*ಲಡಾಖ್‌ನಲ್ಲಿರುವ ಈ ಸ್ಕೂಲ್ 3 ಈಡಿಯಟ್ ರಾಂಚೋ ಸ್ಕೂಲ್ ಎಂದೇ ಪ್ರಖ್ಯಾತ.
*ಸಿಬಿಎಸ್ಇ ಅಫಿಲಿಯೇಷನ್ ಪಡೆಯಲು ಹಲವು ವರ್ಷಗಳಿಂದ ಶಾಲೆಯ ಪ್ರಯತ್ನ
* ಸಿನಿಮಾ ತೆರೆಕಂಡ ಬಳಿಕ ಈ ಶಾಲೆ ಸುದ್ದಿಯ ಕೇಂದ್ರ ಬಿಂದುವಾಗಿದೆ
ನವದೆಹಲಿ(ಜ.25): ಬಾಲಿವುಡ್‌ನ ಬಿಗ್ ಹಿಟ್ ಸಿನಿಮಾ '3 ಈಡಿಯಟ್ಸ್' ನಿಮಗೆ ನೆನಪಿರಬಹುದು. ನಟ ಅಮೀರ್ ಖಾನ್ (Aamir Khan) ಅಭಿನಯದ 2009ರಲ್ಲಿ ತೆರೆಕಂಡ ಸಿನಿಮಾ ಬಾಕ್ಸಾಫೀಸ್ ಕೊಳ್ಳೆಹೊಡೆದಿತ್ತು. ಈ ಸಿನಿಮಾದಲ್ಲಿ ಬಳಕೆಯಾಗಿದ್ದ ಶಾಲೆಗೀಗ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ತೆರೆಕಂಡ 20 ವರ್ಷಗಳ ಬಳಿಕ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿರುವ ಈ ದ್ರುಕ್ ಪದ್ಮಾ ಕಾರ್ಪೋ ಶಾಲೆಗೆ (Druk Padma Karpo School) ಸಿಬಿಎಸ್ಇ ಅಫಿಲಿಯೇಶನ್ (CBSE Affiliation) ಸಿಗುವ ನಿರೀಕ್ಷೆ ಇದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಿಕ್ಷಣ ಮಂಡಳಿಯು (Jammu And Kashmir Board) ಈ ಶಾಲೆಗೆ ತನ್ನ ಅನುಮೋದನೆಯನ್ನು ನೀಡಿದೆ. ಈ ಶಾಲೆಯನ್ನು ರಾಂಚೋ (Rancho) ಶಾಲೆ ಎಂದೂ ಕೂಡ ಕರೆಯಲಾಗುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSC)ಯ ಅಫಿಲಿಯೇಶನ್ ನಿಯಮಗಳ ಪ್ರಕಾರ, ಶಾಲೆಗಳಿಗೆ ಆಯಾ ರಾಜ್ಯ ಮಂಡಳಿಯಿಂದ 'ನೋ ಆಬ್ಜೆಕ್ಷನ್ ಸರ್ಟಿಫಿಕೇಟ್' (NOC) ಅಗತ್ಯವಿರುತ್ತದೆ. ವಿದೇಶಿ ಶಾಲೆಗಳಿಗೆ (Foreign Schools) ಆಯಾ ದೇಶದ ವಾಣಿಜ್ಯ ರಾಯಭಾರ (Commerce Embassy) ಕಚೇರಿಯಿಂದ ಅಥವಾ ಭಾರತದ ದೂತಾವಾಸ ಕಚೇರಿಯಿಂದ ಇದೇ ರೀತಿಯ ದಾಖಲೆ ಅವಶ್ಯಕತೆ ಇರುತ್ತದೆ.
2009 ರಲ್ಲಿ '3 ಈಡಿಯಟ್ಸ್' ನಲ್ಲಿ ಕಾಣಿಸಿಕೊಂಡ ನಂತರ ಬಹಳಷ್ಟು ಖ್ಯಾತಿಯಾದ ಈ ಸ್ಕೂಲ್ ಪ್ರಸ್ತುತ ಜಮ್ಮು ಕಾಶ್ಮೀರದ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ (JKBOSE) ಸಂಯೋಜಿತವಾಗಿದೆ. ನಮ್ಮ ಶಾಲೆಗೆ ಸಿಬಿಎಸ್‌ಇ ಮಾನ್ಯತೆ ಪಡೆಯಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ ಅಂತಾರೆ ಶಾಲೆಯ ಮುಖ್ಯೋಪಾಧ್ಯಾಪಕಿ ಮಿಂಗೂರ್ ಆಗಮೊ. ಸಿಬಿಎಸ್ಇ ಮಾನ್ಯತೆ ಪಡೆಯಲು ನಮ್ಮಲ್ಲಿ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳಿವೆ. ಅತ್ಯುತ್ತಮ ಫಲಿತಾಂಶ ದಾಖಲೆಯನ್ನು ಹೊಂದಿದ್ದೇವೆ. ನಾವು ಬೋಧನೆಯ ಹೊಸ ವಿಧಾನಗಳತ್ತ ಗಮನ ಹರಿಸುತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ಕೂಡ ನಮಗೆ NOC ಪ್ರಮಾಣಪತ್ರ ಸಿಕ್ಕಿರಲಿಲ್ಲ. ಈ ವರ್ಷ ನಮಗೆ ಅಫಿಲಿಯೇಶನ್ ಸಿಗಲಿದೆ ಎಂದು ಭಾವಿಸಿದ್ದು, ಯಾವುದೇ ಹೆಚ್ಚಿನ ಅಡೆತಡೆಗಳಿಲ್ಲದೆ ಅದು ನಮಗೆ ದೊರೆಯಲಿದೆ' ಎಂಬ ಮುಖ್ಯೋಪಾಧ್ಯಾಪಕಿ ಮಿಂಗೂರ್ ಆಗಮೊ ವಿಶ್ವಾಸ ವ್ಯಕ್ತಪಡಿಸುತ್ತಾರೆ.
