ದ್ವಿತೀಯ PUC ಪರೀಕ್ಷೆ: ಅಕ್ರಮ ತಡೆಗಟ್ಟಲು ಹೊಸ ರೂಲ್ಸ್ , ಹುಷಾರಾಗಿರಿ...!

Published : Feb 23, 2020, 08:41 PM IST
ದ್ವಿತೀಯ PUC ಪರೀಕ್ಷೆ: ಅಕ್ರಮ ತಡೆಗಟ್ಟಲು ಹೊಸ ರೂಲ್ಸ್ , ಹುಷಾರಾಗಿರಿ...!

ಸಾರಾಂಶ

 ಸರ್ಕಾರಕ್ಕೆ ಪಬ್ಲಿಕ್ ಪರೀಕ್ಷೆಗಳನ್ನ ನಡೆಸೊದು ದೊಡ್ಡ ಸವಾಲಾಗಿದೆಯಾ ಅನ್ನೋ ಪ್ರಶ್ನೆ ಮೂಡುತ್ತಿದೆ. ಮತ್ತೊಂದೆಡೆ ಪರೀಕ್ಷೆಗಳಲ್ಲಿ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಈ ಅಕ್ರಮಗಳನ್ನ ತಡೆಗಟ್ಟಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಕಟ್ಟು ನಿಟ್ಟಿನ ಕ್ರಮ ಜರುಗಿಸಿದೆ.

ಬೆಂಗಳೂರು, [ಫೆ.23]: ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 4 ರಿಂದ ಪಿಯುಸಿ ಪರೀಕ್ಷೆಗಳು ಶುರುವಾಗಲಿವೆ.

2020-201ನೇ ಸಾಲಿನ ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ

ಇದಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದು, ಪರೀಕ್ಷೆಯಲ್ಲಿ ಆಗುವ ಅಕ್ರಮಗಳನ್ನ ತಡೆಗಟ್ಟಲು ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಈ ಬಗ್ಗೆ 11 ಅಂಶಗಳ ನಿಯಮಗಳನ್ನ ಜಾರಿಗೆ ತಂದು ಸುತ್ತೋಲೆ ಹೊರಡಿಸಿದೆ.

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಹೀಗಿದೆ ನೋಡಿ: ನೀವೂ ಒಂದ್ಸಲ ಚೆಕ್ ಮಾಡಿ

ಪರೀಕ್ಷಾ ಅಕ್ರಮದಲ್ಲಿ ತೊಡಗಿದವರಿಗೆ ನಿಯಮದ ಪ್ರಕಾರ 5 ವರ್ಷ ಸೆರೆವಾಸ ಮತ್ತು 5 ಲಕ್ಷ ದಂಡ ವಿಧಿಸುವ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ಹೊರಡಿಸಿದೆ.

SSLC, PUC ಪರೀಕ್ಷೆ: ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ

ಇಷ್ಟೇ ಅಲ್ಲದೇ  ಪಿಯಸಿ ಬೋರ್ಡ್ ಹಲವು ಭದ್ರತಾ ನಿಯಮಗಳನ್ನ ಜಾರಿಗೆ ತಂದಿವೆ. ಈ ಸಂಬಂಧ ಪಿಯುಸಿ ಬೋರ್ಡ್ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅವು ಈ ಕೆಳಗಿನಂತಿವೆ.

ಪ್ರಮುಖ ನಿಯಮಗಳು
* ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಮೊಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ.
* ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅನುಮತಿ.
* ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳಿಗೂ ಗುರುತಿನ ಚೀಟಿ ಧರಿಸುವುದು.
*ಪರೀಕ್ಷಾ ಕಾರ್ಯಗಳಿಗೆ ಅಡ್ಡಿ ಮಾಡಿದ್ರೆ ಪೊಲೀಸ್ ಠಾಣೆಯಲ್ಲಿ FIR.
* ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧ ಪ್ರದೇಶ.
* ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ [ಇ-ಕ್ಯಾಮರ, ಲ್ಯಾಪ್ ಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನ ತರುವುದನ್ನ ನಿಷೇಧಿಸಲಾಗಿದೆ.
* ಯಾವುದೇ ವಿದ್ಯುನ್ಮಾನ ಉಪಕರಣಗಳನ್ನ ಹೊಂದುವುದು ಶಿಕ್ಷಾರ್ಹ ಅಪರಾಧ
* ನಕಲು ಮಾಡೋದು, ನಕಲಿಗೆ ಸಹಕಾರ, ಬದಲಿ ವ್ಯಕ್ತಿ ಪರೀಕ್ಷೆ ಬರೆಯೋದು, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ಮೊಬೈಲ್ ಬಳಕೆಗಳು ಪರೀಕ್ಷಾ ಅಕ್ರಮ ಅಂತ ಪರಿಗಣನೆ
* ಕೊಠಡಿ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು ಅಕ್ರಮ ಎಸಗಿದರೆ ಕಾನೂನು ಅನ್ವಯ ಕ್ರಮಕ್ಕೆ ಸೂಚನೆ
* ಸಾಮಾನ್ಯ ವಾಚ್ ಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಧರಿಸಲು ಅವಕಾಶ
*ಪರೀಕ್ಷೆ ಅಕ್ರಮಗಳಿಗೆ ಶಿಕ್ಷೆ[ಮೇಲ್ಕಂಡ ಅಪರಾಧಗಳಲ್ಲಿ ಭಾಗಿಯಾದಲ್ಲಿ 5 ವರ್ಷಗಳ ಕಾಲ ಸೆರೆವಾಸ ಅಥವಾ 5 ಲಕ್ಷ ರೂ ದಂಡ ಅಥವಾ ಎರಡನ್ನೂ ವಿಧಿಸಬಹುದು. 

PREV
click me!

Recommended Stories

ತಲೆಮೇಲೆ ಸೌದೆ ಹೊರೆ ಹೊತ್ತರೂ, ಬ್ರಿಟೀಷರು ನಾಚುವಂತಹ ಇಂಗ್ಲೀಷ್ ಮಾತು! ಮಹಿಳೆ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ!
ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿಯಾದ ಮಂಗಳೂರಿನ 15200 ಅಭ್ಯರ್ಥಿಗಳಲ್ಲಿ ಕೇವಲ 8.45%ಗೆ ಮಾತ್ರ ಜಾಬ್!