1 ವರ್ಷದ 8 ತಿಂಗಳ ಬಳಿಕ 1ರಿಂದ 5ನೇ ಕ್ಲಾಸ್‌ ಶುರು..!

By Kannadaprabha NewsFirst Published Oct 24, 2021, 10:02 AM IST
Highlights

*   ನಾಳೆಯಿಂದ 1ರಿಂದ 5ನೇ ಕ್ಲಾಸ್‌ ಆರಂಭ
*   ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಕ್ಕೆ ಸರ್ವಸಿದ್ಧತೆ
*   ನ.2ರಿಂದ ಈ ಐದೂ ತರಗತಿ ಮಕ್ಕಳಿಗೆ ಬಿಸಿಯೂಟ ಆರಂಭಿಸಲು ಸಿದ್ಧತೆ 
 

ಬೆಂಗಳೂರು(ಅ.24):  ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ(Primary Schools) ನಾಳೆಯಿಂದ (ಅ.25) 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ(Students) ಭೌತಿಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಅಗತ್ಯ ತಯಾರಿ ಮಾಡಿಕೊಂಡಿದ್ದು, ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಿಕ್ಷಕರು ಕಾತರದಲ್ಲಿದ್ದಾರೆ.

ಇದರೊಂದಿಗೆ ಕಳೆದ ಒಂದು ವರ್ಷದ ಎಂಟು ತಿಂಗಳಿಂದ ಬಂದ್‌ ಆಗಿದ್ದ ಪ್ರಾಥಮಿಕ ಶಾಲೆಗಳಲ್ಲೂ ಮಕ್ಕಳ(Children) ಕಲರವ ಶುರುವಾಗಲಿದೆ. ಈಗಾಗಲೇ 6ರಿಂದ 12ನೇ ತರಗತಿ(Class) ಆರಂಭವಾಗಿರುವುದರಿಂದ, ಸೋಮವಾರ 1ರಿಂದ 5ನೇ ಕ್ಲಾಸ್‌ ಆರಂಭವಾದರೆ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ ಮತ್ತು ಯುಕೆಜಿ) ಹೊರತುಪಡಿಸಿ ಉಳಿದೆಲ್ಲಾ ತರಗತಿಗಳು ಆರಂಭವಾದಂತಾಗಲಿವೆ.

ಕೊರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಚಿಣ್ಣರ ಧಾಮ”

ಈಗಾಗಲೇ ಶಿಕ್ಷಣ ಇಲಾಖೆಯ(Department of Education) ಮಾರ್ಗಸೂಚಿಯಂತೆ(Guidelines) ಗ್ರಾಮೀಣ ಭಾಗದ ಶಾಲೆಗಳಲ್ಲಿ ಗ್ರಾಮ ಪಂಚಾಯಿತಿ, ನಗರ ಪ್ರದೇಶದ ಶಾಲೆಗಳಲ್ಲಿ ತಾಲೂಕು, ಜಿಲ್ಲಾ ಪಂಚಾಯಿತಿ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಶಾಲಾ ಕೊಠಡಿ, ಆವರಣ, ಪೀಠೋಪಕರಣ ಎಲ್ಲವನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸಿಂಗ್‌ ಮಾಡಲಾಗಿದೆ. ಶಾಲೆಗೆ ಮಕ್ಕಳು ಬಂದಾಗ ಕೈಗೆ ಸ್ಯಾನಿಟೈಸರ್‌(Sanitizer) ಹಾಕುವುದು, ದೇಹದ ಉಷ್ಣಾಂಶ(Body Temperature) ತಪಾಸಣೆ, ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಾಸ್ಕ್‌(Mask) ಧರಿಸದೆ ಬರುವ ಮಕ್ಕಳಿಗೆ ಮಾಸ್ಕ್‌ ವಿತರಿಸಲು ಕ್ರಮ ವಹಿಸಲಾಗಿದೆ. ಭಾನುವಾರ ರಜಾದಿನವಾದ್ದರಿಂದ ಶನಿವಾರವೇ ರಾಜ್ಯದ(Karnataka) ಬಹುತೇಕ ಎಲ್ಲಾ ಶಾಲೆಗಳಲ್ಲಿ ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕರು ಮಕ್ಕಳನ್ನು ಹೂ, ಚಾಕೊಲೇಟ್‌ ನೀಡಿ ಸ್ವಾಗತಿಸಲಿದ್ದಾರೆ. ಪುಟ್ಟಮಕ್ಕಳು ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ಶಾಲಾ ವಾತಾವರಣದಿಂದ ದೂರವಾಗಿದ್ದು, ಅವರನ್ನು ಮರಳಿ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ.

ನ.2ರಿಂದ ಬಿಸಿಯೂಟ:

ಅ.30ರ ವರೆಗೆ ನಿತ್ಯ ಅರ್ಧ ದಿನ ಮಾತ್ರ ತರಗತಿಗಳು ನಡೆಯುವುದರಿಂದ ಈ ಮಾಸಾಂತ್ಯದವರೆಗೆ 1ರಿಂದ 5ನೇ ತರಗತಿ ಮಕ್ಕಳಿಗೆ ಬಿಸಿಯೂಟ ಯೋಜನೆ ಇರುವುದಿಲ್ಲ. ನ.2ರಿಂದ ಈ ಐದೂ ತರಗತಿ ಮಕ್ಕಳಿಗೆ ಬಿಸಿಯೂಟ ಆರಂಭಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲ ಶಾಲೆಗಳಿಗೂ ಅಗತ್ಯ ಸೂಚನೆ ನೀಡಿದೆ.

ಇದಕ್ಕಾಗಿ ಆರಂಭದ ಕೆಲ ವಾರ ಕಾಲ ನೇರ ಪ್ರಸಕ್ತ ತರಗತಿ ಬೋಧನೆ ನಡೆಸದೆ ಸೇತುಬಂಧ ಮೂಲಕ ಅಕ್ಷರ, ಕಾಗುಣಿತ ಅಂದರೆ ಅರಂಭಿಕ ಶಿಕ್ಷಣದಿಂದ(Education) ತರಬೇತಿಗೊಳಿಸಿ ನಂತರ ಪ್ರಸಕ್ತ ಸಾಲಿನ ಪಠ್ಯ ಬೋಧನೆ ಮಾಡಲು ಇಲಾಖೆ ಈಗಾಗಲೇ ಶಿಕ್ಷಕರಿಗೆ(Teachers) ಸೂಚನೆ ನೀಡಿದೆ.
 

click me!