಗಳು ವಿವಿಧ ಪ್ರಾದೇಶಿಕ ಭಾಷೆ ಆಯ್ಕೆ ಮಾಡಿಕೊಂಡಿದ್ದರು. ಇದು ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ. ಕಳೆದ ವರ್ಷ 1.20 ಲಕ್ಷ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆ ಆಯ್ಕೆ ಮಾಡಿಕೊಂಡಿದ್ದರು.
NEET Result 2022: ರಾಜಸ್ಥಾನದ ತನಿಷ್ಕಾ ದೇಶಕ್ಕೆ ಮೊದಲ ರ‍್ಯಾಂಕ್,
ಇಂಗ್ಲೀಷ್ 14.76 ಲಕ್ಷ
ಹಿಂದಿ 2.58 ಲಕ್ಷ
ಗುಜರಾತಿ 49638
ಬಂಗಾಳಿ 42663
ತಮಿಳು 31965
NEET result : ಋುಷಿಕೇಶ್ ರಾಜ್ಯಕ್ಕೇ ಪ್ರಥಮ, ದೇಶಕ್ಕೆ ನಂ.3
ಈ ಬಾರಿ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಅವುಗಳೆಂದರೆ ಆಸ್ಸಾಮಿ, ಬಂಗಾಳಿ, ಇಂಗ್ಲೀಷ್, ಗುಜರಾತಿ, ಹಿಂದಿ, ಕನ್ನಡ, ಮಲೆಯಾಳಂ. ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲಗು, ಉರ್ದು. ಇಂಗ್ಲೀಷ್, ಹಿಂದಿ ಹೊರತು ಪಡಿಸಿ ಹೆಚ್ಚು ಪ್ರಾದೇಶಿಕ ಭಾಷೆ ಆಯ್ದುಕೊಂಡ ವಿದ್ಯಾರ್ಥಿಗಳೆಂದರೆ ಗುಜರಾತಿ (49000), ಬಂಗಾಳಿ (42000) ತಮಿಳು (31000) ಭಾಷೆಯಲ್ಲಿ ಪರೀಕ್ಷೆ ನೀಡಿದ್ದಾರೆ. ಬುಧವಾರ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.