ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸುತ್ತೋಲೆ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ

By Suvarna News  |  First Published Mar 14, 2021, 3:49 PM IST

ಶಾಲಾ-ಕಾಲೇಜುಗಳ ರಜೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುತ್ತೋಲೆ ಅಸಲಿಯೋ,ನಕಲಿಯೋ ಎನ್ನುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ ಸಿಕ್ಕಿದೆ.


ಬೆಂಗಳೂರು, (ಮಾ.14): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಇತ್ತ ಶಾಲಾ-ಕಾಲೇಜುಗಳ ರಜೆ ಸುತ್ತೋಲೆ ಫುಲ್ ವೈರಲ್ ಆಗುತ್ತಿದೆ.

ಹೌದು...15 ದಿನಗಳವರೆಗೆ ಕಾಲೇಜುಗಳಿಗೆ ರಜೆ, ಆದರೆ ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂಬ ಸರ್ಕಾರದ ಸುತ್ತೋಲೆಯೊಂದು ಹರಿದಾಡುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

Latest Videos

undefined

ಬೇಸಿಗೆ ರಜೆ, ಪರೀಕ್ಷೆ ಇಲ್ಲದೇ ಪಾಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ಇನ್ನು ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸ್ಪಷ್ಟನೆ ಕೊಟ್ಟಿದ್ದು, ಇಲಾಖೆಯಿಂದ ರಜೆ ನೀಡುವ ಕುರಿತು ಯಾವುದೇ ಆದೇಶ ಪ್ರಕಟ ಮಾಡಿಲ್ಲ. ಇದು ಸುಳ್ಳು ಸುದ್ದಿ ಎಂದಿದ್ದು,  ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟವರ ಮೇಲೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಸೈಬರ್ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸೂಚಿಸಿದ್ದಾರೆ.

ಇನ್ನು ಪರೀಕ್ಷೆ ಇಲ್ಲದೇ ಪಾಸು ಎಂಬ ಸುದ್ದಿಯ ಕುರಿತಾಗಿ ಇದಾಗಲೇ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಸ್ಪಷ್ಟನೆ ನೀಡಿದ್ದು, ಇದು ಫೇಕ್​ ಸುದ್ದಿ, ಸರ್ಕಾರದಿಂದ ಇಂಥ ಆದೇಶ ಹೊರಟಿಲ್ಲ ಎಂದಿದ್ದಾರೆ. ಇದೀಗ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರದ ಸುತ್ತೋಲೆ ಹೋಲುವ ಸಂದೇಶದ ಕುರಿತು ಸ್ಪಷ್ಟನೆ ನೀಡಿದ್ದು, ಇದು ಅಸಲಿ ಸುತ್ತೋಲೆ ಅಲ್ಲ. ಸರ್ಕಾರದಿಂದ ಇಂಥ ಯಾವುದೇ ಆದೇಶ ಹೊರಟಿಲ್ಲ. ಇವುಗಳನ್ನು ಯಾರೂ ನಂಬಬಾರದು ಎಂದಿದ್ದಾರೆ.

click me!