ಶಿಕ್ಷಕರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆ

By Suvarna NewsFirst Published Jul 3, 2020, 9:10 PM IST
Highlights

ಶಿಕ್ಷಕರು, ಸಂಶೋಧಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ  ಉನ್ನತ ಶಿಕ್ಷಣ ಇಲಾಖೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದೆ.

ನವದೆಹಲಿ, (ಜುಲೈ,03): ಕಾಲೇಜುಗಳು ಇನ್ನೂ ಕಾರ್ಯಾರಂಭ ಮಾಡದ ಕಾರಣ ಅಲ್ಲಿನ ಶಿಕ್ಷಕರು, ಸಂಶೋಧಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಜುಲೈ 31ರವರೆಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಂ) ನಿರ್ವಹಿಸಲು ಅನುಮತಿ ನೀಡಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಉನ್ನತ ಶಿಕ್ಷಣ ಇಲಾಖೆಗಳಿಗೆ ಸೂಚಿಸಿದೆ.

ಇದೇ ವೇಳೆ, ಯುಜಿಸಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ಅಡಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು ಜುಲೈ 31ರವರೆಗೆ ಮುಚ್ಚಿರುತ್ತವೆ ಎಂದು  ತಿಳಿಸಿದೆ. 

ಲಡಾಖ್‌ಗೆ ಮೋದಿ ಭೇಟಿ, ರಾಜ್ಯಕ್ಕೆ ಎದುರಾಯ್ತು ಭಾರಿ ಮಳೆ ಭೀತಿ; ಜು.3ರ ಟಾಪ್ 10 ನ್ಯೂಸ್!

ಈ ವೇಳೆ ಆನ್‌ಲೈನ್‌ ಶಿಕ್ಷಣಕ್ಕೆ ಹಾಗೂ ದೂರ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸೂಚಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲ, ಇದೇ ಮಾದರಿಯ ಮಾರ್ಗಸೂಚಿಗಳನ್ನು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕು ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿನೆ ನೀಡಿದೆ.

 ರಾಜ್ಯ ಸರ್ಕಾರದ ಸುತ್ತೋಲೆ 
 ಉನ್ನತ ಶಿಕ್ಷಣ ಇಲಾಖೆಯಡಿಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಬೋಧಕ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಉನ್ನತ ಶಿಕ್ಷಣ ಇಲಾಖೆಯಡಿಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಬೋಧಕ ಸಿಬ್ಬಂದಿಗಳು ಜುಲೈ 16 ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನ‌ ಕಾರ್ಯದರ್ಶಿ ಶೀತಲ್ ಎಂ.ಹಿರೇಮಠ ಸೂಚಿಸಿದ್ದಾರೆ. ಈ ಮೊದಲು ಜೂನ್ 30 ರಿಂದ ಜುಲೈ2 ರವರೆಗೆ ರಜೆ ಘೋಷಿಸಲಾಗಿತ್ತು. 

ಬಳಿಕ ಕೋವಿಡ್ ಹೆಚ್ಚಳದಿಂದಾಗಿ ಜುಲೈ 3ರಿಂದ 15ರವರಗೆ ರಜೆ ಮುಂದುವರೆಸಲಾಗಿತ್ತು. ಜುಲೈ 15ಕ್ಕೆ ರಜಾ ಅವಧಿ ಮುಗಿಯುವುದರಿಂದ ಜುಲೈ 16 ರಿಂದ ಕರ್ತವ್ಯಗಳು ಹಾಜರಾಗುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.

click me!