Karnataka 2nd PUC exam 2022: ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ, ಉಪನ್ಯಾಸಕರಿಗೆ ತರಗತಿ ಮುಗಿಸುವ ಒತ್ತಡ

By Suvarna NewsFirst Published Dec 28, 2021, 5:30 PM IST
Highlights
  • ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲು ಶಿಕ್ಷಣ ಇಲಾಖೆ ತೀರ್ಮಾನ
  • ಪರೀಕ್ಷೆಯು ಸುಮಾರು 1 ತಿಂಗಳುಗಳ ಕಾಲ ಮುಂದಕ್ಕೆ ಹೋಗುವ ಸಾಧ್ಯತೆ
  • ಮಾರ್ಚ್ ಬದಲಾಗಿ ಮೇ ತಿಂಗಳ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ

ಬೆಂಗಳೂರು(ಡಿ.29): ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿ ಕಡಿತವಾಗಿ ಪಠ್ಯಕ್ರಮ ಪೂರ್ಣವಾಗದ ಹಿನ್ನೆಲೆಯಲ್ಲಿ, ಜೊತೆಗೆ ಒಮಿಕ್ರಾನ್ ಭೀತಿ ಹೆಚ್ಚುತ್ತಿರುವ ಕಾರಣ 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಪರೀಕ್ಷೆಯು ಸುಮಾರು 1 ತಿಂಗಳುಗಳ ಕಾಲ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್‌ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ  ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಈ ಬಾರಿ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಿ ಮಾರ್ಚ್ 26ರ ಒಳಗೆ ಮುಗಿಯಲಿದೆ ಎಂದು ಅಂದಾಜಿಲಾಗಿತ್ತು.  ಆದರೆ ಈ ಬಾರಿ ತಡವಾಗಲಿದೆ. ಮೇ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ವೃತ್ತಿಪರ ಕೋರ್ಸ್‌ಗಳ ಆಯ್ಕೆಗೆ  ದ್ವಿತೀಯ ಪಿಯುಸಿ ಅಂಕಗಳು ನಿರ್ಣಾಯಕವಾಗಿರುವುದರಿಂದ ಪಠ್ಯಕ್ರಮ ಪೂರ್ಣಗೊಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಉಪನ್ಯಾಸಕರಿಗೆ ಸವಾಲಾಗಿದೆ. ಹೀಗಾಗಿ ಸುಮಾರು 1 ತಿಂಗಳು ತರಗತಿಗಳು ಮುಂದಕ್ಕೆ ಹೋಗಲಿದೆ.

ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿ ಕಡಿತವಾಗಿದೆ ಹೊರತು  ದ್ವಿತೀಯ ಪಿಯು ಪಠ್ಯಕ್ರಮವನ್ನು ಶಿಕ್ಷಣ ಇಲಾಖೆ ಕಡಿತ ಮಾಡಿಲ್ಲ. ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದಲ್ಲಿ ಶೇಕಡ.20 ಕಡಿತ ಮಾಡಲಾಗಿದೆ. ದ್ವಿತೀಯ ಪಿಯುಸಿ ಅಂಕಗಳು ಮುಂದಿನ ವೃತ್ತಿಪರ ಕೋರ್ಸ್‌ಗಳ ಆಯ್ಕೆಗೆ ಹೆಚ್ಚು ಪ್ರಾಮುಖ್ಯವಾಗಿರುವುದರಿಂದ ಪಿಯು ಪಠ್ಯಕ್ರಮವನ್ನು ಇಲಾಖೆ ಕಡಿತ ಮಾಡಿಲ್ಲ. 2021 ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೇ-ಜೂನ್‌ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಆ ವೇಳೆಗೆ ಕೇಂದ್ರ ಪಠ್ಯಕ್ರಮದ ಪರೀಕ್ಷೆಗಳನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸಹ ಪರೀಕ್ಷೆ ರದ್ದುಗೊಳಿಸಿ, 6.66 ಲಕ್ಷ ವಿದ್ಯಾರ್ಥಿಗಳನ್ನು ಪಾಸ್ ಮಾಡಿತ್ತು.

