ಕೇವಲ ಹುಡುಗರು ಮಾತ್ರ ಪ್ರೊಫೆಷನಲ್ ಫೋಟೋಗ್ರಾಫರ್ ಆಗಬಹುದು ಎಂದು ನೀವು ಅಂದುಕೊಂಡಿದ್ದೀರಾ? ಹಾಗೇನೂ ಇಲ್ಲ. ಡಾಕ್ಟರ್, ಎಂಜಿನಿಯರ್, ಟೀಚರ್ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಹೇಗೆ ಪರಿಣತಿ ಪಡೆದಿದ್ದಾರೋ ಅದೇ ರೀತಿ ಮಹಿಳೆಯರೂ ಫೋಟೋಗ್ರಾಫರ್ ಆಗಬಹುದು. ಹೇಗೆ?
ಭಾವನೆಗಳನ್ನು ಎಕ್ಸ್‌ಪ್ರೆಸ್ ಮಾಡಲು ಹಲವು ರೀತಿಗಳಿವೆ. ಅದರಲ್ಲೊಂದು ಅತ್ಯುತ್ತಮ ಮಾರ್ಗ ಎಂದರೆ ಫೋಟೋಗ್ರಫಿ. ಫೋಟೋಗ್ರಫಿ ಕೇವಲ ಹವ್ಯಾಸವಾಗಿ ಮಾತ್ರ ನೀವು ತೊಡಗಿಸಿಕೊಳ್ಳಬೇಕೆಂದೇನೂ ಇಲ್ಲ, ಇದರಲ್ಲಿ ಉತ್ತಮ ಕರಿಯರ್ ಕೂಡ ಇದೆ. ಜೊತೆಗೆ ಇದು ತುಂಬಾನೇ ಸ್ಕೋಪ್ ಇರುವ ಫೀಲ್ಡ್.
ಶೈಕ್ಷಣಿಕ ಅರ್ಹತೆ
ಫೋಟೋಗ್ರಫಿ ಕೋರ್ಸ್ ಮಾಡಲು ಹತ್ತನೇ ತರಗತಿ ಅಥವಾ ಪಿಯುಸಿ ಆಗಿರಬೇಕು. ಈ ಕೋರ್ಸ್‌ನಲ್ಲಿ ಫೈನ್ ಆರ್ಟ್ಸ್‌ನಲ್ಲಿ ಇದನ್ನು ಒಂದು ಬ್ಯಾಚುಲರ್ ಡಿಗ್ರಿಯಾಗಿ ಆಫರ್ ನೀಡಲಾಗುತ್ತದೆ. ಕೆಲವು ಕಾಲೇಜುಗಳಲ್ಲಿ ಡಿಗ್ರಿ ಕೋರ್ಸ್ ಜೊತೆ ಪಾರ್ಟ್ ಟೈಮ್ ಆಗಿಯೂ ಇದನ್ನು ಮಾಡಬಹುದು. ಇನ್ನು ಕೆಲವು ಕಾಲೇಜುಗಳಲ್ಲಿ ಫೋಟೋಗ್ರಫಿಯಲ್ಲಿ ಮೂರು ವರ್ಷದ ಕೋರ್ಸ್ ಇರುತ್ತದೆ.
ವಿಶೇಷ ಅರ್ಹತೆಗಳು: ಫೋಟೋಗ್ರಫಿಯನ್ನು ಕರಿಯರ್ ಆಗಿ ಆಯ್ಕೆ ಮಾಡಲು ಕಲಾತ್ಮಕತೆ, ಟೆಕ್ನಿಕಲ್ ಜ್ಞಾನ, ನೋಡುವ ದೃಷ್ಟಿ ವಿಭಿನ್ನವಾಗಿರಬೇಕು. ದೊಡ್ಡ ಫೋಟೋಗ್ರಾಫರ್ ಆಗಲು ಶ್ರಮ ಮತ್ತು ಸಂಯಮ ಅಗತ್ಯವಿದೆ. ಇದಲ್ಲದೆ ಇಂಟೆರ್ ಪರ್ಸನಲ್ ಗುಣವೂ ಇರಬೇಕು. ಹಾಗಿದ್ದರೆ ಮಾತ್ರ ಉತ್ತಮ ಕರಿಯರ್ ನಿಮ್ಮದಾಗುತ್ತದೆ.
ರಜೆಯಲ್ಲಿ ಮಾಡಬಹುದಾದ ಪಾರ್ಟ್ ಟೈಮ್ ಉದ್ಯೋಗಗಳು
ಫೋಟೋಗ್ರಫಿ ಕೋರ್ಸ್ ನೀಡುವ ಕಾಲೇಜುಗಳು :
ಜಾಮಿಯಾ ಮಿಲಿಯಾ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ರಿಸರ್ಚ್ ಸೆಂಟರ್, ನವ ದೆಹಲಿ
ಫಿಲಂ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್, ಪುಣೆ
ಏಷಿಯನ್ ಅಕಾಡೆಮಿ ಆಫ್ ಫಿಲಂ ಆ್ಯಂಡ್ ಟೆಲಿವಿಷನ್ ದೆಹಲಿ
ಜೆ. ಜೆ. ಸ್ಕೂಲ್ ಆಫ್ ಅಪ್ಲೈಡ್ ಆರ್ಟ್, ಮುಂಬೈ