ಚಿಕ್ಕಮಗಳೂರು ನಗರದ ಹಲವು ಸೆಂಟರ್ ಗಳಲ್ಲಿ ನಡೆದ ಟಿಇಟಿ ಪರೀಕ್ಷೆ. ಟಿಇಟಿ, ಶಿಕ್ಷಕರ ನೇಮಕಾತಿ ಹಿನ್ನೆಲೆ ನಡೆದ ಪ್ರವೇಶ ಪರೀಕ್ಷೆ . ಆನ್ ಲೈನ್ ನಲ್ಲಿ ಎರಡು ಬಾರಿ ಪ್ರತ್ಯೇಕ ಸೆಂಟರ್ ತೋರಿಸಿದ ಅರ್ಜಿ. ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಬಳಿ ಅಳಲು ನೋಡಿಕೊಂಡ ಅಭ್ಯರ್ಥಿಗಳು .
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.6): ಆನ್ ಲೈನ್ ಎಡವಟ್ಟಿನಿಂದ ಟಿಇಟಿ ಪರೀಕ್ಷೆಯ ಅಭ್ಯರ್ಥಿ ಪರೀಕ್ಷೆ ಬರೆಯದೇ ವಂಚಿತರಾದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಇಂದು ಚಿಕ್ಕಮಗಳೂರು ನಗರದ ವಿವಿಧ ಕಾಲೇಜುಗಳಲ್ಲಿ ಟಿಇಟಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆಂದು ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ, ಆನ್ ಲೈನ್ ಎಡವಟ್ಟಿನಿಂದ ಬಳ್ಳಾರಿ ಮೂಲದ ವಿದ್ಯಾರ್ಥಿಯೋರ್ವ ಪರೀಕ್ಷೆ ಬರೆಯಲಾಗದೇ ಸರ್ಕಾರ, ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟಿಇಟಿ, ಶಿಕ್ಷಕರ ನೇಮಕಾತಿ ಹಿನ್ನೆಲೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಹಾಲ್ ಟಿಕೆಟ್ ತೆಗೆದುಕೊಂಡ ಆರಂಭದಲ್ಲಿ ಒಂದು ಕಾಲೇಜು ತೋರಿಸಿದೆ. ಅಲ್ಲಿಗೆ ಹೋದರೆ ಅಲ್ಲಿ ಆತನ ರಿಜಿಸ್ಟರ್ ನಂಬರ್ ಇಲ್ಲ. ಮತ್ತೊಮ್ಮೆ ಹಾಲ್ ಟಿಕೆಟ್ ನೋಡಿದರೆ ಆಗ ಮತ್ತೆ ಬೇರೆ ಕಾಲೇಜು ತೋರಿಸಿದೆ. ಕೂಡಲೇ ಆತ ಹಾಲ್ ಟಿಕೆಟ್ ಪ್ರಿಂಟ್ ಔಟ್ ತೆಗೆಸಲು ಸಾಧ್ಯವಾಗಿಲ್ಲ. ಭಾನುವಾರವಾದ ಕಾರಣ ಕಂಪ್ಯೂಟರ್ ಸೆಂಟರ್ ಗಳು ಬಾಗಿಲು ಹಾಕಿದ್ದು ಪ್ರಿಂಟ್ ಔಟ್ ತೆಗೆಯಲು ಆಗಿಲ್ಲ. ಕೂಡಲೇ ಆತ ಎತಡನೇ ಕಾಲೇಜಿನ ಬಳಿಯೂ ಬಂದರೂ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಬರೆಯಲು ಬಿಟ್ಟಿಲ್ಲ.
ಇದರಿಂದ ಬಳ್ಳಾರಿಯಿಂದ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ವಿದ್ಯಾರ್ಥಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಅಧಿಕಾರಿಗಳ ಯಡವಟ್ಟಿನಿಂದ ನಾನು ಪರೀಕ್ಷೆ ಬರೆಯಲು ಆಗಿಲ್ಲ ಎಂದು ಸರ್ಕಾರ-ಅಧಿಕಾರಿಗಳ ವಿರುದ್ಧ ಅಭ್ಯರ್ಥಿಗಳಾದ ಶಂಕರ್, ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಾದ್ಯಂತ ಹಲವು ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆದಿದ್ದು, ಪೇಪರ್-1 ಕ್ಕೆ 1,54,929 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೂ 589 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪೇಪರ್-2ಕ್ಕೆ 2,06,456 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ 781 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ಕರ್ನಾಟಕದಲ್ಲಿ ಸರ್ಕಾರಿ ಶಾಲಾ ದಾಖಲಾತಿ ಏರಿಕೆ, ಖಾಸಗಿ ಇಳಿಕೆ..!
ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಭ್ಯರ್ಥಿಗಳಿಗೆ ಹಲವು ಸೂಚನೆ ನೀಡಿ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿತ್ತು. ಪರೀಕ್ಷೆ ಆರಂಭಕ್ಕೂ ಮುನ್ನ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರದ ಬಳಿ ಅಭ್ಯರ್ಥಿ ಹಾಜರಿರಬೇಕು. ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರದ ಬಾಗಿಲು ಮುಚ್ಚಿ ಪರೀಕ್ಷಾರ್ಥಿಗಳ ತಪಾಸಣೆ ನಡೆಸಲಾಗುವುದು. ಪರೀಕ್ಷೆ ಶುರುವಾದ ನಂತರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ. ಒಮ್ಮೆ ಕೊಠಡಿ ಪ್ರವೇಶಿಸಿದ ಬಳಿಕ ಪರೀಕ್ಷೆ ಮುಗಿಯುವವರೆಗೂ ಹೊರ ಬರಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಜೈಲಿನಲ್ಲಿದ್ದುಕೊಂಡೇ ಪದವಿ ಓದಿದ ಛಲಗಾರ
ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿತ್ತು. ಮೊಬೈಲ್, ಕ್ಯಾಲುಕಲೇಟರ್, ಕೈಗಡಿಯಾರ, ಬೆಂಕಿಪೊಟ್ಟಣ, ಲೈಟರ್, ಬ್ಲೂಟೂತ್ ಮತ್ತಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುಲು ಅವಕಾಶ ನಿಷೇಧಿಸಲಾಗಿತ್ತು.