ವೃತ್ತಿಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಯೇ ಸೋಪಾನ: ಈ ತರಬೇತಿಯಲ್ಲಿ ತೊಡಿಸಿಕೊಳ್ಳಿ ನಿಮ್ಮನ್ನ

Published : Feb 19, 2020, 03:14 PM IST
ವೃತ್ತಿಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಯೇ ಸೋಪಾನ: ಈ ತರಬೇತಿಯಲ್ಲಿ ತೊಡಿಸಿಕೊಳ್ಳಿ ನಿಮ್ಮನ್ನ

ಸಾರಾಂಶ

ಇಂದು ಬಹುಪಾಲು ಕೋರ್ಸುಗಳಿಗೆ ಹಾಗೂ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ. ನಮ್ಮ ವೃತ್ತಿಬದುಕಿಗೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಸೋಪಾನ. ಹಾಗಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಅತ್ಯಗತ್ಯ. ಹಾಗಾಗಿ IBPS ಪರೀಕ್ಷಾ ಪೂರ್ವ ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಿ.

ಶಿವಮೊಗ್ಗ, (ಫೆ.19):  ಶಿವಮೊಗ್ಗ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಐಬಿಪಿಎಸ್ ನೇಮಕಾತಿಗಾಗಿ ಪರೀಕ್ಷಾ ಪೂರ್ವ ಉಚಿತ ತರಬೇತಿ ಏರ್ಪಡಿಸಿದೆ.

ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ ಐಬಿಪಿಎಸ್ (IBPS) ಮೂಲಕ ನಡೆಸುವ ಬ್ಯಾಕಿಂಗ್ ಪ್ರೊಬೇಷನರಿ ಆಫೀಸರ್ಸ್ ಮತ್ತು ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷಾ ಪೂರ್ವ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಗ್ರಾಮಲೆಕ್ಕಿಗ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಮಾ.02 ರಂದು ಸಾಗರ ರಸ್ತೆಯ ಗುತ್ಯಪ್ಪ ಕಾಲೋನಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ.

ಆಸಕ್ತ ಪದವೀಧರರು ಖುದ್ದಾಗಿ ತಮ್ಮ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವುದು ಅಥವಾ www.kaushalkar.com ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಿಕೊಳ್ಳುವುದು.

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಬೃಹತ್ ಉದ್ಯೋಗ ಮೇಳ

ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ, ದೂರವಾಣಿ.ಸಂಖ್ಯೆ: 08182-255293 / 8762778408/ 9535312531 ಗಳನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

PREV
click me!

Recommended Stories

ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