ಎನ್‌ಐಟಿ ಪ್ರವೇಶಕ್ಕೆ 12 ನೇ ತರಗತಿಯಲ್ಲಿ ಶೇ.75 ರಷ್ಟು ಅಂಕ ಗಳಿಸಬೇಕಿಲ್ಲ: ಕೇಂದ್ರ

Kannadaprabha News   | Asianet News
Published : Jul 24, 2020, 01:53 PM IST
ಎನ್‌ಐಟಿ ಪ್ರವೇಶಕ್ಕೆ 12 ನೇ  ತರಗತಿಯಲ್ಲಿ ಶೇ.75 ರಷ್ಟು  ಅಂಕ ಗಳಿಸಬೇಕಿಲ್ಲ: ಕೇಂದ್ರ

ಸಾರಾಂಶ

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಎನ್‌ಐಟಿ (ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ)ಗಳಿಗೆ ಪ್ರವೇಶ ಮಾನದಂಡವನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಗುರುವಾರ ಪ್ರಕಟಿಸಿದೆ. 

ನವದೆಹಲಿ (ಜು. 24): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಎನ್‌ಐಟಿ (ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ)ಗಳಿಗೆ ಪ್ರವೇಶ ಮಾನದಂಡವನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಗುರುವಾರ ಪ್ರಕಟಿಸಿದೆ.

ಹೀಗಾಗಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಗೆ ಆಯ್ಕೆ ಆದ ಅಭ್ಯರ್ಥಿಗಳು ಎನ್‌ಐಟಿಗಳಲ್ಲಿ ಸ್ಥಾನ ಪಡೆಯಲು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಸಾಕು. ವಿದ್ಯಾರ್ಥಿಗಳು ಗಳಿಸಿದ ಅಂಕವನ್ನು ಪರಿಗಣಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ಮುನ್ನ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಜೆಇಇಗೆ ಅರ್ಹತೆ ಪಡೆಯುವುದರ ಜೊತೆಗೆ 12ನೇ ತರಗತಿಯಲ್ಲಿ ಕನಿಷ್ಠ ಶೇ.75ರಷ್ಟುಅಂಕ ಪಡೆದಿರಬೇಕು ಎಂದು ತಿಳಿಸಲಾಗಿತ್ತು.

ಶಾಸಕರೇ, ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಅಭಿವೃದ್ಧಿಪಡಿಸಿ

PREV
click me!

Recommended Stories

ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್