ಸಂದರ್ಶನಕ್ಕೆ ಹೊರಡುವಾಗ ಏನೋ ಭಯ ಇದ್ದೇ ಇರುತ್ತದೆ. ಹೇಗೆ ಸಂದರ್ಶನ ಎದುರಿಸುವುದು, ಹೇಗೆ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಉತ್ತರಿಸುವುದು...ಹೀಗೆ ಹಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಷ್ಟು ಮಾತ್ರವಲ್ಲ ಅದಕ್ಕೂ ಮಿಗಿಲಾಗಿ ಇನ್ನಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವು ಯಾವುವು?
ಸಂದರ್ಶನಕ್ಕೆ ಹೋಗೋದು ಅಂದರೆ ಸುಲಭವಲ್ಲ. ಅದಕ್ಕೆ ಪೂರ್ಣ ಪ್ರಮಾಣದ ತಯಾರಿ ನಡೆದಿರಬೇಕು. ಆದರೆ ಆ ಬಗ್ಗೆ ಅತೀ ಆತ್ಮ ವಿಶ್ವಾಸವಿದ್ದರೆ ನಿಮಗೇ ಆಪತ್ತು. ನನಗೆಲ್ಲಾ ಗೊತ್ತಿದೆ, ಏನೇ ಪ್ರಶ್ನೆಗೆ ಉತ್ತರ ನೀಡಬಹುದು ಎಂದು ವಿಶ್ವಾಸವಿದ್ದರೆ ಸಾಕು, ಆದರೆ ಅತಿಯಾದ ವಿಶ್ವಾಸ ಇದ್ದರೆ ನೀವು ಎಡವಬಹುದು. ಇದರಿಂದ ಉದ್ಯೋಗ ಕೈ ತಪ್ಪಬಹುದು. ಆದುದರಿಂದ ಕೆಲವೊಂದು ವಿಷಯಗಳನ್ನು ನೀವು ಅವಾಯ್ಡ್ ಮಾಡಲೇಬೇಕು...
ಸಂದರ್ಶನಕ್ಕೆ ತಡವಾಗಿ ಹೊರಡೋದು
ಸಂದರ್ಶನಕ್ಕೆ ಯಾವತ್ತೂ ಲೇಟ್ ಆಗಿ ಹೋಗಲೇಬೇಡಿ. ಅರ್ಧ ಗಂಟೆ ಮೊದಲೇ ಅಲ್ಲಿದ್ದರೆ ಉತ್ತಮ. ಸಮಯದ ಮಹತ್ವವೂ ಇಂಟರ್‌ವ್ಯೂ ಸಮಯದಲ್ಲಿ ಇಂಪಾರ್ಟೆಂಟ್.
ಉದ್ಯೋಗ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹೈಜಿನ್
ನಿಮ್ಮ ಬಾಯಿಯ ಹೈಜಿನ್ ಕೂಡ ಮುಖ್ಯ. ಮಾತಾಡುವ ಸಮಯದಲ್ಲಿ ನಿಮ್ಮ ಬಾಯಿಯಿಂದ ದುರ್ವಾಸನೆ ಅಥವಾ ಸ್ಮೋಕಿಂಗ್‌ನ ವಾಸನೆ ಬಾರದಂತೆ ನೋಡಿಕೊಳ್ಳಿ.
undefined
ನಡವಳಿಕೆ
ನೀವು ಬಳಸುವ ಪದಗಳು ಗೌರವಯುತವಾಗಿರಲಿ. ಕಠೋರವಾಗಿ ಅಥವಾ ಅತ್ಯಂತ ಸಲುಗೆಯಿಂದ ಮಾತನಾಡಬೇಡಿ.
ಮೊಬೈಲ್‌ನಿಂದ ದೂರ
ಇಂಟರ್‌ವ್ಯೂ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಆದುದರಿಂದ ಇಂಟರ್‌ವ್ಯೂಗೆ ಹೋಗೋ ಮುನ್ನ ಮೊಬೈಲ್ ಸ್ವಿಚ್‌ಆಫ್ ಅಥವಾ ಸೈಲೆಂಟ್ ಮೋಡ್‌ನಲ್ಲಿಡಿ. ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬೇಡಿ.
ಓವರ್ ಕಾನ್ಫಿಡೆಂಟ್
ಕಾನ್ಫಿಡೆಂಟ್ ಆಗಿರಿ ಆದರೆ ಓವರ್ ಕಾನ್ಫಿಡೆಂಟ್ ಒಳ್ಳೆಯದಲ್ಲ. ನಿಮಗೆ ಕೆಲಸ ಬೇಕಾಗಿದೆ ನಿಜ. ಆದರೆ ಇಂಟರ್‌ವ್ಯೂ ಸಂದರ್ಭ ಆ ಕೆಲಸ ನನಗೇನಕೆ ಬೇಕು ಎಂದು ಹೇಳಬೇಡಿ. ಬದಲಾಗಿ ವೃತ್ತಿಪರತೆ ಕಾಯ್ದುಕೊಳ್ಳಿ.
ಪ್ರೊಫೆಷನಲ್ ಆಗಿರಿ
ಹಾಸ್ಯ ಪ್ರವೃತ್ತಿಯಿಂದ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂದು ಅಂದುಕೊಂಡರೆ ಅದು ತಪ್ಪು. ಇದರಿಂದ ನಿಮ್ಮ ಭವಿಷ್ಯ ಹಾಳಾಗೋದು ಖಂಡಿತಾ. ಆದುದರಿಂದ ಪ್ರೊಫೆಷನಲ್ ಆಗಿರಿ.
ಈ ದೇಶಗಳು ದುಡ್ಡು ಕೊಟ್ಟು ನಿಮ್ಮನ್ನು ಕರೆಯಿಸಿಕೊಳ್ಳುತ್ತವೆ
ಡ್ರೆಸ್ಸಿಂಗ್ ಸೆನ್ಸ್
ಸಂದರ್ಶನಕ್ಕೆ ತೆರಳುವಾಗ ಡ್ರೆಸ್ ಪರ್ಫೆಕ್ಟ್ ಆಗಿರುವುದು ಮುಖ್ಯ. ಈ ಸಂದರ್ಭದಲ್ಲಿ ಫಾರ್ಮಲ್ ಧರಿಸಿ. ಆದರೆ ಹೆಚ್ಚು ಹೆವಿಯಾಗಿರುವ ಡ್ರೆಸ್ ಧರಿಸಬೇಡಿ.
ಮಾಹಿತಿ ನಿಖರವಾಗಿರಲಿ
ಸಂದರ್ಶನದ ಸಮಯದಲ್ಲಿ ನೀವು ಎಷ್ಟು ಪ್ರಶ್ನೆ ಕೇಳಿದ್ದಾರೆಯೋ ಅಷ್ಟಕ್ಕೇ ಮಾತ್ರ ಉತ್ತರಿಸಿ. ನೀವಾಗಿಯೇ ಏನೇನೋ ಉತ್ತರ ನೀಡಿ ಅವರಿಗೆ ಅದು ಅಧಿಕಪ್ರಸಂಗ ಎನಿಸಬಹುದು. ಆದುದರಿಂದ ನಿಖರ ಉತ್ತರ ನೀಡಿ ಸಾಕು.
ಕೆಲವರೇಕೆ ಉದ್ಯೋಗದಲ್ಲಿ ಪೇಲ್ಯೂರ್ ಆಗ್ತಾರೆ?