ಕಾಲೇಜು ವಿದ್ಯಾಭ್ಯಾಸ ಮುಗಿಸಿ ಈಗಷ್ಟೇ ಆಫೀಸ್ ಗೆ ಸೇರಿರುತ್ತೀರಿ. ಹಾಗಂತ ಇಲ್ಲೂ ಕಾಲೇಜಿನಲ್ಲಿ ಇದ್ದ ಹಾಗೆ ಬೇಕಾಬಿಟ್ಟಿ ಆಗಿರಲು ಸಾಧ್ಯವಿಲ್ಲ. ಹಾಗಿದ್ದರೆ ಆಫೀಸ್ ನಲ್ಲಿ ನಿಮ್ಮ ನಡವಳಿಕೆ ಹೇಗಿರಬೇಕು?
ಆಫೀಸ್‌ನಲ್ಲಿ ನಾವು ದಿನದ 8-10 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತೇವೆ. ಜೊತೆಗೆ ಅಷ್ಟೇ ಹೊತ್ತು ಅಲ್ಲಿನ ಸಹೋದ್ಯೋಗಿಗಳೊಂದಿಗೆ ಬೆರೆತಿರುತ್ತೇವೆ. ಆದುದರಿಂದ ಅವರ ಜೊತೆಗಿನ ನಿಮ್ಮ ವ್ಯವಹಾರವೂ ಉತ್ತಮವಾಗಿರಬೇಕು. ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದರೆ ಮಾತ್ರ ಆಫೀಸ್ ಮತ್ತು ಕರಿಯರ್‌ನಲ್ಲಿ ಯಶಸ್ಸು ಸಾಧ್ಯ. ಹಾಗಿದ್ದರೆ ಕಚೇರಿಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು?
ಸ್ಮಾರ್ಟ್ ಆದ್ರೂ ಕೆಲವರು ಉದ್ಯೋಗದಲ್ಲೇಕೆ ಫೇಲ್ಯೂರ್ ಆಗ್ತಾರೆ?
ನಿಧಾನವಾಗಿ ಮಾತನಾಡಿ
ಕಚೇರಿಯಲ್ಲಿ ನಿಧಾನವಾಗಿ ಮಾತನಾಡುವುದನ್ನು ಕಲಿಯಿರಿ. ಜೋರಾಗಿ ಮಾತನಾಡಬೇಡಿ. ಮೃದುವಾಗಿ ನಗುತ್ತ ಮಾತನಾಡಿ. ಫೋನ್ ಕೂಡ ಸೈಲೆಂಟ್ ಅಥವಾ ವೈಬ್ರೇಟ್ ಮೋಡ್‌ನಲ್ಲಿರಲಿ. ಒಟ್ಟಿನಲ್ಲಿ ಇತರರಿಗೆ ಡಿಸ್ಟರ್ಬ್ ಆಗದಂತೆ ನೋಡಿಕೊಳ್ಳಿ.
ಐ ಕಾಂಟ್ಯಾಕ್ಟ್
ಆಫೀಸಿನಲ್ಲಿ ಯಾವತ್ತೇ ಆದರೂ ಸಹದ್ಯೋಗಿ ಜೊತೆ ಮಾತನಾಡುವಾಗ ಐ ಕಾಂಟಾಕ್ಟ್ ಇರಲಿ. ಇದರಿಂದ ಅವರಿಗೂ ನೀವು ಅವರ ಮಾತನ್ನು ಕೇಳುತ್ತೀದ್ದೀರಿ ಎಂದು ಅನಿಸುತ್ತದೆ.