Akkamahadevi Women's University ಮುಚ್ಚುವ ಪ್ರಶ್ನೇಯೇ ಇಲ್ಲವೆಂದ ಕಾರಜೋಳ
ಲಡಾಖ್ ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಗುವುದಕ್ಕಿಂತ ಮುಂಚಿತವಾಗಿಯೂ ನಾವು ಶಾಲೆಗೆ ಅನುಮೋದನೆಯನ್ನು ಪಡೆಯಲು ಪ್ರಯತ್ನಿಸುತ್ತಾ ಬಂದಿದ್ದೇವೆ. ರಾಜ್ಯ ವಿಭಜನೆಯ ನಂತರವೂ ಲಡಾಖ್‌ನ ಶಾಲೆಗಳು ಜಮ್ಮು ಮತ್ತು ಕಾಶ್ಮೀರ ಮಂಡಳಿ(JKBOSE)ಯೊಂದಿಗೆ ಸಂಯೋಜಿತವಾಗಿವೆ. ಇದೀಗ ರಾಜ್ಯ ಮಂಡಳಿಯು ಶಾಲೆಗೆ ಅನುಮೋದನೆ ಕೊಟ್ಟಿದ್ರಿಂದ, ಮುಂದೆ ಸಿಬಿಎಸ್ಇ ಮಾನ್ಯತೆ ಪಡೆಯಲು ಅನುಕೂಲವಾಗಿದೆ ಅಂತಾರೆ ಮುಖ್ಯೋಪಾದ್ಯಾಪಕಿ ಮಿಂಗೋರ್. ಪ್ರದೇಶದ ನೈಸರ್ಗಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ವಾಸ್ತವಿಕ ಅಗತ್ಯಗಳನ್ನು" ಪೂರೈಸುವ ಗುರಿಯೊಂದಿಗೆ ಲಡಾಖ್‌ನಲ್ಲಿ ಹೊಸ ಪ್ರಾದೇಶಿಕ ಮಂಡಳಿಯ ಸ್ಥಾಪನೆಯನ್ನು ಸಮಿತಿಯು ಕಳೆದ ವರ್ಷ ಪ್ರಸ್ತಾಪಿಸಿತ್ತು. ಪದ್ಮಾ ಕರ್ಪೋ ಎಂದರೆ ಸ್ಥಳೀಯ ಭಾಷೆಯಾದ ಬೋಥಿಯಲ್ಲಿ 'ಬಿಳಿ ಕಮಲ' ಎಂದರ್ಥ.
'3 ಈಡಿಯಟ್ಸ್' ಸಿನಿಮಾ ಮುಕ್ತಾಯದ ದೃಶ್ಯದಲ್ಲಿ ಶಾಲೆಯ ಕಟ್ಟಡದ ಗೋಡೆಯು ಕಾಣಿಸಿಕೊಂಡಿತ್ತು. ಇದರಲ್ಲಿ ಪಾತ್ರಧಾರಿಗಳಲ್ಲಿ ಒಬ್ಬರಾದ ಚತುರ್ ಮೂತ್ರ ವಿಸರ್ಜಿಸಲು ಪ್ರಯತ್ನಿಸುತ್ತಾರೆ. ಆದರೆ ಇಬ್ಬರು ಮಕ್ಕಳು ಮೊದಲ ಮಹಡಿಯ ಕಿಟಕಿಯಿಂದ ತಂತಿಯಿಂದ ಜೋಡಿಸಲಾದ ಬಲ್ಬ್ ಅನ್ನು ಅವನ ಮೇಲೆ ಎಸೆದ ಕಾರಣ ಶಾರ್ಕ್ ಸರ್ಕಿಟ್ ಅವಘಢ ಸಂಭವಿಸುತ್ತದೆ.
IGNOU BSW Programme: ವರ್ಚುವಲ್ ಮೋಡ್‌ನಲ್ಲಿ BSW ಕೋರ್ಸ್ ಆರಂಭಿಸಿದ ಇಗ್ನೋ
2010ರ ಹಠಾತ್ ಪ್ರವಾಹದಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡದ ಭಾಗ 'ಐಕಾನಿಕ್ ಇಡಿಯಟಿಕ್ ವಾಲ್' ಇನ್ನೂ ಕ್ಯಾಂಪಸ್‌ನಲ್ಲಿ ಉಳಿದಿದೆ. ಶಾಲೆಯ ಮೊದಲ ಮಹಡಿ ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಲಡಾಖ್‌ನಲ್ಲಿ ಮರದ ರಚನೆಗಳಿಂದ ಬದಲಾಯಿಸಲಾಗಿದೆ. ಶಾಲೆಯ "ರಾಂಚೋ ಗೋಡೆ" ಯನ್ನು ಸ್ಥಳಾಂತರಿಸಲು 2018 ರಲ್ಲಿ ನಿರ್ಧರಿಸಲಾಯಿತು. ಅಲ್ಲಿನ ವಿದ್ಯಾರ್ಥಿಗಳು ಬೋಥಿ, ಇಂಗ್ಲಿಷ್ ಮತ್ತು ಹಿಂದಿ, ಜೊತೆಗೆ ವಿಜ್ಞಾನ, ಸಾಮಾಜಿಕ ಅಧ್ಯಯನಗಳು, ಸೃಜನಶೀಲ ಕಲೆ ಮತ್ತು ಕ್ರೀಡೆಗಳನ್ನು ಅಧ್ಯಯನ ಮಾಡುತ್ತಾರೆ.