SSLC EXAMINATION 2022: ಇನ್ನೂ ಪ್ರಕಟವಾಗದ ಪರೀಕ್ಷಾ ದಿನಾಂಕ, ಒಮಿಕ್ರಾನ್ ಭೀತಿಯೇ? ಇಲಾಖೆಯ ನಿರ್ಲಕ್ಷ್ಯವೇ?

ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ: ಕಳೆದ ನವೆಂಬರ್ ನಲ್ಲಿ ಅರ್ಧವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವುದಾಗಿ ಪಿಯು ಮಂಡಳಿ ನಿರ್ದೇಶಕರು ತಿಳಿಸಿದ್ದರು. ಮಂಡಳಿಯೇ ಪ್ರಶ್ನಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು, ಜಿಲ್ಲಾಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿಯು ಹೇಳಿತ್ತು. ಇದನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿರೋಧಿಸಿದ್ದರು.  ಕಾಲೇಜುಗಳಲ್ಲಿ ಇಷ್ಟು ಪಾಠವೇ ಆಗಿಲ್ಲ ಎನ್ನುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಕ್ಷೇಪವಾಗಿತ್ತು. 

Pariksha Pe Charcha 2022: ಮೋದಿ ಜತೆ ಮಾತನಾಡ ಬಯಸುವ ವಿದ್ಯಾರ್ಥಿಗಳಿಗೆ ಡಿ.28 ರಿಂದ ನೋಂದಣಿ

ಈ ಮೊದಲು ಅರ್ಧವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಹಂತದಲ್ಲಿಯೇ ನಡೆಸಲಾಗುತ್ತಿತ್ತು. ಕಾಲೇಜುಗಳಲ್ಲಿ ಮುಕ್ತಾಯವಾಗಿರುವ ಪಠ್ಯಕ್ರಮವನ್ನು ಗಮನಿಸಿ ಪ್ರಶ್ನಪತ್ರಿಕೆಗಳನ್ನು ರೂಪಿಸಲಾಗುತ್ತಿತ್ತು.  ಆದರೆ ಹೊಸ ನೀತಿ ವಿರೋಧಿಸಿ ನವೆಂಬರ್ 17ರಂದು ವಿದ್ಯಾರ್ಥಿಗಳು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಂಡಳಿಯು ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. ಕೊನೆ ಉನ್ನತ ಮಟ್ಟದ ಸಭೆ ನಡೆದು  ವಿದ್ಯಾರ್ಥಿಗಳ ಪ್ರತಿಭಟನೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ  (Pre University Examination) ಮಣಿದು  ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಗಳನ್ನು (Second PUC Mid- Term Examination) ಮುಂದೂಡಿತು. ಮತ್ತು ಹಳೆಯ ಮಾದರಿಯನ್ನೇ ಅನುಸರಿಸಿತು.

ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಧ್ಯ ವಾರ್ಷಿಕ ಪರೀಕ್ಷೆ ಡಿಸೆಂಬರ್ 9 ರಿಂದ ಡಿಸೆಂಬರ್ 23 ವರೆಗೂ ನಡೆಯಿತು. ಆಯಾ ಕಾಲೇಜುಗಳ ಪ್ರಾಂಶುಪಾಲರ ಮೇಲುಸ್ತುವಾರಿಯಲ್ಲಿ ಪರೀಕ್ಷೆ ನಡೆದಿದ್ದು,  ಪರೀಕ್ಷೆ ಮುಗಿದ ಹದಿನೈದು ದಿನಗಳ ಬಳಿಕ ಫಲಿತಾಂಶವನ್ನು ಸ್ಯಾಟ್ಸ್‌ನಲ್ಲಿ ಪ್ರಕಟಿಸಲಾಗುವುದು ಎಂದು ಇಲಾಖೆ ಹೇಳಿದೆ.

click me!