ಟೈಮ್‌ಗೆ ಸರಿಯಾಗಿ ಆಫೀಸ್‌ಗೆ ಹೋಗಿ
undefined
ಟ್ರಾಫಿಕ್ ಜಾಮ್ ನೆಪ ಹೇಳಿ ಅಥವಾ ದಿನ ಕೆಲಸ ಕಾರ್ಯದಿಂದ ಪದೇ ಪದೇ ಆಫೀಸ್‌ಗೆ ತಡವಾಗಿ ಹೋಗಬೇಡಿ. ಇದರಿಂದ ನಿಮ್ಮ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ನಿಮ್ಮ ಇಮೇಜ್ ಹಾಳಾಗುತ್ತದೆ. ಆದುದರಿಂದ ಸಮಯಕ್ಕೆ ಸರಿಯಾಗಿ ಆಫೀಸ್‌ಗೆ ಹೋಗೋದನ್ನು ರೂಢಿ ಮಾಡಿಕೊಳ್ಳಿ.
ಇಂಟರ್ ವ್ಯೂ ಸಮಯದಲ್ಲಿ ಅವಾಯ್ಡ್ ಮಾಡಲೇಬೇಕಾದ ವಿಷಯಗಳು
ಡ್ರೆಸ್ ಸರಿಯಾಗಿರಲಿ
ಫ್ಯಾಷನೇಬಲ್ ಆಗಿ ಕಾಣಲು ಏನೇನೋ ಡ್ರೆಸ್ ಧರಿಸಿ ನಿಮ್ಮ ಇಮೇಜ್ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಡ್ರೆಸ್ ಸ್ಟೈಲ್ ಪ್ರತಿಯೊಬ್ಬರೂ ಮೆಚ್ಚುವಂತಿರಲಿ.
ಡೆಡ್‌ಲೈನ್
ಯಾವುದೇ ಅಸೈನ್‌ಮೆಂಟ್‌ಗೆ ಸಹಿ ಮಾಡುವಾಗ ಅದರ ಡೆಡ್‌ಲೈನ್ ಚೆಕ್ ಮಾಡಿ. ಅದನ್ನು ನೋಡದೆ ಕೆಲಸ ನಿಧಾನ ಮುಗಿಸಿದರೆ ಬಾಸ್ ಕೋಪಕ್ಕೆ ತುತ್ತಾಗುವುದು ಗ್ಯಾರಂಟಿ.
ನಾಲೆಡ್ಜ್ ಹಂಚಿಕೊಳ್ಳಿ
ಯಾವುದೇ ಹೊಸ ಕೆಲಸ ಅಥವಾ ಪ್ರಾಜೆಕ್ಟ್ ಶುರು ಮಾಡುವ ಮುನ್ನ ಅದರ ಬಗ್ಗೆ ನಿಮ್ಮ ಐಡಿಯಾಗಳನ್ನು ನಿಮ್ಮ ಬಾಸ್ ಜೊತೆ ಹಂಚಿಕೊಳ್ಳಿ. ಜೊತೆಗೆ ಅವರ ಸಲಹೆ ಪಡೆಯಿರಿ. ಇದರಿಂದ ಅವರು ನಿಮ್ಮ ಕಾರ್ಯದ ಬಗ್ಗೆ ಇಂಪ್ರೆಸ್ ಆಗಬಹುದು.
ಕೋರ್ಸ್ ಸಣ್ಣದು, ಭವಿಷ್ಯದ ಹಾದಿ ದೊಡ್ಡದು!
ಸೀನಿಯರ್ಸ್‌ಗಳನ್ನು ಫಾಲೋ ಮಾಡಿ
ಆಫೀಸಿನಲ್ಲಿ ಯಶಸ್ಸು ಗಳಿಸಬೇಕು ಎಂದಾದರೆ ನಿಮ್ಮ ಸೀನಿಯರ್ಸ್‌ಗಳನ್ನು ಫಾಲೋ ಮಾಡಿ. ಅವರು ನಿಮಗೆ ಉತ್ತಮ ಮಾರ್ಗದರ್ಶನ ನೀಡಿ ಕೆಲಸದಲ್ಲಿ ಯಶಸ್ಸು ಸಿಗಲು ಸಹಾಯ ಮಾಡುತ್ತಾರೆ.