ಬೆಂಗಳೂರು (ನ.8) : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು 200 ಕೋಟಿ ರು. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಸಲು ನಿರ್ಧರಿಸಿರುವುದಾಗಿ ಸ್ಥಳೀಯ ಶಾಸಕರೂ ಆದ ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದರೆ ಡಿಕೆಶಿ ಸಿಎಂ ಆಗುವುದು ಅನುಮಾನ: ಸಚಿವ ಮುನಿರತ್ನ
ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಸೋಮವಾರ ಹೊಸಕೆರೆ ಹಳ್ಳಿ ಬಳಿಯ ಪಿಇಎಸ್ ವಿವಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಪಿಇಎಸ್ ಸಂಸ್ಥಾಪಕರ ದಿನ ಹಾಗೂ ವಿವಿ ದತ್ತು ಪಡೆದಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‌ಬುಕ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಓದಿದ್ದು ಕೂಡ ಸರ್ಕಾರಿ ಶಾಲೆಯಲ್ಲಿ. ಅಂದು ನನ್ನ ತಂದೆಗೆ ವಾರ್ಷಿಕ 36 ರು. ನನ್ನ ವಿದ್ಯಾಭ್ಯಾಸದ ಶುಲ್ಕ ಕಟ್ಟುವ ಚೈತನ್ಯವೂ ಇರಲಿಲ್ಲ. 17ನೇ ವರ್ಷಕ್ಕೆ ತಂದೆ ನಮ್ಮನ್ನು ಬಿಟ್ಟು ಹೋದರು. ಮನೆಯಲ್ಲಿ ನಾನೇ ದೊಡ್ಡವನಾದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಇದರಿಂದ ಸರಿಯಾಗಿ ಓದಲಾಗದೆ ಎಸ್ಸೆಸ್ಸೆಲ್ಸಿ ಫೇಲಾದೆ ಎಂದು ನೋವು ವ್ಯಕ್ತಪಡಿಸಿದ ಸಚಿವರು, ಆದರೂ ಇಂದು ಸಚಿವನಾಗಿ ನಿಲ್ಲಲು ಸರ್ಕಾರಿ ಶಾಲೆ ಯಲ್ಲಿ ಬಿದ್ದ ಭದ್ರ ಅಡಿಪಾಯವೇ ಕಾರಣ. ನಾನು ಪಟ್ಟಕಷ್ಟನನ್ನ ಕ್ಷೇತ್ರದ ವಿದ್ಯಾರ್ಥಿಗಳು ಪಡಬಾರದು ಎಂಬ ಉದ್ದೇಶದಿಂದ ಇಡೀ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳನ್ನು 200 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಹೃದಯ ತಜ್ಞೆ ಡಾ.ಎಲ್.ಬಿ ವಿಜಯಲಕ್ಷ್ಮಿ ಬಾಲೇಕುಂದ್ರಿ, ಕುಲಪತಿ ಡಾ.ಜೆ.ಸೂರ್ಯ ಪ್ರಸಾದ್, ಕುಲಸಚಿವ ಕೆ.ಎಸ್.ಶ್ರೀಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಮಿಷನ್ ಆರೋಪ: ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ ಮುನಿರತ್ನ ಕೇಸ್!
ಸಮಾಜದಿಂದ ಎಲ್ಲವನ್ನು ಪಡೆಯುವ ನಾವು ಸಮಾಜಕ್ಕಾಗಿ ಕೊಡುಗೆಯನ್ನು ಕೊಡಬೇಕು. ಪಿಇಎಸ್ ಸಂಸ್ಥೆ ಹಲವು ಶಾಲೆಗಳನ್ನು ದತ್ತುಪಡೆದಿದೆ. ನಾವು ದತ್ತುಪಡೆದ ಶಾಲೆಗಳಲ್ಲಿ ಚೆನ್ನಾಗಿ ಓದುವ ಮಕ್ಕಳಿಗೆ ಪಿಇಎಸ್‌ನಲ್ಲಿ ಉಚಿತ ಸೀಟ್ ಕೂಡ ಕೊಡುತ್ತಾ ಬರುತ್ತಿದ್ದೇವೆ.
- ಡಾ.ಎಂ.ಆರ್.ದೊರೆಸ್ವಾಮಿ, ಪಿಇಎಸ್ ವಿವಿ ಕುಲಾಧಿಪತಿ