ಚೆನ್ನಾಗಿ ಮಾತನಾಡೋರಿಗೆ ಈ ಕೆಲಸ ಬೆಸ್ಟ್....

By Web Desk  |  First Published Jun 24, 2019, 3:54 PM IST

ಸಾರ್ವಜನಿಕರೊಂದಿಗೆ ಅತ್ಯುತ್ತಮ ಸಂಬಂಧ ಹೊಂದುವ ಚಾಕಚಕ್ಯತೆ ಇರೋರಿಗೆ ಹೇಳಿ ಮಾಡಿಸಿದ ಕೆಲಸ ಪಿಆರ್‌ಒ. ವಿವಿಧ ಕಂಪನಿಗಳಲ್ಲಿ ಇಂಥದ್ದೊಂದು ಪೋಸ್ಟ್ ಇದ್ದು, ವಿಭಿನ್ನ ಜ್ಞಾನದೊಂದಿಗೆ,  ಅತ್ಯುತ್ತಮ ಕೌಶಲ್ಯ ಇರೋ ವ್ಯಕ್ತಿಗೆ ಇಲ್ಲಿ ವಿಪರೀತ ಅವಕಾಶಗಳಿರುತ್ತವೆ.


ಈಗ ಕೆಲಸ ಮಾಡುವವರಿಗೆ ಶ್ರಮ, ಕೌಶಲ್ಯದೊಂದಿಗೆ ಸ್ಮಾರ್ಟ್ ಆಗಿ ಕಾರ್ಯ ನಿರ್ವಹಿಸೋ ಚಾಕಚಕ್ಯತೆಯೂ ಇರಬೇಕು. ಆಗ ಮಾತ್ರ ಉದ್ಯೋಗದಲ್ಲಿ ಯಶಸ್ಸು ಕಾಣುವುದು ಸುಲಭ. ಜೊತೆಗೆ ನೀವು ಯಾವ ಕೆಲಸ  ಮಾಡುತ್ತಿದ್ದೀರಿ, ಅದರಿಂದ ಯಾರಿಗೆ ಲಾಭ, ನಿಮಗೆ ಆ ಕೆಲಸ ನಿರ್ವಹಿಸಲು ಸಾಧ್ಯವೇ ಅನ್ನೋದನ್ನು ತಿಳಿದುಕೊಳ್ಳುವುದೂ ಅಗತ್ಯ.  ಒಂದು ಕಂಪನಿಗಾಗಿ, ಸಂಸ್ಥೆಗಾಗಿ ಪಬ್ಲಿಕ್ ರಿಲೇಷನ್‌ನಲ್ಲಿ ಕಾರ್ಯ  ನಿರ್ವಹಿಸಬೇಕಾಗುತ್ತದೆ. ಆ ಸಂಸ್ಥೆ ಬಗ್ಗೆ ಸಾರ್ವಜನಿಕರಿಗೆ ಸಾಧ್ಯವಾದಷ್ಟು ಉತ್ತಮ ಮಾಹಿತಿಯನ್ನು ನೀಡುವುದು ಹಾಗೂ ಸಾರ್ವಜನಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುವುದು ಇಲ್ಲಿ ಮುಖ್ಯ.

ಬೆಂಗಳೂರಿನ ಐಐಎಸ್‌ಸಿಗೆ ವಿಶ್ವದಲ್ಲೇ ನಂ. 2 ಗೌರವ!

Tap to resize

Latest Videos

ಪಬ್ಲಿಕ್ ರಿಲೇಶನ್‌ನಲ್ಲಿ ಕರಿಯರ್ ರೂಪಿಸುವುದು ಹೇಗೆ? 

ಏನು ಮಾಡಬೇಕು? 

ಈ ಫೀಲ್ಡಿನಲ್ಲಿ ಕಾರ್ಯ ನಿರ್ವಹಿಸಲು ಭಾಷಾ ಜ್ಞಾನ ಅತ್ಯಗತ್ಯ. ಮಾತೃ ಭಾಷೆಯೊಂದಿಗೆ ಇಂಗ್ಲಿಷ್‌ನಲ್ಲಿಯೂ ಹೋಲ್ಡ್ ಇರಬೇಕು. ಮೀಡಿಯಾ ಜೊತೆ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಭಾಷೆ ಮೇಲೆ ಹಿಡಿತವಿದ್ದಷ್ಟೂ, ಕೆಲಸ ಸುಲಭವಾಗುತ್ತದೆ. ಆ ಸಂದರ್ಭದಲ್ಲಿ ರಿಪೋರ್ಟನ್ನು ಇಂಗ್ಲಿಷಿನಲ್ಲಿ ನೀಡಬೇಕು ಹಾಗೂ ಇಂಗ್ಲಿಷ್‌ನಲ್ಲಿಯೇ ಮಾಹಿತಿ ನೀಡಬೇಕಾಗಿಯೂ ಬರುತ್ತದೆ. ಆದುದರಿಂದ ಗ್ರಾಮರ್ ಮತ್ತು ಶಬ್ದ ರಚನೆ ಬಗ್ಗೆ ಹಿಡಿತ ಇರಬೇಕು. 

ಎಲ್ಲೆಲ್ಲಿ ಈ ಕೋರ್ಸ್ ಲಭ್ಯ? 

undefined

- ಕ್ಸೆವಿಯರ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಮುಂಬೈ 

ಇಂಟರ್ ವ್ಯೂ ಸಮಯದಲ್ಲಿ ಅವಾಯ್ಡ್ ಮಾಡಲೇಬೇಕಾದ ವಿಷಯಗಳು

- ಸಿಂಬೋಯೋಸೀಸ್ ಇನ್ಸ್ಟಿಟ್ಯೂಟ್ ಪುಣೆ 

- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್, ನವ ದೆಹಲಿ 

ಎಲ್ಲೆಲ್ಲಿ ಕೆಲಸ ಮಾಡಬಹುದು? 

ಇಂದಿನ ವಿದ್ಯಮಾನದಲ್ಲಿ ಕೇವಲ ಮಾಧ್ಯಮಗಳಲ್ಲಿ ಮಾತ್ರವಲ್ಲ, ದೊಡ್ಡ ದೊಡ್ಡ ಕಂಪೆನಿಗಳಲ್ಲಿಯೂ ಪಿಆರ್‌ಗಳ ಅಗತ್ಯ ಇರುತ್ತದೆ. ಇತ್ತೀಚಿಗೆ ಹೆಚ್ಚಿನ ಸಂಸ್ಥೆಗಳಲ್ಲಿ ಈ ಪೋಸ್ಟ್ ಇರೋದರಿಂದ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜೊತೆಗೆ ಉತ್ತಮ ವೇತನವೂ ಬರುತ್ತದೆ. 

ಕೋರ್ಸ್ ಸಣ್ಣದು, ಭವಿಷ್ಯದ ಹಾದಿ ದೊಡ್ಡದು!

ನಿಮಗೂ ಜನರೊಂದಿಗೆ ಬೆರೆಯುವುದು, ಮಾತುಕತೆ ನಡೆಸುವುದು ಇಷ್ಟವೆಂದಾದರೆ ಇವತ್ತಿನಿಂದಲೇ ಪಿಆರ್ ಆಗಲು ಏನೆಲ್ಲಾ ಬೇಕು, ಏನು ಅಗತ್ಯ ಇದೆ ಅನ್ನೋದರ ಬಗ್ಗೆ ತಿಳಿದು ಇಂದೇ ಕಾರ್ಯಪ್ರವೃತ್ತರಾಗಿರಿ.  

click me!