ಬತ್ತದ ಉತ್ಸಾಹ: ಮೊಮ್ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಜತೆ SSLC ಪರೀಕ್ಷೆ ಬರೆದ ಪೊಲೀಸ್

By Suvarna News  |  First Published Jul 3, 2020, 8:11 PM IST

ಉದ್ಯೋಗದಲ್ಲಿ ಬಡ್ತಿಗೋಸ್ಕರ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ ಆರ್ ಪಿ) ಹೆಡ್ ಕಾನ್ಸ್ ಟೇಬಲ್ ಒಬ್ಬರು 55 ನೇ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಅದರಲ್ಲೂ ಕೊರೋನಾ ಭೀತಿ ನಡುವೆಯೂ ಪರೀಕ್ಷೆ ಬರೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಕೋಲಾರ, (ಜುಲೈ.03): ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಎರಡಡು ಮಕ್ಕಳ ತಂದೆ, ಕೋರಮಂಗಲದ ಹೆಡ್ ಕಾನ್ಸ್ ಟೇಬಲ್ ಪ್ರೂವ್ ಮಾಡಿದ್ದಾರೆ.

ಹೌದು...ಕೋಲಾರದ ಮೂಲದ 55 ವರ್ಷದ  ಕೆ.ಎನ್. ಮಂಜುನಾಥ್, ಇಂದು (ಶುಕ್ರವಾರ) ಮೊಮ್ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಜೊತೆಗೆ ಕುಳಿತಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ.

Tap to resize

Latest Videos

undefined

ಅಂತೂ ವಿರೋಧದ ನಡುವೆ ಯಶಸ್ವಿಯಾಗಿ SSLC ಪರೀಕ್ಷೆ ಮುಗಿಸಿದ ಸರ್ಕಾರ: ಸುರೇಶ್ ಕುಮಾರ್ ಸರ್ದಾರ

ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ ಆರ್ ಪಿ) ಹೆಡ್ ಕಾನ್ಸ್ ಟೇಬಲ್ ಆಗಿ ಬೆಂಗಳೂರಿನ ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ರೆ,  ನಿವೃತ್ತಿಗೂ ಮುನ್ನ  ಸಬ್ ಇನ್ಸ್ ಪೆಕ್ಟರ್ ನಂತರ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಪಡೆಯಬೇಕೆಂಬ ಉದ್ದೇಶದಿಂದ
ಹೆಮಂಜುನಾಥ್, ಕೋಲಾರ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ  ಶುಕ್ರವಾರ ಕೊನೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರು.

ಮಂಜುನಾಥನ ಮನದಾಳದ ಮಾತು
ಪರೀಕ್ಷೆ ಮುಗಿದ ಬಳಿಕ ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿರುವ ಮಂಜುನಾಥ್, 1993ರಲ್ಲಿ ಶಿವಮೊಗ್ಗದಲ್ಲಿ ಕೆಎಸ್ ಆರ್ ಪಿಗೆ ಸೇರಿಕೊಂಡಿದ್ದು, ನಂತರ ಬೆಂಗಳೂರಿಗೆ ವರ್ಗಾವಣೆಯಾಯಿತು. ಬಳಿಕ ಸೇವೆಯ ಆಧಾರದ ಮೇಲೆ ಹೆಡ್ ಕಾನ್ಸ್ ಟೇಬಲ್ ಆಗಿ ಬಡ್ತಿ ಪಡೆದಿದ್ದೇನೆ. ಆದ್ರೆ, ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿಗೆ ವಿದ್ಯಾರ್ಹತೆ ತೊಂದರೆಯಾಗಿದ್ದರಿಂದ ಎಸ್‌ಎಸ್‌ಎಲ್‌ಸಿ  ಪರೀಕ್ಷೆ ಬರೆಯಲು ನಿರ್ಧರಿಸಿದ್ದಾಗಿ ಹೇಳಿದರು.

ಕೊರೋನಾ ನಡುವೆಯೂ ಯಶಸ್ವಿಯಾಗಿ ಮುಗಿದ SSLC ಪರೀಕ್ಷೆ: ಋಣ ತೀರಿಸಿದ ಸುರೇಶ್ ಕುಮಾರ್

ನನ್ನ ಮಕ್ಕಳು ಮತ್ತು ಕೆಲವು ಸ್ನೇಹಿತರು ಪರೀಕ್ಷೆಗಳಿಗೆ ಸಿದ್ಧರಾಗಲು ನನಗೆ ಸಹಾಯ ಮಾಡಿದ್ದು, ನಾನು ಐದು ಪತ್ರಿಕೆಗಳನ್ನ ಚೆನ್ನಾಗಿ ಬರೆದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಇವರ ಇಬ್ಬರು ಮಕ್ಕಳಲ್ಲಿ ಓರ್ವ ಮಗ ಬೆಂಗಳೂರಿನ MNC ಕಂಪನಿಯಲ್ಲಿ ಅನಿಮೇಷನ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ರೆ, ಇತ್ತ ನಿವೃತ್ತಿಗೆ ಕೆಲವೇ ವರ್ಷಗಳು ಬಾಕಿ ಇರುವಾಗ ಬಡ್ತಿಗಾಗಿ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ. ಅದರಲ್ಲೂ ಕೊರೋನಾ ಭೀತಿ ನಡುವೆ ಪರೀಕ್ಷೆಗೆ ಹಾಜರಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನೇ ಆಗಲೀ ಮಂಜುನಾಥ್ ಅವರು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಅವರ ಕಂಡಿರುವ ಕನಸು ಸಬ್ ಇನ್ಸ್ ಪೆಕ್ಟರ್ ಹುದ್ದೆ ಸಿಗಲಿ ಎಂದು ಹಾರೈಸೋಣ

click me!